ಕಿನ್ನಿಗೋಳಿ ಪಟ್ಟಣ ಪಂಚಾಯಿತಿ: ವಿವಿಧ ಯೋಜನೆಗಳ ಅನುದಾನ ವಿತರಣೆ

KannadaprabhaNewsNetwork |  
Published : Jun 12, 2025, 01:07 AM IST
ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ವಿತರಣಾ ಕಾರ್ಯಕ್ರಮ  | Kannada Prabha

ಸಾರಾಂಶ

ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ 2024-25 ರ ಸಾಲಿನ ಎಸ್‌ಎಫ್‌ಸಿ ಅನುದಾನದಲ್ಲಿ ಪರಿಶಿಷ್ಟ ಜಾತಿ/ ಪಂಗಡದ ಫಲಾನುಭವಿಗಳಿಗೆ ವಿವಿಧ ಅನುದಾನ ವಿತರಣೆ ಸಮಾರಂಭ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಲ್ಕಿಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯಾವುದೇ ರಾಜಕೀಯ ಇಲ್ಲ. ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯನ್ನು ಮಾದರಿ ಪಟ್ಟಣ ಪಂಚಾಯಿತಿ ಮಾಡುವ ನಿಟ್ಟಿನಲ್ಲಿ ಎಲ್ಲರು ಶ್ರಮವಹಿಸಬೇಕೆಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ 2024-25 ರ ಸಾಲಿನ ಎಸ್‌ಎಫ್‌ಸಿ ಅನುದಾನದಲ್ಲಿ ಪರಿಶಿಷ್ಟ ಜಾತಿ/ ಪಂಗಡದ ಫಲಾನುಭವಿಗಳಿಗೆ ಟೈಲರಿಂಗ್ ಮಿಷನ್ ವಿತರಣೆ, ಹಸಿ ಕಸ ಒಣ ಕಸವನ್ನು ವಿಂಗಡಿಸಿ ನೀಡಲು ಸಾರ್ವಜನಿಕರಿಗೆ ಡಸ್ಟ್‌ ಬಿನ್ ವಿತರಣೆ, ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆಗೆ ಬ್ಯಾಕ್ ಲೋಡರ್ ಜೆಸಿಬಿ ಹಾಗೂ 2 ಆಟೋ ಟಿಪ್ಪರ್ ವಾಹನಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹೊಸ ಪ್ಲಾಟ್, ಮನೆ ನಿರ್ಮಾಣ ಸಂದರ್ಭದಲ್ಲಿ ಎಸ್‌ಟಿಪಿ ಪ್ಲಾನ್ ಮಾಡಿಸಿ ವ್ಯವಸ್ಥೆ ಮಾಡಿ ಪರವಾನಗಿ ನೀಡಬೇಕು ಹಾಗೂ ದೊಡ್ಡ ಕಟ್ಟಡ ನಿರ್ಮಾಣ ಮಾಡುವುದಾದರೆ ನನ್ನ ಗಮನಕ್ಕೆ ತನ್ನಿ. ಮತ್ತೆ ತೊಂದರೆ ಆಗುವುದು ಬೇಡ ಎಂದರು.ಕಿನ್ನಿಗೋಳಿ. ಮೂಲ್ಕಿ ಮೂಡುಬಿದಿರೆ, ಬಜಪೆಯಲ್ಲಿ ದ್ರವ ತ್ಯಾಜ್ಯ , ಘನ ತ್ಯಾಜ್ಯದ ಸಮಸ್ಯೆ ಇದ್ದು ಇದಕ್ಕೆ ಸಮಗ್ರ ಯೋಜನೆ ಮಾಡಬೇಕಾಗಿದೆಯೆಂದು ಹೇಳಿದರು. ಈ ಸಂದರ್ಭ ಮೂಲ್ಕಿ ತಾಲೂಕು ತಹಸೀಲ್ದಾರ್‌ ಶ್ರೀಧರ ಎಸ್ ಮುಂದಲಮನಿ , ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಯಶಂಕರ ಪ್ರಸಾದ್, ಈಶ್ವರ್ ಕಟೀಲ್ , ಮಾಜಿ ಅಧ್ಯಕ್ಷ ಸಂಜೀವ ಮಡಿವಾಳ, ಫಿಲೋಮಿನ ಸಿಕ್ವೇರಾ, ಸರೋಜಿನಿ ಗುಜರನ್ , ಲೋಕಯ್ಯ ಸಾಲ್ಯಾನ್ ಕೊಂಡೇಲ, ದೇವ ಪ್ರಸಾದ್ ಪುನರೂರು , ಸ್ಟೇನಿ ಪಿಂಟೋ, ಪ್ರಕಾಶ್ ಆಚಾರ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ