ಆರತಿ ಉಕ್ಕಡ ದೇಗುಲದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ

KannadaprabhaNewsNetwork |  
Published : Oct 27, 2026, 01:45 AM IST
26ಕೆಎಂಎನ್‌ಡಿ-9ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದ ಅಹಲ್ಯದೇವಿ ದೇವಾಲಯ ಮುಂಭಾಗ ಮಹರ್ಷಿ ಶ್ರೀ ವಾಲ್ಮೀಕಿಯವರ ಜಯಂತಿ ಪ್ರಯುಕ್ತ ಸಮುದಾಯದ ಜನರು ಮಹರ್ಷಿ ಅವರ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. | Kannada Prabha

ಸಾರಾಂಶ

ಕೆಟ್ಟ ಮನಸ್ಸು ಹೊಂದಿದ್ದ ವ್ಯಕ್ತಿಯೂ ತನ್ನ ಉತ್ತಮ ನಡೆಯ ಪ್ರಯತ್ನದಿಂದ ಮಹಾತ್ಮನಾಗಬಹುದು ಎಂಬುದಕ್ಕೆ ಶ್ರೀವಾಲ್ಮೀಕಿ ಮಹರ್ಷಿಗಳು ಹಾಗೂ ಪರಿವರ್ತನೆಗೊಂಡ ಅವರ ಜೀವನ ಚರಿತ್ರೆ ಸಾಕ್ಷಿಯಾಗಿದ್ದು, ಇದು ಜ್ಞಾನ ಮತ್ತು ಸಾಧನೆಯ ಸಂಕೇತ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಆರತಿ ಉಕ್ಕಡ ಗ್ರಾಮದ ಅಹಲ್ಯದೇವಿ ದೇವಾಲಯದ ಬಳಿ ಮಹರ್ಷಿ ಶ್ರೀವಾಲ್ಮೀಕಿಯವರ ಜಯಂತಿಯನ್ನು ಆಚರಿಸಲಾಯಿತು. ದೇವಾಲಯದ ಮುಂಭಾಗ ಸಮುದಾಯದ ಜನರು ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ನಂತರ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಅಹಲ್ಯದೇವಿ ದೇಗುಲ ಟ್ರಸ್ಟ್ ಅಧ್ಯಕ್ಷ ಹಾಗೂ ಸಮುದಾಯದ ಮುಖಂಡ ಚಂದ್ರು ಮಾತನಾಡಿ, ಕೆಟ್ಟ ಮನಸ್ಸು ಹೊಂದಿದ್ದ ವ್ಯಕ್ತಿಯೂ ತನ್ನ ಉತ್ತಮ ನಡೆಯ ಪ್ರಯತ್ನದಿಂದ ಮಹಾತ್ಮನಾಗಬಹುದು ಎಂಬುದಕ್ಕೆ ಶ್ರೀವಾಲ್ಮೀಕಿ ಮಹರ್ಷಿಗಳು ಹಾಗೂ ಪರಿವರ್ತನೆಗೊಂಡ ಅವರ ಜೀವನ ಚರಿತ್ರೆ ಸಾಕ್ಷಿಯಾಗಿದ್ದು, ಇದು ಜ್ಞಾನ ಮತ್ತು ಸಾಧನೆಯ ಸಂಕೇತ. ಮಹರ್ಷಿಗಳ ಆದರ್ಶ, ತ್ಯಾಗ, ಪ್ರೀತಿ, ನೀತಿ ಹಾಗೂ ಸತ್ಯ ಮಾರ್ಗದ ಸಂದೇಶಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಣ ಎಂದರು.

ಬಳಿಕ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರಿಗೆ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಮರಿಯಪ್ಪ. ಶಿವು, ಕಾಳಯ್ಯ, ಬೂತಯ್ಯ, ಬಸವಯ್ಯ, ಶಿವಕುಮಾರ್, ಭೈರಾ, ಗೌರೀಶ, ದಿಲೀಪ, ರಾಜು, ಶರತ್ ಮತ್ತು ವೆಂಕಟೇಶ್ ಇತರರು ಇದ್ದರು.

ವಿದ್ಯುತ್ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಹಲಗೂರು:ಚನ್ನಪಟ್ಟಣ ರಸ್ತೆಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಕಚೇರಿ ಆವರಣದಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.

ಹಲಗೂರು ಮತ್ತು ಬ್ಯಾಡರಹಳ್ಳಿ ಶಾಖೆಗಳ ವತಿಯಿಂದ ಶ್ರೀಮಹರ್ಷಿ ವಾಲ್ಮೀಕಿ ಅವರ ಜಯಂತಿ ಆಚರಣೆ ಅಂಗವಾಗಿ ಹಲಗೂರು ಸೆಸ್ಕ್ ಶಾಖೆ ಎಂಜಿನಿಯರ್ ಶಿವಲಿಂಗು ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಸ್ವಮಾಲೆ ಅರ್ಪಿಸಿ ಪೂಜೆ ಸಲ್ಲಿಸಿದ ನಂತರ ಸಿಬ್ಬಂದಿಗೆ ಸಿಹಿ ಹಂಚಿ ಮಾತನಾಡಿದರು.ವಾಲ್ಮೀಕಿಯು ಬೇಡರ ಕುಟುಂಬದಲ್ಲಿ ಹುಟ್ಟಿ ಕಾಡಿನಲ್ಲಿ ದರೋಡೆ ಮಾಡುತ್ತಾ ಜೀವನ ನಡೆಸುತ್ತಿದ್ದರು. ನಾರದ ಮುನಿಗಳ ಭೇಟಿಯಿಂದ ಮನಸ್ಸು ಪರಿವರ್ತನೆ ಹೊಂದಿ ತಪಸ್ಸು ಗೈದು ಹಿಂದುಗಳ ಮಹಾ ಗ್ರಂಥ ರಾಮಾಯಣದ ರಚನೆಕಾರರಾದರು. ವಾಲ್ಮೀಕಿ ಜಯಂತಿಯನ್ನು ಹುಣ್ಣಿಮೆ ದಿನ ಆಚರಿಸಲಾಗುತ್ತದೆ. ಅವರ ಪುಸ್ತಕಗಳನ್ನು ಓದಿ ತತ್ವಾದರ್ಶ ತತ್ವಗಳನ್ನು ನಾವುಗಳು ಮೈಗೂಡಿಸಿಕೊಂಡು ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಬ್ಯಾಡರಹಳ್ಳಿ ಶಾಖೆ ಎಂಜಿನಿಯರ್ ಗುರು ಸೂರ್ಯ ಕುಮಾರ್, ಹಿರಿಯ ಪವರ್ ಮ್ಯಾನ್ ಗಳಾದ ರಾಘವೇಂದ್ರ ಕುಮಾರ್, ಬಿ.ಪುಟ್ಟಸ್ವಾಮಿ ಹಾಗೂ ಎಲ್ಲಾ ಪವರ್ ಮ್ಯಾನ್ ಗಳು ಮತ್ತು ಜಿವಿಪಿಗಳು ಮತ್ತು ಗ್ಯಾಂಗ್ ಮ್ಯಾನ್ ಗಳು ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಲ್ಮೀಕಿ ರಾಮಾಯಣದಿಂದ ಸಮಾಜಕ್ಕೆ ಸಂದೇಶ
ರುದ್ರಭೂಮಿ ಸ್ವಚ್ಛಗೊಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು