ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ
ಪಟ್ಟಣದ ಜ್ಞಾನ ಭವನದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದಕ್ಕೆಲ್ಲ ಪ್ರಯತ್ನದ ಫಲವೇ ಕಾರಣ ಎಂದರು.
ಹೆಣ್ಣು ಮಕ್ಕಳು ಯಾರ ಬಳಿಯೂ, ಯಾವುದಕ್ಕೂ ಕೈಚಾಚಬೇಕಾಗಿಲ್ಲ. ನಮ್ಮ ಹಕ್ಕನ್ನು ನಾವು ಪ್ರಶ್ನೆ ಮಾಡಿ ಪಡೆದುಕೊಳ್ಳುವ ಹೋರಾಟದಲ್ಲೂ ಯಶಸ್ವಿಯಾಗಬೇಕಾಗಿದೆ ಎಂದರು.ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವಿದೆ. ನಿಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಮೂಲಕ ಆರ್ಥಿಕ, ಸಾಮಾಜಿಕ ಹಾಗೂ ಸ್ವಾವಲಂಬಿಯಾಗಲು ಮುಂದಾಗಬೇಕು ಎಂದು ಮಹಿಳೆಯರಲ್ಲಿ ಕೋರಿದರಲ್ಲದರೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಶುಭಾಶಯ ಕೋರಿದರು.
ಆದರೆ ನಮ್ಮ ಮಕ್ಕಳ ಮೇಲೆ ನಾವು ನಂಬಿಕೆ ಇಟ್ಟು ಅವರ ಮುಂದಿನ ಭವಿಷ್ಯದ ನಿರ್ಮಾಣಕ್ಕಾಗಿ ಶಿಕ್ಷಣ ನೀಡಬೇಕು. ಹೆಣ್ಣು ಇಂದಿನ ಸಂದರ್ಭದಲ್ಲಿ ಮನೆಗೆ ಮಾತ್ರ ಸೀಮಿತವಾಗದೆ ಸಮಾಜ ಕಟ್ಟುವ ಹಂತದಲ್ಲಿ ಭಾಗಿದಾರಳಾಗುತ್ತಿದ್ದಾಳೆ ಎಂದರು.
ಆರ್ ಎಲ್ಎಚ್ ಪಿ ನಿರ್ದೇಶಕಿ ಸರಸ್ವತಿ ಮಾತನಾಡಿ, ಸಂಸ್ಥೆ ನಡೆದು ಬಂದ ಹಾದಿ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.
ಮಹಿಳೆಯರು ತಮ್ಮ ಆತ್ಮವಿಶ್ವಾಸ, ಗೌರವ, ನಂಬಿಕೆಗಳಿಗೆ ಅಡೆ ತಡೆಯಾಗುವ ಯಾವುದೇ ಸಮಯದಲ್ಲೂ ಎದುರಿಸಿ ನಿಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಿಳೆಯರು, ಯುವತಿಯರು ನಾನಾ ಬಗೆಯ ನೃತ್ಯಗಳನ್ನು ಮಾಡುವ ಮೂಲಕ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಹಾಕಿದರು ಹಾಗೂ ಕ್ರೀಡೆಗಳಲ್ಲಿ ವಿಜೇತರಾದವರು ಬಹುಮಾನವನ್ನು ಪಡೆದುಕೊಂಡರು.