ತರೀಕೆರೆ: ಜಂಗಲ್ ವಿಹಾರಕ್ಕೆ ಹೊಂದಿಕೊಂಡಿರುವ ಲಕ್ಕವಳ್ಳಿ ಭದ್ರಾ ಅಭಯಾರಣ್ಯದ ಗಡಿ ಭಾಗದಲ್ಲಿ ಕಾಡಾನೆಯೊಂದು ಸಫಾರಿಗೆ ತೆರಳಿದ್ದ ಪ್ರವಾಸಿಗರ ಜೀಪಿನ ಮುಂದೆಯೇ ಪ್ರತ್ಯಕ್ಷವಾಗಿ ಜೀಪಿನ ಕಡೆಗೆ ಧಾವಿಸಿಬಂದು ಭೀತಿ ಹುಟ್ಟಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.ಭದ್ರಾ ಅಭಯಾರಣ್ಯದಲ್ಲಿ ಸಫಾರಿ ಪ್ರವಾಸಕ್ಕೆ ತೆರಳಿದ್ದ ಪ್ರವಾಸಿಗರಿಗೆ ಸೇತುವೆ ಮೇಲೆ ಕಾಣಿಸಿಕೊಂಡ ಕಾಡಾನೆ ಅದೇ ಮಾರ್ಗದಲ್ಲಿ ಬರುವಷ್ಟರಲ್ಲಿ ಜೀಪ್ ಕಂಡು ಆನೆ ಆಕಡೆಗೆ ಬಂದಿದೆ. ಆನೆ ಈ ಕಡೆಗೆ ಬರುವುದನ್ನು ಕಂಡು ಜೀಪಿನ ಚಾಲಕರು ತಕ್ಷಣವೇ ಹಿಂದಕ್ಕೆ ತಿರುಗಿಸಿ ಸುರಕ್ಷಿತ ಸ್ಥಳಕ್ಕೆ ಜೀಪನ್ನು ತೆಗೆದು ಕೊಂಡು ಹೋಗಿದ್ದಾರೆ ಯಾರಿಗೂ ಏನೂ ಆಪಾಯವಾಗಿಲ್ಲ.
ಟ್ರಂಚ್ ದಾಟಿ ಬಂದ ಕಾಡಾನೆಃಈ ಹಿಂದೆ ಆನೆಗಳು ದಾಟದಂತೆ ಭದ್ರಾ ಅರಣ್ಯದ ಗಡಿಯಲ್ಲಿ ನಿರ್ಮಿಸಿದ್ದ ಆನೆ ಕಂದಕ ಇತ್ತೀಚಿನ ಭಾರಿ ಮಳೆಯಿಂದ ಕೆಸರು ತುಂಬಿ ಅರ್ಧ ಮುಚ್ಚಿಕೊಂಡಿದ್ದರ ಪರಿಣಾಮ ಕಾಡಾನೆ ಮಣ್ಣನ್ನು ತಳ್ಳಿಕೊಂಡು ಆ ಭಾಗದಲ್ಲಿ ಕಾಣಿಸಿ ಕೊಂಡಿದೆ. ಕೂಡಲೇ ಲಕ್ಕವಳ್ಳಿ ವನ್ಯಜೀವಿ ವಲಯದ ಸ್ಥಳದಲ್ಲಿದ್ದ ಅರಣ್ಯ ಸಿಬ್ಬಂದಿ ಕಾಡಾನೆಯನ್ನು ಕಾಡಿಗೆ ಹಿಮ್ಮೆಟ್ಟಿಸಿದ್ದಾರೆ ಎಂದು ಲಕ್ಕವಳ್ಳಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಸಾಗರ್ ಮಾಹಿತಿ ನೀಡಿದ್ದಾರೆ.ಮುಚ್ಚಿಹೋಗಿರುವ ಕಂದಕವನ್ನು ಆನೆ ದಾಟದಂತೆ ಆಳವಾಗಿ ತೆಗೆಸಲಾಗಿದೆ. ಆನೆ ಚಲನವಲನಗಳನ್ನು ನಿಗಾ ವಹಿಸಿಲು ಸಿಬ್ಬಂದಿ ಸ್ಥಳದಲ್ಲಿದ್ದಾರೆ. ಈ ಬಗ್ಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಸಾಗರ್ ಹಾಗೂ ವಲಯ ಅರಣಯಾ ಧಿಕಾರಿ ಸಂತೋಷ್ ಸೂರಿಮಠ್ ಮೇಲ್ವಿಚಾರಣೆ ವಹಿಸಿದ್ದಾರೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಸಾಗರ್ ತಿಳಿಸಿದ್ದಾರೆ.
ಸೇತುವೆ ಮೇಲೆ ಕಾಡಾನೆ ಧಾವಿಸಿ ಬರುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. -28ಕೆಟಿಆರ್.ಕೆ.10ಃ ಸಮೀಪದ ಭದ್ರಾ ಅಭಯಾರಣ್ಯದಲ್ಲಿ ಆನೆಗಳು ಗಡಿ ದಾಟದಂತೆ ಆನೆ ಕಂದಕವನ್ನು ಆಳವಾಗಿ ತೆಗೆಸುತ್ತಿರುವುದು.