ಹಾನಗಲ್ಲ: ವಿವಾಹ ನಿಶ್ಚಯವಾಗಿ ಮದುವೆಗೆ ನಿರಾಕರಿಸಿದ ಯುವತಿಗೆ ವಿಷ ಕುಡಿಸಿ, ನೇಣು ಬಿಗಿದು ಹತ್ಯೆಗೈದ ಘಟನೆ ಹಾನಗಲ್ಲ ಸಮೀಪದ ಬೈಚವಳ್ಳಿ ರಸ್ತೆ ಬಳಿಯ ತೋಟವೊಂದರಲ್ಲಿ ನಡೆದಿದೆ.
ತಾಲೂಕಿನ ಮೂಡೂರಿನ ದೀಪಾ ಗೊಂದಿ ಹತ್ಯೆಗೀಡಾದ ನತದೃಷ್ಟೆ.ಅವಳ ಜೊತೆ ವಿವಾಹ ನಿಶ್ಚಯವಾಗಿದ್ದ ತಾಲೂಕಿನ ಅರಳೇಶ್ವರ ಗ್ರಾಮದ ಮಾಲತೇಶ ಬಾರ್ಕಿ ಎಂಬಾತನೇ ಹತ್ಯೆಗೈದು ಇದೀಗ ಪೊಲೀಸ್ ಬಂಧನಕ್ಕೊಳಗಾದ ಯುವಕ.
ಮಾ.14 ರಂದು ಯುವತಿ ನಾಪತ್ತೆಯಾಗಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಮದುವೆಗೆ ಮಹೂರ್ತ ನಿರ್ಣಯಿಸಲಾಗಿದ್ದರೂ ದೀಪಾಳಿಗೆ ಈ ಮದುವೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಈ ವಿಷಯ ತಿಳಿದ ಮಾಲತೇಶ ಬೇಸರಗೊಂಡಿದ್ದ. ಮಾರ್ಚ್ ೧೪ರಂದು ದೀಪಾಳಿಗೆ ಪೋನ್ ಮಾಡಿ ಹಾನಗಲ್ಲಿಗೆ ಕರೆಸಿಕೊಂಡು ಅಲ್ಲಿಂದ ಬೈಕ್‌ನಲ್ಲಿ ಬೈಚವಳ್ಳಿ ಮಾರ್ಗದಲ್ಲಿನ ತೋಟವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಒತ್ತಾಯದಿಂದ ವಿಷ ಕುಡಿಸಿ, ಬಳಿಕ ಅವಳದೇ ವೇಲ್‌ನಿಂದ ಗಿಡಕ್ಕೆ ನೇಣು ಬಿಗಿದು ಹತ್ಯೆ ಮಾಡಿದ್ದಾಗಿ ಪೊಲೀಸ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.
ಯುವತಿ ಕಾಣೆಯಾಗಿದ್ದಾಳೆ ಎಂಬ ದೂರನ್ನು ಆಧರಿಸಿ ಪೊಲೀಸರು ಆರೋಪಿ ಹುಡುಕಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಚಿತ್ರಗಳು ಪೊಲೀಸರ ಸಹಾಯಕ್ಕೆ ಬಂದಿದ್ದು, ಮೋಟರ್ ಬೈಕ್‌ನಲ್ಲಿ ಯುವತಿಯನ್ನು ಕರೆದುಕೊಂಡು ಹೋದ ದೃಶ್ಯಗಳು ಕಂಡು ಬಂದಿವೆ. ಈ ವ್ಯಕ್ತಿಯನ್ನು ಹುಡುಕಲು ಅರಳೇಶ್ವರಕ್ಕೆ ಹೋಗಿ ಹಿಡಿದು ಕೇಳಿದಾಗ ಈ ಬಗ್ಗೆ ಏನು ಗೊತ್ತಿಲ್ಲ ಎಂದು ಆರೋಪಿ ತಿಳಿಸಿದ್ದಾನೆ. ಆದರೆ ಪೊಲೀಸರು ಪ್ರಶ್ನಿಸಿದಾಗ ನಡೆದ ಘಟನೆ ಬಾಯ್ಬಿಟ್ಟಿದ್ದಾನೆ. ಪೊಲೀಸರು ಸ್ಥಳಕ್ಕೆ ಆರೋಪಿಯನ್ನು ಕರೆದುಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ.ಆರೋಪಿಯನ್ನು ಪೊಲೀಸ್ ಕಸ್ಟಡಿಯಲ್ಲಿಟ್ಟುಕೊಂಡಿದ್ದು, ಹಾನಗಲ್ಲ ಪೊಲೀಸ್ ಠಾಣೆಯಲ್ಲಿ
ದೀಪಾಳ ತಂದೆಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಹಾನಗಲ್ ಪೊಲೀಸರು ಆರೋಪಿ ಮಾಲತೇಶನನ್ನು ಬಂಧಿಸಿದ್ದಾರೆ.ಪ್ರಕರಣ ಬೇಧಿಸುವಲ್ಲಿ ಎಸ್‌ಪಿ ಅಂಶುಕುಮಾರ, ಎಎಸ್‌ಪಿ ಸಿ.ಗೋಪಾಲ, ಡಿವಾಯ್‌ಎಸ್‌ಪಿ ಮಂಜುನಾಥ ಅವರ ಮಾರ್ಗದರ್ಶನದಲ್ಲಿ ಸಿಪಿಐ ಆರ್. ವೀರೇಶ, ಪಿಎಸ್‌ಐ ಚಂದನ್ ಚಲುವಯ್ಯ, ಹಾಗೂ ಸಿಬ್ಬಂದಿಗಳಾದ ಅನಿಲ ಮಡಿವಾಳರ, ಇಲಿಯಾಸ ಶೇತಸನದಿ, ಆನಂದ ಪಾಟಿಲ, ಆರ್. ಬಳ್ಳಾರಿ, ಸುರೇಶ ಕೂಸನೂರ, ಜಗದೀಶ ಮಡಿವಾಳರ, ಸುನೀಲ ಕಿಳ್ಳಿಕ್ಯಾತರ, ನಾಸಿರ ದೊಡ್ಡಮುಲ್ಲಾ ಪರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.