ಕನ್ನಡಪ್ರಭ ವಾರ್ತೆ ಯಾದಗಿರಿ
ಸಮೀಪದ ಅಬ್ಬೆತುಮಕೂರಿನಲ್ಲಿ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ನಿಮಿತ್ತ ಮೂರನೇ ದಿನದ ಕಾರ್ಯಕ್ರಮದಲ್ಲಿ ನಡೆದ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಬ್ಬೆತುಮಕೂರಿನ ವಿಶ್ವಾರಾಧ್ಯರ ಸಿದ್ದ ಸಂಸ್ಥಾನ ಮಠ ಪೀಠಾಧಿಪತಿಗಳ ಸಂಕಲ್ಪ ಶಕ್ತಿಯಿಂದ ಪ್ರವರ್ಧಮಾನಗೊಳ್ಳುತ್ತಿದೆ. ಡಾ. ಗಂಗಾಧರ ಸ್ವಾಮಿಗಳ ನೇತೃತ್ವದಲ್ಲಿ ಅಲ್ಪ ಅವಧಿಯಲ್ಲಿಯೇ ಕಲ್ಪತರುವಿನಂತೆ ಶ್ರೀಮಠ ಬೆಳೆದು ನಿಂತಿದೆ ಎಂದರು.ನ್ಯಾಯವಾದಿ ಅನಂತರೆಡ್ಡಿ ಗುರಸುಣಗಿ ಮಾತನಾಡಿ, ನಾಟಕ ಸಾಮಾಜಿಕ ಪರಿವರ್ತನೆಗೆ ಕಾರಣಿಭೂತವಾಗುತ್ತದೆ. ರಂಗ ಕಲಾವಿದರು ತಮ್ಮ ನಟನೆಯ ಮೂಲಕ ಪಾತ್ರಕ್ಕೆ ಜೀವ ತುಂಬುವುದರ ಜತೆಗೆ ಜನತೆಗೆ ಉತ್ತಮವಾದ ಸಂದೇಶವನ್ನು ನೀಡುತ್ತಾರೆ. ಹೀಗಾಗಿ ನಾಟಕ ಜನರ ಬದುಕಿನ ಬದಲಾವಣೆಗೆ ಕಾರಣವಾಗುತ್ತದೆ ಎಂದರು.
ಪೀಠಾಧಿಪತಿ ಡಾ. ಗಂಗಾಧರ ಸ್ವಾಮಿಗಳು, ಡಾ. ಸುಭಾಶ್ಚಂದ್ರ ಕೌಲಗಿ ಇದ್ದರು. ನಂತರ ಸಾಣೆಹಳ್ಳಿಯ ಶಿವಸಂಚಾರಿ ಕಲಾ ತಂಡದಿಂದ ಜತೆಗಿರುವನು ಚಂದಿರ ಎಂಬ ನಾಟಕ ಪ್ರದರ್ಶನಗೊಂಡಿತು.