ರಾಜ್ಯ ನೀರಾವರಿ ನಿಗಮದಿಂದ ಸರ್ವೋಚ್ಛ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಮೋಹನ ಕಾತರಕಿ ನೇತೃತ್ವದ ವಕೀಲರ ತಂಡ ಬುಧವಾರ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ,
ರಾಜ್ಯ ನೀರಾವರಿ ನಿಗಮದಿಂದ ಸರ್ವೋಚ್ಛ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಮೋಹನ ಕಾತರಿಕಿ ನೇತೃತ್ವದ ವಕೀಲರ ತಂಡ ಬುಧವಾರ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ರಾಜ್ಯ ನೀರಾವರಿ ಅಧಿಕಾರಿಗಳು ಉಪಸ್ಥಿತರಿದ್ದು, ನೀರಿನ ಪ್ರಮಾಣ, ಸಾಧಕ-ಬಾಧಕಗಳ ಕುರಿತು ವಿಷಯ ಮಂಡಿಸಿದರು.
ಆಲಮಟ್ಟಿಯಲ್ಲಿ ೫೨೪.೨೫ ಮೀ. ಎತ್ತರ ಮಾಡುವಲ್ಲಿ ವಿಚಾರಣೆಯಲ್ಲಿರುವ ಕಾರಣ, ನೀರು ಸಂಗ್ರಹದ ನಂತರ ಮಹಾರಾಷ್ಟ್ರ ಹಾಗು ರಾಜ್ಯಗಳಲ್ಲಿನ ಕೃಷ್ಣಾ ಜಲಾನಯನ ಪ್ರದೇಶದಲ್ಲಿನ ಮುಳುಗಡೆ ಕುರಿತು ಸಮಗ್ರ ಮಾಹಿತಿಯೊಂದಿಗೆ ಬಹುತೇಕ ಕೃಷ್ಣಾ ನದಿಗಳ ಬ್ಯಾರೇಜ್‌ಗಳ ವೀಕ್ಷಣೆಯಲ್ಲಿ ತೊಡಗಿದ್ದರು.
ತಂಡದ ನೇತೃತ್ವ ವಹಿಸಿರುವ ಹಿರಿಯ ವಕೀಲ ಮೋಹನ ಕಾತರಕಿ ಸುದ್ದಿಗಾರರೊಂದಿಗೆ ಮಾತನಾಡಿ, ಕೃಷ್ಣಾ ನದಿ ಪ್ರವಾಹದ ಸಂದರ್ಭ ಹಾಗೂ ನೀರು ಶೇಖರಣೆ ಕುರಿತಾದ ಮಾಹಿತಿಗಾಗಿ ಭೆಟ್ಟಿ ನೀಡಿ ಬ್ಯಾರೇಜ್ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭ ನಿಗಮದ ಮುಖ್ಯ ಕಾರ್ಯನಿರ್ವಾಹಕ ಬಿ.ಆರ್. ನಂದೀಶ, ವ್ಯವಸ್ಥಾಪಕ ಕಾರ್ಯನಿರ್ವಾಹಕ ಎಸ್.ಸಿ. ರರ್ಮೇಂದ್ರ, ವಿ.ಎನ್. ರಘುಪತಿ, ಅನೀಲಕುಮಾರ, ಎಂ.ಎಸ್. ಮೋಹನ, ಹಿಪ್ಪರಗಿ ಸಹಾಯಕ ಅಭಿಯಂತರ ಎಂ.ಪಿ. ಶಿವಮೂರ್ತಿ, ಬಸವರಾಜ ಮಾಳಿ ಸೇರಿದಂತೆ ಅನೇಕರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.