ನಾಪೋಕ್ಲು: ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ ವತಿಯಿಂದ ಮಂಗಳವಾರ ಆಟಿಹಬ್ಬವನ್ನು ಚೇರಂಬಾಣೆ ಗೌಡ ಸಮಾಜದ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಚೇರಂಬಾಣೆ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯ ಶಿಕ್ಷಕರಾದ ಕುದುಪಜೆ ಕವನ್ ಮಾತನಾಡಿ, ನಮ್ಮ ಪೂರ್ವಿಕರ ಆಹಾರ ಪದ್ಧತಿಯನ್ನು ನಾವು ಮರೆಯದೆ ಅನುಸರಿಸಬೇಕು ಎಂದರು.
ಕಾರುಗುಂದ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಮಾತನಾಡಿ, ಇಂತಹ ಕಾರ್ಯಕ್ರಮಳಿಂದ ಪರಸ್ಪರ ಹಿರಿಯ ಕಿರಿಯರಲ್ಲಿ ಉತ್ತಮ ಬಾಂಧವ್ಯ ಮೂಡುತ್ತದೆ ಎಂದರು.ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರುಗುಂದ ಯುವ ವೇದಿಕೆ ಅಧ್ಯಕ್ಷ ಪ್ರದೀಪ್ ಪಾರೆಮಜಲು, ದೇವನೂರು ಗೌಡ ಒಕ್ಕೂಟದ ನಿರ್ದೇಶಕ ಗುಡ್ಡೆರ ಲಕ್ಷು
ಆಟಿ ಸೊಪ್ಪಿನ ರಸದಿಂದ ತಯಾರಿಸಿದ ವಿವಿಧ ಖಾದ್ಯಗಳು, ಮರ ಕೆಸುವಿನ ಖಾದ್ಯಗಳು, ಮಳೆಗಾಲದಲ್ಲಿ ದೊರೆಯುವ ಫಲ ಪುಷ್ಪಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಬೈಮನ ಭವಾನಿ ದಿಲೀಪ್ ಮತ್ತು ಹೊಸ ಮನೆ ಶೋಭಾ ವೆಂಕಪ್ಪ ಪ್ರಾರ್ಥನೆ ನೆರವೇರಿಸಿದರು. ಬೈಚನ ಸ್ವಾತಿ ಮಂದಪ್ಪ ಸ್ವಾಗತಿಸಿ, ಕೇಕಡ ಪೂಜಾ ನಾಗೇಂದ್ರ ನಿರೂಪಿಸಿ, ಬೈಮನ ಜ್ಯೋತಿ ತಿಮ್ಮಯ್ಯ ವಂದಿಸಿದರು.