ಎಬಿವಿಪಿ ಉಡುಪಿ ತಾಲೂಕು ಅಭ್ಯಾಸವರ್ಗ ಸಂಪನ್ನ

KannadaprabhaNewsNetwork |  
Published : Nov 25, 2024, 01:01 AM IST
24ಎಬಿವಿಪಿ | Kannada Prabha

ಸಾರಾಂಶ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ತಾಲೂಕು ಅಭ್ಯಾಸ ವರ್ಗವು ಶನಿವಾರ ಕಡಿಯಾಳಿಯ ಕಾತ್ಯಾಯನಿ ಮಂಟಪದಲ್ಲಿ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಉಡುಪಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ತಾಲೂಕು ಅಭ್ಯಾಸ ವರ್ಗವು ಶನಿವಾರ ಕಡಿಯಾಳಿಯ ಕಾತ್ಯಾಯನಿ ಮಂಟಪದಲ್ಲಿ ಸಂಪನ್ನಗೊಂಡಿತು.

ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಮುರಳಿ ಕೃಷ್ಣ ಉಪಾಧ್ಯಾಯ ವರ್ಗವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭ ಮಂಗಳೂರು ವಿಭಾಗ ಸಂಚಾಲಕ ಗಣೇಶ್ ಪೂಜಾರಿ, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯೆಯಾದ ಸಂಹಿತಾ ಕೆ. ಹಾಗೂ ತಾಲೂಕು ಸಂಚಾಲಕ ಶ್ರೇಯಸ್ ಅಂಚನ್ ಉಪಸ್ಥಿತರಿದ್ದರು.ವಿವಿಧ ಸಂಘಟನಾತ್ಮಕ ಅವಧಿಗಳ ನಂತರ ಸಮಾರೋಪ ಸಮಾರಂಭವು ಜರುಗಿತು. ಜಿಲ್ಲಾ ಸಂಚಾಲಕರಾದ ಕಾರ್ತಿಕ್ ಎಂ., 2024-25ನೇ ಸಾಲಿನ ಉಡುಪಿ ನಗರದ ನೂತನ ಕಾರ್ಯಕಾರಿಣಿಯನ್ನು ಘೋಷಿಸಿದರು. ತಾಲೂಕು ಸಂಪರ್ಕ ಪ್ರಮುಖರಾಗಿ ಬ್ರಹ್ಮಾವರ ರುಕ್ಮಿಣಿ ಶೆಟ್ಟಿ ಕಾಲೇಜಿನ ವಿದ್ಯಾರ್ಥಿ ಶ್ರೀಜಿತ್, ನಗರ ಅಧ್ಯಕ್ಷರಾಗಿ ಉದ್ಯಾವರ ಎಸ್.ಡಿ.ಎಂ ಆಯುರ್ವೇದ ಕಾಲೇಜು ಪ್ರಾಧ್ಯಾಪಕ ಸದಾನಂದ ಭಟ್ ಕಾಪು ಅವರನ್ನು ಮರು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ ಅತಿಥಿ ಉಪನ್ಯಾಸಕ ಪ್ರವೀಣ್ ಆಚಾರ್ಯ ಅವರನ್ನು ಆರಿಸಲಾಯಿತು.

ನಗರ ಕಾರ್ಯದರ್ಶಿಯಾಗಿ ಪೂರ್ಣ ಪ್ರಜ್ಞಾ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿನಿ ಮಾಣಿಕ್ಯ ಭಟ್, ಸಹ ಕಾರ್ಯದರ್ಶಿಯಾಗಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಶಿವನ್, ನಗರ ಸಂಪರ್ಕ ಪ್ರಮುಖ್ ಆಗಿ ಮನೀಶ್, ಕಾರ್ಯಾಲಯ ಪ್ರಮುಖ್ ಆಗಿ ರಕ್ಷಿತಾ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಘೋಷಿಸಲಾಯಿತು.ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ನಿಕಟಪೂರ್ವ ನಗರ ಕಾರ್ಯದರ್ಶಿ ಹಾಗೂ ಕರ್ನಾಟಕ ದಕ್ಷಿಣ ಪ್ರಾಂತ ಸಾಮಾಜಿಕ ಜಾಲತಾಣ ಸಹ ಸಂಚಾಲಕ ಶ್ರೀವತ್ಸ ಡಿ ಗಾಂವ್ಸ್‌ಕರ್, ನೂತನ ಕಾರ್ಯಕಾರಿಣಿಗೆ ಶುಭ ಕೋರಿ ಮುಂದಿನ ಕಾರ್ಯ ಯೋಜನೆಯನ್ನು ಚರ್ಚಿಸಿದರು.ಅಭ್ಯಾಸ ವರ್ಗದಲ್ಲಿ ಮಂಗಳೂರು ವಿಭಾಗ ಸಾಮಾಜಿಕ ಜಾಲತಾಣ ಪ್ರಮುಖರಾದ ನವೀನ್, ವಿಭಾಗ ಖೇಲೋ ಭಾರತ್ ಪ್ರಮುಖರದ ಸ್ವಸ್ತಿಕ್ ಪೂಜಾರಿ, ಜಿಲ್ಲಾ ಎಸ್.ಎಫ್.ಡಿ. ಪ್ರಮುಖರಾದ ಕಿಶೋರ್, ಉಡುಪಿ ತಾಲೂಕು ಸಹ ಸಂಚಾಲಕರಾದ ಅನಂತಕೃಷ್ಣ ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ