ಖಾಸಗಿ ಡೇರಿಗಳನ್ನು ತ್ಯಜಿಸಿ ಮನ್ಮುಲ್ ಉಳಿಸಿ: ಒಕ್ಕೂಟದ ನಿರ್ದೇಶಕ ಡಿ.ಕೃಷ್ಣೇಗೌಡ

KannadaprabhaNewsNetwork |  
Published : Sep 03, 2026, 01:45 AM IST
2ಕೆಎಂಎನ್ ಡಿ19 | Kannada Prabha

ಸಾರಾಂಶ

ಉತ್ಪಾದಕರಿಗೆ ಹಾಲು ಕರೆಯುವ ಯಂತ್ರಕ್ಕೆ ಸಹಾಯ ಧನ ನೀಡಬೇಕು. ಸಂಘಕ್ಕೆ ಹಸು ಎತ್ತುವ ಯಂತ್ರ ಮಂಜೂರು ಮಾಡಬೇಕು. ಕೊಬ್ಬಿಗೆ ತಕ್ಕಂತೆ ಬೊನಸ್ ನೀಡಬೇಕು. ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 5 ರು. ಹೆಚ್ಚಳ ಮಾಡಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ಹಾಲು ಉತ್ಪಾದಕರು ಖಾಸಗಿ ಡೇರಿಗಳನ್ನು ತ್ಯಜಿಸಿ ಮನ್ಮುಲ್‌ಗೆ ಹಾಲು ಸರಬರಾಜು ಮಾಡಿ ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಮನ್ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ ಕರೆ ನೀಡಿದರು.

ಸಮೀಪದ ಎಚ್.ಬಸಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, 58 ವರ್ಷದೊಳಗಿನ ಉತ್ಪಾದಕರಿಗೆ ಗುಂಪು ವಿಮೆ ಮಾಡಲಾಗುತ್ತಿದೆ. ಉತ್ಪಾದಕರ ಹಸುಗಳಿಗೂ ವಿಮೆ ಆರಂಭವಾಗಿದೆ. ಎಲ್ಲಾ ಹೈನುಗಾರರು ಸದುಪಯೋಗ ಪಡೆಯಬೇಕು ಎಂದರು.

ಡೇರಿ ಅಧ್ಯಕ್ಷ ಅಂಬಿ ಸುರೇಶ್ ಮಾತನಾಡಿ, ಸಂಘದ ಸದಸ್ಯರು ಪ್ರತಿದಿನವೂ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕು. ಈ ಸಾಲಿನಲ್ಲಿ 1,25000 ನೀವಳ ಲಾಭ ಬಂದಿದೆ ಎಂದರು.

ಉತ್ಪಾದಕರಿಗೆ ಹಾಲು ಕರೆಯುವ ಯಂತ್ರಕ್ಕೆ ಸಹಾಯ ಧನ ನೀಡಬೇಕು. ಸಂಘಕ್ಕೆ ಹಸು ಎತ್ತುವ ಯಂತ್ರ ಮಂಜೂರು ಮಾಡಬೇಕು. ಕೊಬ್ಬಿಗೆ ತಕ್ಕಂತೆ ಬೊನಸ್ ನೀಡಬೇಕು. ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 5 ರು. ಹೆಚ್ಚಳ ಮಾಡಬೇಕೆಂದು ಸಂಘದ ಸದಸ್ಯರು ಒತ್ತಾಯಿಸಿದರು.

ಈ ವೇಳೆ ಸಂಘದ ಉಪಾಧ್ಯಕ್ಷ ಗುರುರಾಜು, ನಿರ್ದೇಶಕರಾದ ಬಿ.ಟಿ‌.ಪುಟ್ಟಸ್ವಾಮಿ, ರಮೇಶ್, ಬಿ.ಕೆ.ಲಿಂಗರಾಜು, ಬಿ.ಎಂ.ಶಿವರಾಜು, ಶಿವನಂಜು, ಕೆಂಪಯ್ಯ, ಎ.ಎನ್.ರಮೇಶ್, ಡೇರಿ ಕಾರ್ಯದರ್ಶಿಗಳ ಸಂಘದ ತಾಲೂಕು ಅಧ್ಯಕ್ಷ ಸಾಗ್ಯ ಶಂಕರ್, ಇಒ ಶಿವಲಿಂಗೇಗೌಡ, ಸಿಬ್ಬಂದಿ ಬಸವೇಶ್, ಸಂತೋಷ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಸತಿ ಯೋಜನೆ ಅನುಷ್ಠಾನಕ್ಕೆ ಪಂಚಾಯತ್ ರಾಜ್ ಅಧಿಕಾರಿಗಳ ಸಭೆ

ಮದ್ದೂರು:ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ವಸತಿ ರಹಿತ ಹಾಗೂ ವಸತಿ ನಿರಾಶ್ರಿತರಿಗೆ ಸರ್ಕಾರದ ವಸತಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.

ತಾಲೂಕಿನ ಎಲ್ಲಾ ಗ್ರಾಪಂ ವ್ಯಾಪ್ತಿಗಳಲ್ಲಿ ಸರ್ಕಾರಿ ಜಾಗಗಳನ್ನು ತುರ್ತಾಗಿ ಗುರುತಿಸಿ, ಸರ್ವೇ ಹಾಗೂ ಅಳತೆ ಕಾರ್ಯವನ್ನು ಕೈಗೊಂಡು ಅಗತ್ಯ ದಾಖಲೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.ಗುರುತಿಸಲಾದ ಜಾಗಗಳಲ್ಲಿ ವಸತಿ ನಿರ್ಮಾಣಕ್ಕೆ ಸೂಕ್ತ ಸ್ಥಳಗಳನ್ನು ಆಯ್ಕೆ ಮಾಡಿ, ಮುಂದಿನ ದಿನಗಳಲ್ಲಿ ವಸತಿ ರಹಿತ ಬಡವರಿಗೆ ಸೈಟ್ ಹಾಗೂ ವಸತಿ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು.

ವಸತಿ ಕಲ್ಪಿಸುವುದು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಅರ್ಹ ಫಲಾನುಭವಿಗಳಿಗೆ ಯಾವುದೇ ವಿಳಂಬವಿಲ್ಲದೆ ಸೌಲಭ್ಯ ತಲುಪಿಸುವುದು ನಮ್ಮ ಆದ್ಯತೆಯಾಗಿದೆ. ಅಧಿಕಾರಿಗಳು ಗ್ರಾಪಂ ಮಟ್ಟದಲ್ಲಿಯೇ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಾಮಾನ್ಯ ಜನರು ಹಾಗೂ ರೈತರು ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಜನಪರವಾಗಿ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಯಿತು.ಸಭೆಯಲ್ಲಿ ತಹಸೀಲ್ದಾರ್ ಶಿವಕುಮಾರ್ ಬಿರಾದಾರ್, ನಗರಸಭೆ ಆಯುಕ್ತೆ ರಾಧಿಕಾ, ಸೆಸ್ಕ್ ಇಇ ಶಿವಕುಮಾರ್, ತಾಪಂ ಇಒ ರಾಮಲಿಂಗಯ್ಯ, ಬಿಇಒ ಧನಂಜಯ್ಯ, ಟಿಎಚ್‌ಒ ಡಾ.ರವಿಶಂಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ರೈತರ ಪ್ರತಿಭಟನೆ
ಅಧ್ಯಾಪಕರು ಕೌಶಲ್ಯಗಳನ್ನು ರೂಪಿಸಿಕೊಳ್ಳಬೇಕು: ಪ್ರೊ.ಡಿ.ಎಸ್.ಪ್ರತಿಮಾ