ಬಸವಕಲ್ಯಾಣ: ಭಕ್ತಿಯಿಂದ ಮಾಡಿದ ಪ್ರತಿ ಕಾರ್ಯದಲ್ಲಿಯೂ ಫಲಶೃತಿ ನಿಶ್ಚಿತ, ಶುದ್ಧ ಪರಿಶ್ರಮದಲ್ಲಿ ಪರಮಾತ್ಮನ ಅಂತ:ಕರಣವಿರುತ್ತದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ದುರಾಸೆ ಹಾಗೂ ಅವಸರದಿಂದ ಕೂಡಿದ ಧಾವಂತದ ಜೀವನ ಶೈಲಿಯಿಂದ ಹೊರಬಂದು, ಗುರು ಭಕ್ತಿ, ದೈವಭಕ್ತಿ, ರಾಷ್ಟ್ರಭಕ್ತಿ, ಕಾಯಕ ನಿಷ್ಠೆ, ದಾಸೋಹ, ಪರೋಪಕಾರದಂತಹ ಮೌಲಿಕ ಆಭರಣಗಳು ಧರಿಸಿದ್ದೆ ಆದರೆ ಬದುಕಿಗೊಂದು ಧನ್ಯತೆ ಬರುತ್ತದೆ. ಪ್ರಕೃತಿ ಸಹಜ ಬಾಳ್ವೆಯಿಂದ ಆನಂದದ ಅನುಭೂತಿ ಲಭಿಸುತ್ತದೆ.
ಗದಲೇಗಾಂವ ಬಿ ಗ್ರಾಮಸ್ಥರ ಭಕ್ತಿ ನಮಗೆ ಖುಷಿ ನೀಡಿದ್ದು ಸರ್ವರಿಗೂ ಭಗವಂತ ಕೃಪೆಯ ಶ್ರೀರಕ್ಷೆ ದೊರಕುವಂತಾಗಲಿ ಎಂದು ಶುಭ ಹಾರೈಸಿದರು.ಗುರುಲಿಂಗಪ್ಪ ದೇಗಾಂವ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.ಮಲ್ಲಿನಾಥ ಹಿರೇಮಠ ಹಾರಕೂಡ, ಗೋಪಾಲರಾವ ದೇಗಾಂವ, ಪಂಡಿತರಾವ ಪೊಲೀಸ್ ಪಾಟೀಲ, ರಾಜಕುಮಾರ ಪಾಟೀಲ, ಪೃಥ್ವಿರಾಜ ದೇಗಾಂವ, ಬಾಬುಸಾಬ್ ಪಟೇಲ್, ಕಾಶಪ್ಪ ದೇಗಾಂವ, ತುಕಾರಾಮರೆಡ್ಡಿ, ವೆಂಕಟರೆಡ್ಡಿ ಬಂದೆ, ಪುಂಡಲೀಕರೆಡ್ಡಿ ಹರಿದಾಸ್, ಜ್ಞಾನರೆಡ್ಡಿ ಉಪಸ್ಥಿತರಿದ್ದರು.
ಸಮಸ್ತ ಗದಲೇಗಾಂವ ಬಿ. ಗ್ರಾಮದ ಸದ್ಭಕ್ತರು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರಿಗೆ ತುಲಾಭಾರ ನೆರವೇರಿಸಿ ಆಶೀರ್ವಾದ ಪಡೆದರು.