ಇಂದು-ನಾಳೆ ಸಿಜಿಕೆ ರಂಗನಮನ ಕಾರ್ಯಕ್ರಮ

KannadaprabhaNewsNetwork |  
Published : Oct 27, 2026, 01:30 AM IST
೨೬ಕೆಎಂಎನ್‌ಡಿ-೨ಸಿಜಿಕೆ ರಂಗನಮನ ನಾಟಕ ಪ್ರದರ್ಶನದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿದ ದೃಶ್ಯ. | Kannada Prabha

ಸಾರಾಂಶ

ಕನ್ನಡ ರಂಗಭೂಮಿಗೆ ವೈಚಾರಿಕ ಪ್ರಜ್ಞೆ ಉಂಟುಮಾಡಿದ ರಂಗಕರ್ಮಿ ಸಿ.ಜಿ. ಕೃಷ್ಣಸ್ವಾಮಿ (ಸಿ.ಜಿ.ಕೆ.) ಅವರಿಗೆ ನಮನ ಸಲ್ಲಿಸುವುದರ ಜತೆಗೆ ನಿತ್ಯ ಸಚಿವ ಕೆ.ವಿ. ಶಂಕರಗೌಡ ರಚಿಸಿ, ಮಂಜು ಕೊಡಗು ನಿರ್ದೇಶಿಸಿರುವ ಪಾದುಕಾ ಕಿರೀಟಿ ಹಾಗೂ ಮಹೇಶ ಎಲ್ಕುಂಚವಾರ್ ರಚಿಸಿ, ಮಂಜು ಕಾಸರಗೋಡು ನಿರ್ದೇಶಿರುವ ಕೊಳ ನಾಟಕಗಳ ಪ್ರದರ್ಶನ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಭೂಮಿ ಬೆಳಗು ಸಾಂಸ್ಕೃತಿಕ ಸಂಘ, ಮಂಗಲ ಮತ್ತು ನೀನಾಸಂ ತಿರುಗಾಟ ನಾಟಕಗಳು -೨೦೨೬, ಇವರ ವತಿಯಿಂದ ಅ. ೨೭, ೨೮ರಂದು ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸಂಜೆ ೬ ಗಂಟೆಗೆ ಸಿಜಿಕೆ ರಂಗನಮನ ನಾಟಕ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ. ಯೋಗೀಶ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಕನ್ನಡ ರಂಗಭೂಮಿಗೆ ವೈಚಾರಿಕ ಪ್ರಜ್ಞೆ ಉಂಟುಮಾಡಿದ ರಂಗಕರ್ಮಿ ಸಿ.ಜಿ. ಕೃಷ್ಣಸ್ವಾಮಿ (ಸಿ.ಜಿ.ಕೆ.) ಅವರಿಗೆ ನಮನ ಸಲ್ಲಿಸುವುದರ ಜತೆಗೆ ನಿತ್ಯ ಸಚಿವ ಕೆ.ವಿ. ಶಂಕರಗೌಡ ರಚಿಸಿ, ಮಂಜು ಕೊಡಗು ನಿರ್ದೇಶಿಸಿರುವ ಪಾದುಕಾ ಕಿರೀಟಿ ಹಾಗೂ ಮಹೇಶ ಎಲ್ಕುಂಚವಾರ್ ರಚಿಸಿ, ಮಂಜು ಕಾಸರಗೋಡು ನಿರ್ದೇಶಿರುವ ಕೊಳ ನಾಟಕಗಳ ಪ್ರದರ್ಶನ ನಡೆಯಲಿದೆ ಎಂದರು.

ಅ.೨೭ರಂದು ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಸಮಾರಂಭವನ್ನು ಉದ್ಘಾಟಿಸುವರು. ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್ ಅಧ್ಯಕ್ಷತೆ ವಹಿಸುವರು. ರಂಗಕರ್ಮಿ ಸಿಜಿಕೆ ಕುರಿತು ಹಿರಿಯ ಪತ್ರಕರ್ತ ಡಿ.ಎನ್. ಶ್ರೀಪಾದು ಮಾತನಾಡುವರು. ನಿತ್ಯಸಚಿವ ಕೆ.ವಿ. ಶಂಕರಗೌಡರ ಕುರಿತು ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ಮಾತನಾಡುವರು. ಸಿಜಿಕೆ ಅವರ ಧರ್ಮಪತ್ನಿ ಜಯಲಕ್ಷ್ಮಿ ಕೃಷ್ಣಸ್ವಾಮಿ ಅವರಿಗೆ ರಂಗ ಗೌರವ ಸಲ್ಲಿಸಲಾಗುವುದು ಎಂದು ವಿವರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಎಂ.ವಿ. ಧರಣೇಂದ್ರಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ರವಿವರ್ಮ ಚಿತ್ರಶಾಲೆಯ ಧನುಷ್ ಚಿತ್ರನಮನ ಸಲ್ಲಿಸುವರು ಎಂದರು.

ಅ.೨೮ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕನ್ನಡ ಪರಿಚಾರಕ ಕೆ.ಟಿ.ಹನುಮಂತು ಅಧ್ಯಕ್ಷತೆ ವಹಿಸುವರು. ಸಂವೇದನಾಶೀಲ ಕಥೆಗಾರ ನಾಗಮಂಗಲ ಕೃಷ್ಣಮೂರ್ತಿ ಸಮಾರೋಪ ನುಡಿಯನ್ನಾಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್ ನೆನಪಿನ ಕಾಣಿಕೆ ವಿತರಿಸುವರು. ಖ್ಯಾತ ವೈದ್ಯ ಡಾ. ಚಂದ್ರಶೇಖರ್, ಕರ್ನಾಟಕ ಗ್ರಾಮೀಣಾಭಿವೃದ್ದಿ ಬ್ಯಾಂಕ್‌ನ ಅಂಬಿಕಾ, ಬೀದಿ ನಾಟಕ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಸಬ್ಬನಹಳ್ಳಿ ರಾಜು, ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಎನ್. ರಮೇಶ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಪ್ರತಿನ ದಿನ ಸಂಜೆ ೬ ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದ್ದು, ಪ್ರವೇಶ ಉಚಿತವಿರುತ್ತದೆ. ನಾಗರೀಕರು, ನಾಟಕ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಅವರು ಕೋರಿದರು.

ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಸಂಘದ ಎಂ. ಕೃಷ್ಣ, ನಂಜುಂಡಸ್ವಾಮಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಲ್ಮೀಕಿ ರಾಮಾಯಣದಿಂದ ಸಮಾಜಕ್ಕೆ ಸಂದೇಶ
ರುದ್ರಭೂಮಿ ಸ್ವಚ್ಛಗೊಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು