ಪುಣ್ಯಸ್ಮರಣೆ । ಬಸವರಾಜ ದೇಶೀಕೇಂದ್ರ ಸ್ವಾಮೀಜಿ ನೆನಪು
ಇಂದಿನ ಸಮಾಜದಲ್ಲಿ ಅದರಲ್ಲಿಯೂ ನಮ್ಮ ರಾಜ್ಯದ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಿದ ಮಠಗಳು, ಖಾಸಗಿ ವಿದ್ಯಾ ಸಂಸ್ಥೆಗಳು, ರಾಜ್ಯ ಸರ್ಕಾರ ಸಮಾನತೆಯಲ್ಲಿ ಕೊಡುಗೆ ನೀಡುತ್ತ ಬಂದಿದೆ. ನಮ್ಮ ರಾಜ್ಯದಲ್ಲಿ ಮಠಾಧೀಶರು ಶೈಕ್ಷಣಿಕವಾಗಿ ತ್ಯಾಗ- ಸೇವೆ ನೀಡಿದ ಎಲ್ಲಾ ಧರ್ಮದ ಮಠಾಧೀಶರ ಕೊಡುಗೆ ಇದೆ ಎಂದು ತುಮಕೂರಿನ ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಡಾ.ಸಿದ್ಧಲಿಂಗ ಮಹಾ ಸ್ವಾಮೀಜಿ ತಿಳಿಸಿದರು.
ನಮ್ಮ ರಾಜ್ಯದಲ್ಲಿ ಮಠಾಧೀಶರು ಶೈಕ್ಷಣಿಕವಾಗಿ ತ್ಯಾಗ- ಸೇವೆ ನೀಡಿದ ಎಲ್ಲಾ ಧರ್ಮದ ಮಠಾಧೀಶರ ಕೊಡುಗೆ ಇದೆ ಎಂದು ತುಮಕೂರಿನ ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಡಾ.ಸಿದ್ಧಲಿಂಗ ಮಹಾ ಸ್ವಾಮೀಜಿ ತಿಳಿಸಿದರು. ಹಳೇಬೀಡಿನಲ್ಲಿ ಮಠಾಧೀಶರ ಸಮನ್ವಯ ಸಮಿತಿಯ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು. ಹಳೇಬೀಡು ಸಮೀಪ ಶ್ರೀ ಪುಷ್ಪಗಿರಿ ಕ್ಷೇತ್ರದಲ್ಲಿ ಬಸವರಾಜ ದೇಶೀಕೇಂದ್ರ ಮಹಾ ಸ್ವಾಮೀಜಿಯ ೨೦ನೇ ಪುಣ್ಯ ಸಂಸ್ಮರಣೆ ಹಾಗೂ ಮಠಾಧೀಶರ ಸಮನ್ವಯ ಸಮಿತಿಯ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿ, ‘೧೦೦ ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನದೊಂದಿಗೆ ದಾಸೋಹವನ್ನು ನೀಡುತ್ತ ಮಕ್ಕಳಿಗೆ ಪಾಠ, ಪ್ರವಚನ, ಸಂಸ್ಕಾರವನ್ನು ನೀಡುತ್ತ ಬಂದಿದ್ದಾರೆ. ಇಂದಿನ ಸಮಾಜದಲ್ಲಿ ತಂದೆ ತಾಯಿಯರಿಗೆ ಎಷ್ಟು ಮಹತ್ವ ನೀಡುತ್ತ ಬಂದಿದ್ದಾರೋ ಹಾಗೆ ಮಠದ ಬಗ್ಗೆಯೂ ಸಹ ಮಹತ್ವ ನೀಡಿದರೆ ಮಠಗಳು ಮುಂದೆ ಬರಲು ಸಾಧ್ಯ’ ಎಂದು ಹೇಳಿದರುಇಂದಿನ ಜನತೆಗೆ ಮಠದ ಬಗ್ಗೆ ತಾತ್ಸಾರ ಬಂದಿರುವುದು ಬೇಸರ ವಿಚಾರವಾಗಿದೆ, ಹಳೇಬೀಡು ಹಳೆ ಕ್ಷೇತ್ರವಾದರೆ, ಪುಷ್ಪಗಿರಿ ನೂತನ ಭೂ ಕೈಲಾಸವಾಗಿದೆ. ಇದರ ಹಿನ್ನೆಲೆಯಲ್ಲಿ ಎಷ್ಟು ಸಾಧನೆ ಇದೆ ಎಂಬುದು ಜನರ ಅರ್ಥಮಾಡಿಕೊಳ್ಳಬೇಕು. ನಾನು ಈ ಹಿಂದೆ ದೊಡ್ಡ ಶ್ರೀಗಳ ಜೊತೆಯಲ್ಲಿ ಬಂದಾಗ ದೊಡ್ಡ ಕಾಡು ಅದರ ಮಧ್ಯದಲ್ಲಿ ದೇವಾಲಯ ಇತ್ತು. ಈಗ ನೋಡಿದರೆ ಇದು ನಿಜವಾಗಲೂ ಭೂ ಕೈಲಾಸವಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುವಂತ ಸ್ಥಳವಾಗಿದೆ. ಇಲ್ಲಿ ಬಂದರೆ ಶಾಂತಿ ನೆಮ್ಮದಿ ಸಹ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕ್ಷೇತ್ರದ ಪುಷ್ಪಗಿರಿಯ ಸ್ವಾಮೀಜಿ ಸೋಮಶೇಖರ ಶಿವಾಚಾರ್, ವಿವಿಧ ಮಠಾಧೀಶರು, ಆಡಳಿತಾಧಿಕಾರಿ ಕುಮಾರಸ್ವಾಮಿ, ಗಂಗೂರು ಶಿವಕುಮಾರ್, ಹುಲ್ಲಿಕೆರೆ ರಾಜಶೇಖರಯ್ಯ ಹಾಜರಿದ್ದರು.
ಹಳೇಬೀಡಲ್ಲಿ ಮಠಾಧೀಶರ ಸಮನ್ವಯ ಸಮಿತಿಯ ಕಾರ್ಯಕ್ರಮವನ್ನು ಸಿದ್ಧಲಿಂಗ ಸ್ವಾಮಿ ಹಾಗೂ ಸೋಮಶೇಖರ ಶಿವಾಚಾರ್ಯರು, ವಿವಿಧ ಮಠಾಧೀಶರು ಉದ್ಘಾಟಿಸಿದರು .