ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡದ ಮಟ್ಟಿಗೆ ಹೆಚ್ಚು ಪ್ರಾಕೃತಿಕ ವಿಕೋಪ, ರಾಜಕೀಯ ಸ್ಥಿತ್ಯಂತರಗಳಿಲ್ಲದ ವರ್ಷ 2024. ಆದರೆ ನಿರಂತರ ಸೈಬರ್ ಅಪರಾಧ ಮೂಲಕ ಕೋಟ್ಯಂತರ ರು. ಮೊತ್ತ ವಂಚನೆಗೆ ಒಳಗಾದ ವರ್ಷ. ಉತ್ತಮ ಮಳೆಯಾದರೂ ಕೃಷಿ ಮೇಲೆ ಹೊಡೆತ ತಪ್ಪಿಲ್ಲ. ಅಡಕೆಗೆ ಎಲೆಚುಕ್ಕಿ ರೋಗ ವಿಸ್ತರಣೆ, ಈ ಬಾರಿ ಫಸಲು ಕಡಿಮೆಯ ಕೂಗು, ಗಣ್ಯರ ಅಗಲುವಿಕೆಗೆ ಸಾಕ್ಷಿಯಾಗಿ 2024 ವರ್ಷ ನಿರ್ಗಮಿಸಿದೆ.ಜನವರಿ-
ಜನವರಿ-6-ಹಿರಿಯ ವಿದ್ವಾಂಸ ಪ್ರೊ.ಅಮೃತ ಸೋಮೇಶ್ವರ ವಿಧಿವಶ.ಜನವರಿ 9-ರೌಡಿಶೀಟರ್ ಆಕಾಶಭವನ್ ಶರಣ್‌ಗೆ ಪೊಲೀಸರ ಸೆರೆ ವೇಳೆ ಗುಂಡೇಟು.
ಜನವರಿ-18-ಮಂಗಳೂರು ವಿಶ್ವವಿದ್ಯಾಲಯಕ್ಕೆ ಕಂದಾಯ ಜಾರಿ ನಿರ್ದೇಶನಾಲಯ ಅಧಿಕಾರಿಗಳ ದಾಳಿ, ಪರೀಕ್ಷಾಂಗ ಕುಲಸಚಿವ ರಾಜು ಚೆಲ್ಲಣ್ಣವರ್ ಮತ್ತು ಕುಲಪತಿಗಳ ಮೇಲೆ ರಾತ್ರಿ ಇಡೀ ವಿಚಾರಣೆಜನವರಿ-28-ಬೆಳ್ತಂಗಡಿಯ ಕುಕ್ಕೇಡಿಯಲ್ಲಿ ಸ್ಫೋಟಕ ಸಿಡಿದು ಮೂರು ಮಂದಿ ದುರಂತ ಸಾವು, ಸುಳ್ಯದಲ್ಲಿ ಕಾಡ್ಗಿಚ್ಚು ನಂದಿಸಲು ತೆರಳಿದ ದಂಪತಿ ಮೃತ
ಫೆಬ್ರವರಿ-ಫೆಬ್ರವರಿ-2-ಬೆಳ್ತಂಗಡಿಯಲ್ಲಿ ಐದು ಮಂದಿ 42 ಸಿಮ್ ಕಾರ್ಡ್ ಹೊಂದಿರುವುದನ್ನು ಪತ್ತೆ ಮಾಡಿ ಸೆರೆಹಿಡಿದ ಪೊಲೀಸ್ ತನಿಖಾ ತಂಡ. ಮೋಸದ ಕೃತ್ಯಕ್ಕೆ ಬಳಕೆ ಶಂಕೆ.
ಫೆಬ್ರವರಿ-12-ಶ್ರೀರಾಮನ ನಿಂದೆ ಆರೋಪ-ಮಂಗಳೂರಿನ ಜೆಪ್ಪು ಜರೋಸಾ ಶಾಲೆಗೆ ಮುತ್ತಿಗೆ ಹಾಕಿದ ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಜನಪ್ರತಿನಿಧಿಗಳು, ಹೆತ್ತವರು. ಪ್ರತಿಭಟನೆಗೆ ಮಣಿದು ವಿವಾದಿತ ಶಿಕ್ಷಕಿಯ ಅಮಾನತುಗೊಳಿಸಿದ ಶಾಲಾ ಆಡಳಿತ ಮಂಡಳಿ.ಫೆಬ್ರವರಿ-14-ಜೆರೋಸಾ ಶಾಲೆಯಿಂದ ಶಾಸಕರು, ಹಿಂದು ಸಂಘಟನೆ ಮುಖಂಡರ ವಿರುದ್ಧ ಕೇಸ್.
ಫೆಬ್ರವರಿ-19-ಹಿರಿಯ ಸಾಹಿತಿ ಕೆ.ಟಿ.ಗಟ್ಟಿ ನಿಧನ.ಫೆಬ್ರವರಿ-27-ಮೂಲ್ಕಿಯ ಹಳೆಯಂಗಡಿ ನಂದಿನಿ ನದಿಗೆ ಬಿದ್ದು ನಾಲ್ವರು ಮಕ್ಕಳು ದಾರುಣ ಸಾವು
ಮಾರ್ಚ್-ಮಾರ್ಚ್-1-ಮಂಗಳೂರಿನ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ನಿಧನ
ಮಾರ್ಚ್-4-ಕಡಬದಲ್ಲಿ ಪಿಯುಸಿ ವಿದ್ಯಾರ್ಥಿನಿಯರಿಗೆ ಆ್ಯಸಿಡ್ ದಾಳಿ, ಮೂವರು ಗಂಭೀರಮಾರ್ಚ್-13-ಲಕ್ಷದ್ವೀಪದಲ್ಲಿ ಮುಳುಗಿದ ಮಂಗಳೂರಿನ ಸರಕು ನೌಕೆ, 8 ಮಂದಿ ಪಾರು.
ಮಾರ್ಚ್-14-ಪುತ್ತೂರಿನಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣನಾದ ಅರುಣ್ ಕುಮಾರ್ ಪುತ್ತಿಲ ಬೆಂಗಳೂರಲ್ಲಿ ಬಿಜೆಪಿ ಸೇರ್ಪಡೆ.ಮಾರ್ಚ್-16-ಸುಬ್ರಹ್ಮಣ್ಯದ ಕೂಜಿಮಲೆ ಅರಣ್ಯ ಮನೆಗೆ ಶಂಕಿತ ನಕ್ಸಲ್ ತಂಡ ಭೇಟಿ.
ಮಾರ್ಚ್-21-ಹಿರಿಯ ರಂಗಕರ್ಮಿ ವಿ.ಜಿ.ಪಾಲ್ ನಿಧನಮಾರ್ಚ್-23-ಸುಬ್ರಹ್ಮಣ್ಯದ ಐನಕಿದು ಮನೆಯೊಂದಕ್ಕೆ ಶಂಕಿತ ನಕ್ಸಲ್ ತಂಡ ಭೇಟಿ.
ಏಪ್ರಿಲ್-ಏಪ್ರಿಲ್-14-ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ , ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳೂರಿನಲ್ಲಿ ರೋಡ್ ಶೋ.ಮೇ-
ಮೇ-3-ಸುಬ್ರಹ್ಮಣ್ಯದ ಪರ್ವತಮುಖಿಯಲ್ಲಿ ಸಿಡಿಲಿಗೆ ನವವಿವಾಹಿತ ಸೋಮಸುಂದರ ಸಾವು.ಮೇ-6-ಹಿರಿಯ ಸಾಹಿತಿ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನ.
ಮೇ-7-ಕಾಂಗ್ರೆಸ್ ಪರವಾಗಿ ಪ್ರಿಯಾಂಕ ಗಾಂಧಿ ಮೂಲ್ಕಿ ಕೊಳ್ನಾಡು ಮೈದಾನದಲ್ಲಿ ಸಮಾವೇಶದಲ್ಲಿ ಭಾಗಿ.ಮೇ-8-ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಬೆಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶ
22-ಶಾಸಕ ಹರೀಶ್ ಪೂಂಜಾ ಬಂಧನಕ್ಕೆ ಪೊಲೀಸರ ಹೈಡ್ರಾಮಾ, ಬಳಿಕ ಠಾಣೆಯಲ್ಲೇ ಜಾಮೀನು.ಜೂನ್-
ಜೂನ್-4-ಲೋಕಸಭಾ ಚುನಾವಣೆ ಮತ ಎಣಿಕೆ-ಹೊಸ ಸಂಸದರಾಗಿ ಬಿಜೆಪಿಯ ಕ್ಯಾ.ಬ್ರಿಜೇಶ್ ಚೌಟ ಆಯ್ಕೆ.ಜೂನ್-26-ಉಳ್ಳಾಲದಲ್ಲಿ ಮನೆ ಬಿದ್ದು ನಾಲ್ವರು ಸಾವು
ಜೂನ್-27-ಪಾಂಡೇಶ್ವರದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ರಿಕ್ಷಾ ಚಾಲಕ ಸಹಿತ ಇಬ್ಬರು ಸಾವು, ಬೆಳ್ತಂಗಡಿಯಲ್ಲಿ ವಿದ್ಯುತ್ ಶಾಕ್ ತಗುಲಿ ವಿದ್ಯಾರ್ಥಿನಿ ಮೃತ್ಯು.ಜುಲೈ-
ಜುಲೈ-3-ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಣ್ಣು ಕುಸಿತ, ಓರ್ವ ಪಾರು, ಇನ್ನೋರ್ವ ಉತ್ತರ ಪ್ರದೇಶದ ಚಂದನ್ ಸಾವು.ಜುಲೈ-8-ಕೂರತ್ ತಂಙಳ್ ಎಂದೇ ಖ್ಯಾತರಾಗಿದ್ದ ದ.ಕ.ಜಿಲ್ಲೆಯ ಹಲವು ಮೊಹಲ್ಲಾಗಳ ಖಾಝಿಯಾಗಿ ಕಾರ್ಯನಿರ್ವಹಿಸಿದ್ದ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ಬುಖಾರಿ ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಳಂನಲ್ಲಿ ನಿಧನ.
ಜುಲೈ-16-ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ನಿಧನಜುಲೈ-25-ಜೋಕಟ್ಟೆಯಲ್ಲಿ ತಡೆಗೋಡೆ ಕುಸಿದುಬಿದ್ದು ಶೈಲೇಶ್ ಸಾವು.
ಆಗಸ್ಟ್-ಆಗಸ್ಟ್-11-ನೇತ್ರಾವತಿ ಸೇತುವೆ ಬಳಿಯ ಕಲ್ಲಾಪುವಿನಲ್ಲಿ ರೌಡಿ ಸಮೀರ್ ಕೊಲೆ.
ಆಗಸ್ಟ್-21-ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮನೆಗೆ ರಾತ್ರಿ ಕಲ್ಲುತೂರಾಟ.ಸೆಪ್ಟೆಂಬರ್-
ಸೆಪ್ಟೆಂಬರ್-12-ಕರಂಗಲ್ಪಾಡಿಯಲ್ಲಿ ಹಳೆ ಮನೆ ಕೆಡವುತ್ತಿದ್ದಾಗ ಕಾಂಕ್ರಿಟ್ ಬೀಮ್ ಬಿದ್ದು ಮನೆ ಮಾಲೀಕ ಎಡ್ವಿನ್ ಜೆರಾಲ್ಡ್ ಮತ್ತು ಪಕ್ಕದ ಮನೆಯ ಜೇಮ್ಸ್ ಜತ್ತಣ್ಣ ಸಾವುಸೆಪ್ಟೆಂಬರ್-15-ಹಿರಿಯ ಲೇಖಕಿ ಮನೋರಮಾ ಎಂ.ಭಟ್ ನಿಧನ.
ಅಕ್ಟೋಬರ್-ಅಕ್ಟೋಬರ್-6-ಮಾಜಿ ಶಾಸಕ ಮೊಯ್ದಿನ್ ಬಾವಾ ಸಹೋದರ ಮಮ್ತಾಜ್ ಆಲಿ ಕೂಳೂರು ಸೇತುವೆ ಹಾರಿ ಆತ್ಮಹತ್ಯೆ.
ಅಕ್ಟೋಬರ್-7-ಸುಮಾರು 6 ಕೋಟಿ ರು.ಗಳ ಮಾದಕ ದ್ರವ್ಯ ಎನ್‌ಡಿಎಂಎ ವಶ, ನೈಜೀರಿಯಾ ಪ್ರಜೆ ಸೆರೆಅಕ್ಟೋಬರ್-21-ಸಂಸದರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಕಿಶೋರ್ ಕುಮಾರ್ ಪುತ್ತೂರು ಆಯ್ಕೆ.
ನವೆಂಬರ್-ನವೆಂಬರ್-8-ಮಂಗಳೂರು ಹೊರವಲಯದ ಉಳಾಯಿಬೆಟ್ಟು ಬಳಿಯ ರಾಜ್ಟೈಲ್ಸ್ ಫ್ಯಾಕ್ಟರಿಯಲ್ಲಿ 2021ರ ನ.20ರಂದು ಜಾರ್ಖಂಡ್ ಮೂಲದ ಕುಟುಂಬಕ್ಕೆ ಸೇರಿದ್ದ ಎಂಟು ವರ್ಷ ಪ್ರಾಯದ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣದ ಆರೋಪಿಗಳಾದ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಪನಾಯಿ ತೆಪ್ಪಿಲ್ ನಿವಾಸಿ ಜಯಸಿಂಗ್ ಆದಿವಾಸಿ ಮತ್ತು ಮುಕೇಶ್ ಸಿಂಗ್ ಹಾಗೂ ಜಾ ರ್ಖಂಡ್ ರಾಜ್ಯದ ರಾಂಚಿ ಜಿಲ್ಲೆಯ ಮನೀಶ್ ತಿರ್ಕಿ ಎಂಬವರಿಗೆ ದ.ಕ. ಜಿಲ್ಲಾ ವಿಶೇಷ ಪೊಕ್ಸೊ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು.
ಡಿಸೆಂಬರ್-ಡಿಸೆಂಬರ್-5-ಆರ್‌ಎಸ್‌ಎಸ್ ಸರಸಂಘಚಾಲಕ್ ಡಾ.ಮೋಹನ್ ಭಾಗವತ್ 5 ದಿನಗಳ ಮಂಗಳೂರು ಭೇಟಿ.
ಡಿಸೆಂಬರ್-12-ಹಲವು ದಶಕಗಳ ಬೇಡಿಕೆಯಾದ ಮೂಡುಬಿದಿರೆ-ಕಾರ್ಕಳ ನಡುವೆ ಕೆಸ್ಸಾರ್ಟಿಸಿ ಬಸ್ ಪ್ರಾಯೋಗಿಕ ಸಂಚಾರ ಆರಂಭ.ಡಿಸೆಂಬರ್-14-ಯಕ್ಷಗಾನದ ಪ್ರಥಮ ಮಹಿಳಾ ಭಾಗವತರಾದ ಲೀಲಾವತಿ ಬೈಪಡಿತ್ತಾಯ ನಿಧನ.ಪ್ರಾಕೃತಿಕ ಹಾನಿ, ಸೈಬರ್ ವಂಚನೆ
ಗುಡ್ಡ ಕುಸಿತ, ನೆರೆ, ಸಿಡಿಲು ಮುಂತಾದ ಪ್ರಾಕೃತಿಕ ವಿಕೋಪದ ದುರ್ಘಟನೆಗಳಿಂದ ಜಿಲ್ಲೆಯಲ್ಲಿ 2024 ರಲ್ಲಿ 12 ಮಂದಿ ಮೃತಪಟ್ಟಿದ್ದು, 16 ಪ್ರಾಣಿಗಳ ಪ್ರಾಣ ಹಾನಿ ಸಂಭವಿಸಿವೆ. 61.948 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕಾ ಬೆಳೆ 24.612 ಹೆಕ್ಟೇರ್ ಪ್ರದೇಶ ಹಾನಿಯಾಗಿದೆ.2024 ರಲ್ಲಿ ಒಟ್ಟು 134 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 40 ಕೋಟಿ ರು. ವಂಚಿಸಲಾಗಿದೆ. 42 ಆರೋಪಿಗಳನ್ನು ಬಂಧಿಸಲಾಗಿದ್ದು, 2.5 ಕೋಟಿ ರು. ಮಾತ್ರ ವಶಪಡಿಸಲಾಗಿದೆ. ಸೈಬರ್ ವಂಚನೆ ಮೂಲಕ ಹಣ ವಂಚನೆ ಅತ್ಯಧಿಕ ಪ್ರಮಾಣದಲ್ಲಿ ದಾಖಲಾಗುತ್ತಿದ್ದು, 2023 ರಲ್ಲಿ 9.83 ಕೋಟಿ ರು. ವಂಚನೆ ದಾಖಲಾಗಿತ್ತು.