ಕನ್ನಡಪ್ರಭ ವಾರ್ತೆ ಅರಸೀಕೆರೆ ಸಾರ್ವಜನಿಕರಿಗೆ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದ್ದು, ಇದರಲ್ಲಿನ ತಿದ್ದುಪಡಿಗಳನ್ನು ಮತ್ತು ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ ತಿದ್ದುಪಡಿ ಕಾರ್ಯಾಗಾರವನ್ನು ನಗರದ ವೀರಶೈವ ಕಲ್ಯಾಣ ಮಂದಿರದ ಪಕ್ಕದಲ್ಲಿರುವ ಅಂಚೆ ಇಲಾಖೆಯ ಪಿಎಸ್‍ಡಿ ಕಟ್ಟಡದಲ್ಲಿ ಅ 10 ರಂದು ಅಭಿಯಾನವನ್ನು ಹಮ್ಮಿಕೊಂಡಿರುವುದಾಗಿ ಇಲಾಖೆ ಉಪ ಅಧೀಕ್ಷಕ ವೆಂಕಟರಮಣಪ್ಪ ಮತ್ತು ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಬಿ ಆರ್ ಶಿವಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ಅಭಿಯಾನದಲ್ಲಿ ಆಧಾರ್ ಕಾರ್ಡ್ ನವೀಕರಣ, ಜನ್ಮ ದಿನಾಂಕ ತಿದ್ದುಪಡಿ, ಮೊಬೈಲ್ ಸಂಖ್ಯೆ ಸೇರ್ಪಡೆ ಮತ್ತು ಆಧಾರ್ ಲಿಂಕ್‌ಗಳನ್ನು ಮಾಡಿಕೊಡಲಾಗುವುದು. ಅಲ್ಲದೆ ಅಂಚೆ ಇಲಾಖೆಯಿಂದ ಸಾರ್ವಜನಿಕರಿಗೆ ದೊರಕಬಹುದಾದ ಉಳಿತಾಯ ಖಾತೆಗಳ ಯೋಜನೆ ವಿಮಾ ಯೋಜನೆಗಳು ಡಿಜಿಟಲ್ ಸೇವೆಗಳು ಮತ್ತು ಅಂಚೆ ಇಲಾಖೆಯ ಎಟಿಎಂ ಕಾರ್ಡ್ ಬಳಸಿ ಬ್ಯಾಂಕ್‌ಗಳಲ್ಲಿ ಹಣ ಪಡೆಯುವ ಮತ್ತು ಯಾವುದೇ ಬ್ಯಾಂಕಿಗೆ ಹಣ ವರ್ಗಾವಣೆ ಮೊದಲಾದ ಸೇವೆಗಳು ಲಭ್ಯವಿದ್ದು ಈ ಬಗ್ಗೆಯೂ ಹೆಚ್ಚಿನ ಮಾಹಿತಿಯನ್ನು ಸಹ ನೀಡಲಾಗುವುದು ಎಂದು ತಿಳಿಸಿದ್ದಾರೆ. ಡಿಜಿಟಲ್ ಸೇವೆಗಳಾದ ಆನ್ಲೈನ್ ಶಾಪಿಂಗ್ ಹಾಗೂ ಉಳಿತಾಯ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಖಾತೆ ತೆರೆಯಲಾಗುವುದು. ಕಾರ್ಯಾಗಾರದಲ್ಲಿ ಇಲಾಖೆಯಿಂದ ದೊರಕಬಹುದಾದ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಮಾಹಿತಿಯನ್ನು ಸಾರ್ವಜನಿಕರು ಪಡೆಯುವ ಮೂಲಕ ಈ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.