ಪೆಯಿಂಟ್ ತುಂಬಿದ್ದ ವಾಹನ ಡಿವೈಡರ್‌ಗೆಡಿಕ್ಕಿಯಾಗಿ ಪಲ್ಟಿ: ರಸ್ತೇಲಿ ಚೆಲ್ಲಿದ ಪೆಯಿಂಟ್‌!

KannadaprabhaNewsNetwork |  
Published : May 10, 2026, 01:15 AM IST
 ಸಿಕೆಬಿ-7 ನಗರದ ಹೊರವಲಯ ರಾಷ್ಟ್ರೀಯ ಹೆದ್ದಾರಿ 64ರ ಡಿವೈನ್ ಸಿಟಿ ಹತ್ತಿರ  ಪೆಯಿಂಟ್ ತುಂಬಿ ಸಾಗುತಿದ್ದ ವಾಹನ ಡಿವೈಡರ್ ಗೆ ಡಿಕ್ಕಿಯಾಗಿ ಪೆಯಿಂಟ್ ಎಲ್ಲಾ ರಸ್ತೆಗೆ ಬಿದ್ದು ಇಡಿ ರಸ್ತೆ ವೈಟ್ ಪೆಯಿಂಟ್ ಬಳಿದ ಗೋಡೆಯಂತಾಗಿರುವುದು | Kannada Prabha

ಸಾರಾಂಶ

ಮಂಚೇನಹಳ್ಖಿ ಟೋಲ್ ಗೇಟ್ ಬಳಿಯಿಂದ ಚಿಕ್ಕಬಳ್ಳಾಪುರ ನಗರದ ರಾಘವೇಂದ್ರ ಟ್ರೇಡರ್ಸ್ ಗೆ ಸಾಗಾಟ ಮಾಡುತಿದ್ದ ಸುಮಾರು ಹತ್ತು ಲಕ್ಷ ಬೆಲೆಯ ಪೆಯಿಂಟ್ ಇದ್ದ ವಾಹನ ಡಿವೈನ್ ಸಿಟಿ ಹತ್ತಿರ ಬಂದಾಗ, ರಸ್ತೆ ಕಾಮಗಾರಿಗೆ ಹಾಕಿದ್ದ ತಡೆಗೋಡೆ ತಪ್ಪಿಸಲು ಹೋಗಿ ಬ್ರೇಕ್ ಹಾಕಿದ ರಭಸಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಎರಡು ಬಾರಿ ಪಲ್ಟಿಯಾಗಿದೆ. ಇದರಿಂದ ಪೆಯಿಂಟ್ ಎಲ್ಲಾ ರಸ್ತೆಗೆ ಬಿದ್ದು ಇಡಿ ರಸ್ತೆ ವೈಟ್ ಪೆಯಿಂಟ್ ಬಳಿದ ಗೋಡೆಯಂತಾಗಿದೆ.

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ಪೆಯಿಂಟ್ ಅಂಗಡಿಗೆ ಪೆಯಿಂಟ್ ಡಬ್ಬಗಳನ್ನು ತುಂಬಿಕೊಂಡು ಸಾಗುತಿದ್ದ ವಾಹನವೊಂದು ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಎರಡು ಸಲ ಪಲ್ಟಿ ಹೊಡೆದ ಪರಿಣಾಮ ಪೆಯಿಂಟ್ ಎಲ್ಲಾ ರಸ್ತೆಗೆ ಬಿದ್ದು ಹರಿದ ಘಟನೆ ನಗರದ ಹೊರವಲಯ ರಾಷ್ಟ್ರೀಯ ಹೆದ್ದಾರಿ 64ರ ಡಿವೈನ್ ಸಿಟಿ ಹತ್ತಿರ ಶನಿವಾರ ನಡೆದಿದೆ.

ಘಟನೆ ಬಳಿಕ ವಾಹನದ ಚಾಲಕ ಪರಾರಿಯಾಗಿದ್ದು ಮಾಲೀಕ ನಂದನ್‌ ಹಾಗೂ ಡೆಲಿವರಿ ಕಾರ್ಮಿಕನಿಗೆ ಸಣ್ಣಪುಟ್ಟಗಾಯಗಳಾಗಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಮಂಚೇನಹಳ್ಖಿ ಟೋಲ್ ಗೇಟ್ ಬಳಿಯಿಂದ ಚಿಕ್ಕಬಳ್ಳಾಪುರ ನಗರದ ರಾಘವೇಂದ್ರ ಟ್ರೇಡರ್ಸ್ ಗೆ ಸಾಗಾಟ ಮಾಡುತಿದ್ದ ಸುಮಾರು ಹತ್ತು ಲಕ್ಷ ಬೆಲೆಯ ಪೆಯಿಂಟ್ ಇದ್ದ ವಾಹನ ಡಿವೈನ್ ಸಿಟಿ ಹತ್ತಿರ ಬಂದಾಗ, ರಸ್ತೆ ಕಾಮಗಾರಿಗೆ ಹಾಕಿದ್ದ ತಡೆಗೋಡೆ ತಪ್ಪಿಸಲು ಹೋಗಿ ಬ್ರೇಕ್ ಹಾಕಿದ ರಭಸಕ್ಕೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಎರಡು ಬಾರಿ ಪಲ್ಟಿಯಾಗಿದೆ. ಇದರಿಂದ ಪೆಯಿಂಟ್ ಎಲ್ಲಾ ರಸ್ತೆಗೆ ಬಿದ್ದು ಇಡಿ ರಸ್ತೆ ವೈಟ್ ಪೆಯಿಂಟ್ ಬಳಿದ ಗೋಡೆಯಂತಾಗಿದೆ.

ಚಾಲಕನ ಅತಿವೇಗ ಹಾಗೂ ಅಜಾಕರೂಕತೆ ಚಾಲನೆಯೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಪೊಲೀಸರು ಕೂಡಲೆ ಜೆಸಿಬಿ ತರಿಸಿ ಅಪಘಾತವಾದ ವಾಹನವನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸಿಕೆಬಿ-7

ಪೆಯಿಂಟ್ ತುಂಬಿ ಸಾಗುತಿದ್ದ ವಾಹನ ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದ ಪರಿಣಾಮ ಪೆಯಿಂಟ್ ಎಲ್ಲಾ ರಸ್ತೆಗೆ ಬಿದ್ದು ಇಡಿ ರಸ್ತೆ ವೈಟ್ ಪೆಯಿಂಟ್ ಬಳಿದ ಗೋಡೆಯಂತಾಗಿ ಕಂಡು ಬಂದಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಪ್ರತಿಷ್ಠೆ ಬಿಟ್ಟು ಪಕ್ಷ ಸಂಘಟಿಸಿ: ನಿಖಿಲ್‌ ಕುಮಾರಸ್ವಾಮಿ
ನಂದಿನಿ ಉತ್ಪನ್ನಗಳು ಬಳಸಿದರೆ ರೈತರಿಗೆ ಅನುಕೂಲ