ಮತದಾನ ಮಾಡಿದವರಿಗೆ ಸಸಿ ನೀಡಿದ ಎಸಿ

KannadaprabhaNewsNetwork |  
Published : May 08, 2024, 01:02 AM IST
7ಐಎನ್‌ಡಿ1,ಯುವ ಮತದಾರರನ್ನು ಸೆಳೆಯಲು ಸಹಾಯಕ ಚುನಾವಣಾಧಿಕಾರಿ ಹಾಗೂ ಎಸಿ ಅಬೀದ್‌ ಗದ್ಯಾಳ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಅವರು ವಿವಿಧ ಜಾತಿಯ 350 ಕ್ಕೂ ಹೆಚ್ಚು ಸಸಿಗಳನ್ನು ಮತದಾನ ಮಾಡಿದ  ಯುವ ಮತದಾರರಿಗೆ ನೀಡುವುದರ ಮೂಲಕ ಚುನಾವಣಾ ಜಾಗ್ರತಿ ಮೂಡಿಸಿದರು. | Kannada Prabha

ಸಾರಾಂಶ

ಯುವ ಮತದಾರರನ್ನು ಸೆಳೆಯಲು ಸಹಾಯಕ ಚುನಾವಣಾಧಿಕಾರಿ ಹಾಗೂ ಎಸಿ ಅಬೀದ ಗದ್ಯಾಳ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಅವರು ಭೀರಪ್ಪ ನಗರದ ಸರ್ಕಾರಿ ಶಾಲೆಯಲ್ಲಿ ತೆರೆದ ಮತಗಟ್ಟೆಯಲ್ಲಿ 350 ವಿವಿಧ ಜಾತಿ ಸಸಿಗಳನ್ನು ಮತ ಹಾಕಿದ ಯುವ ಮತದಾರರಿಗೆ ನೀಡಿ ಜಾಗೃತಿ ಮೂಡಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಯುವ ಮತದಾರರನ್ನು ಸೆಳೆಯಲು ಸಹಾಯಕ ಚುನಾವಣಾಧಿಕಾರಿ ಹಾಗೂ ಎಸಿ ಅಬೀದ ಗದ್ಯಾಳ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಅವರು ಭೀರಪ್ಪ ನಗರದ ಸರ್ಕಾರಿ ಶಾಲೆಯಲ್ಲಿ ತೆರೆದ ಮತಗಟ್ಟೆಯಲ್ಲಿ 350 ವಿವಿಧ ಜಾತಿ ಸಸಿಗಳನ್ನು ಮತ ಹಾಕಿದ ಯುವ ಮತದಾರರಿಗೆ ನೀಡಿ ಜಾಗೃತಿ ಮೂಡಿಸಿದರು. ತಾಲೂಕಿನಾದ್ಯಂತ 268 ಮತಗಟ್ಟೆಗಳಲ್ಲಿ ಶಾಂತಯುತವಾಗಿ ಮತದಾನ ನಡೆಯಿತು. ಇಂಡಿ ಪಟ್ಟಣದ ಪುರಸಭೆಯ ವ್ಯಾಪ್ತಿಯ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಬಜಾರ ಓಣಿ ಕೋಣೆ ನಂಬರ್‌ 2 ಮರಗಟ್ಟೆ 92 ಮಹಿಳೆಯರಿಗಾಗಿ ಪಿಂಕ್‌ ಮತಗಟ್ಟೆತೆರೆಯಲಾಗಿತ್ತು. ಈ ವೇಳೆ ಮಹಿಳೆಯರು ಹುರುಪಿನಿಂದ ಮತಚಲಾಯಿಸಿದರು. ಈ ಬಾರಿ ಚುನಾವಣೆಯಲ್ಲಿ ಬೆಳಿಗ್ಗೆ 6.30 ಗಂಟೆಗೆ ಮತದಾರರು ಮತಚಲಾಯಿಸಲು ಸಾಲಿನಲ್ಲಿ ನಿಂತಿದ್ದು ವಿಶೇಷವಾಗಿತ್ತು.

105 ಅಜ್ಜಿ ಮತದಾನ ಮಾಡಿದಳು. ವಿಕಲಚೇತನರು ಸಹ ಹುರುಪಿನಿಂದ ಮತದಾನ ಮಾಡಿದರು. ಪಿಂಕ್‌ ಮತಗಟ್ಟೆಗಳನ್ನು ಒಳಗೊಂಡ ಕೆಲಸವು ಮತಗಟ್ಟೆಗಳನ್ನು ತಳಿರು ತೋರಣಗಳಿಂದ, ಬಲೂನ್‌ ಸೇರಿದಂತೆ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಲಾಗಿತ್ತು. ಪಿಂಕ್‌ ಮತಗಟ್ಟೆಗಳಲ್ಲಿ ಇರುವ ಮಹಿಳಾ ಚುನಾವಣಾ ಸಿಬ್ಬಂದಿಗೆ ಸೋಲಾಪೂರ ಪೇಟಾ ತಲೆಗೆ ಸುತ್ತಿ ಕರ್ತವ್ಯ ನಿರ್ವಹಿಸಿದರು.

ಭೌಗೋಳಿಕ ಮಾನ್ಯತೆಯನ್ನು ಪಡೆದಿರುವ ಇಂಡಿ ಲಿಂಬೆಯ 400 ಸಸಿಗಳನ್ನು ಪಟ್ಟಣದ ವೀರಭಾರತಿ ತಾಂಡಾದಲ್ಲಿ ಮತದಾರರಿಗೆ ನೀಡುವುದರ ಮೂಲಕ ಮತದಾನದ ಜಾಗೃತಿ ಮೂಡಿಸುವುದರ ಜೊತೆಗೆ ಇಂಡಿ ಲಿಂಬೆ ನಾಡು ಎಂಬುದು ತೊರಿಸಿಕೊಟ್ಟಿದ್ದಾರೆ. ವಿಕಲಚೇತನ ಮತದಾರರಿಗೆ ತೊಂದರೆಯಾಗದಂತೆ ಮತಗಟ್ಟೆಗಳಲ್ಲಿ ವ್ಹಿಲ್‌ ಚೇರ್‌ ವ್ಯವಸ್ಥೆ ಮಾಡಲಾಗಿತ್ತು.

ಶಾಸಕ ಯಶವಂತರಾಯಗೌಡ ಪಾಟೀಲ ಅವರು ತಮ್ಮ ಸ್ವಗ್ರಾಮ ಪಡನೂರ ಗ್ರಾಮದ ವಾರ್ಡ್‌ 2ರಲ್ಲಿ ಬರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ತಾಲೂಕಿನಾಧ್ಯಂತ ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿತು. ಮತದಾನ ಶಾಂತಿಯುತವಾಗಿ ನಡೆಯಲು ಡಿವೈಎಸ್ಪಿ ಜಗದೀಶ ನೇತ್ರತ್ವದಲ್ಲಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ