ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯಕ್ಕೆ ಶೈಕ್ಷಣಿಕ ಸ್ವಾಯತ್ತತೆ

KannadaprabhaNewsNetwork |  
Published : Sep 10, 2025, 01:04 AM IST
09ವಾದಿರಾಜ | Kannada Prabha

ಸಾರಾಂಶ

ದೆಹಲಿಯ ವಿಶ್ವವಿದ್ಯಾನಿಲಯ ಅನುದಾನ ಆಯೋಗವು (ಯುಜಿಸಿ) ಈ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟದ ಮೌಲ್ಯಮಾಪನ ನಡೆಸಿ, ಬೆಂಗಳೂರಿನ ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಪರಿಷತ್ತು ಮತ್ತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳ ಶಿಫಾರಸ್ಸಿನ ಮೇರೆಗೆ ೨೦೨೫-೨೬ನೇ ಶೈಕ್ಷಣಿಕ ವರ್ಷದಿಂದ ಮುಂದಿನ ಹತ್ತು ವರ್ಷಗಳ ತನಕ ಶೈಕ್ಷಣಿಕ ಸ್ವಾಯತ್ತತೆ ಮಂಜೂರು ಮಾಡಿದೆ.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಬಂಟಕಲ್ಲಿನಲ್ಲಿರುವ ಉಡುಪಿಯ ಸೋದೆ ಮಠ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ್ದು, ಶೈಕ್ಷಣಿಕ ಸ್ವಾಯತ್ತತೆ (ಅಟೊನಮಸ್) ಹಾಗೂ ಇಲ್ಲಿನ ಎಲ್ಲ ಬಿ.ಇ ಕೋರ್ಸ್‌ಗಳಿಗೆ ರಾಷ್ಟ್ರೀಯ ಮೌಲ್ಯಂಕನ ಮಂಡಳಿ (ಎನ್‌ಬಿಎ) ಯಿಂದ ಮಾನ್ಯತೆ ದೊರಕಿದೆ.ದೆಹಲಿಯ ವಿಶ್ವವಿದ್ಯಾನಿಲಯ ಅನುದಾನ ಆಯೋಗವು (ಯುಜಿಸಿ) ಈ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟದ ಮೌಲ್ಯಮಾಪನ ನಡೆಸಿ, ಬೆಂಗಳೂರಿನ ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಪರಿಷತ್ತು ಮತ್ತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳ ಶಿಫಾರಸ್ಸಿನ ಮೇರೆಗೆ ೨೦೨೫-೨೬ನೇ ಶೈಕ್ಷಣಿಕ ವರ್ಷದಿಂದ ಮುಂದಿನ ಹತ್ತು ವರ್ಷಗಳ ತನಕ ಶೈಕ್ಷಣಿಕ ಸ್ವಾಯತ್ತತೆ ಮಂಜೂರು ಮಾಡಿದೆ. ರಾಷ್ಟ್ರೀಯ ಮೌಲ್ಯಂಕನ ಮಂಡಳಿಯು ಇತ್ತೀಚೆಗೆ ವಿದ್ಯಾಸಂಸ್ಥೆಯ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಕೋರ್ಸ್‌ಗೆ ಮಾನ್ಯತೆ ನೀಡಿರುತ್ತದೆ. ಈ ಮಾನ್ಯತೆಯಿಂದ ಎಲ್ಲಾ ಅರ್ಹ ಪದವಿ ಕೋರ್ಸ್‌ಗಳು ರಾಷ್ಟ್ರೀಯ ಮೌಲ್ಯಂಕನ ಮಂಡಳಿಯಿಂದ ಮಾನ್ಯತೆ ಪಡೆದಂತಾಗಿದೆ. ಇದರ ಜೊತೆಗೆ ವಿದ್ಯಾಸಂಸ್ಥೆಯು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತ್ (ನ್ಯಾಕ್)ನಿಂದಲೂ 2ನೇ ಬಾರಿ ‘ಎ’ ಶ್ರೇಣಿಯ ಮೌಲ್ಯಂಕನ ಪಡೆದಿರುವುದು ವಿದ್ಯಾಸಂಸ್ಥೆಯ ಶೈಕ್ಷಣಿಕ ಪ್ರಗತಿಯನ್ನು ಸೂಚಿಸುತ್ತದೆ.ಕರ್ನಾಟಕ ರಾಜ್ಯದಲ್ಲಿರುವ ಸುಮಾರು ೨೫೦ಕ್ಕೂ ಮಿಕ್ಕಿ ತಾಂತ್ರಿಕ ಶಿಕ್ಷಣ ವಿದ್ಯಾಸಂಸ್ಥೆಗಳಲ್ಲಿ ೧೫ ವರ್ಷಗಳ ಸೇವಾವಧಿಯಲ್ಲಿ ಶೈಕ್ಷಣಿಕ ಸ್ವಾಯತ್ತತೆ ಪಡೆದ ಬೆರಳೆಣಿಕೆಯ ವಿದ್ಯಾಸಂಸ್ಥೆಗಳಲ್ಲಿ ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವೂ ಒಂದು ಎಂಬ ಹೆಗ್ಗೆಳಿಕೆಯನ್ನು ಪಡೆದುಕೊಂಡಿದೆ.ಈ ಶೈಕ್ಷಣಿಕ ಸ್ವಾಯತ್ತತೆಯಿಂದ ವಿದ್ಯಾಸಂಸ್ಥೆಯು ಕಾಲಕಾಲಕ್ಕೆ ಪಠ್ಯ ವಿಷಯಗಳಲ್ಲಿ ಬದಲಾವಣೆ, ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ನ್ನು ಉತ್ತಮವಾಗಿ ಶಿಕ್ಷಣದಲ್ಲಿ ಅಳವಡಿಕೆ, ನೂತನ ಆವಿಷ್ಕಾರಗಳಿಗೆ ಮತ್ತು ಕಲಿಯುವಿಕೆಯ ಮೌಲ್ಯಮಾಪನ ಮಾಡುವುದು ಸುಲಭವಾಗಲಿದೆ.ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಮತ್ತು ಹೊಸ ಆವಿಷ್ಕಾರವನ್ನು ಅಳವಡಿಸಲು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯು ಶ್ರೀ ಸೋದೆ ವಾದಿರಾಜ ಫೌಂಡೇಶನ್ ಎಂಬ ಸೆಕ್ಷನ್ ೮ ಕಂಪನಿಯನ್ನು ಹುಟ್ಟುಹಾಕಿದ್ದು ಇದರ ಮೂಲಕ ಮಧ್ವ ಇನ್‌ಕ್ಯುಬೇಟರ್ ಫಾರ್ ಟೆಕ್ನಾಲಜಿ, ಇನ್ನೋವೇಶನ್ ಮತ್ತು ಎಂಟ್ರಪ್ರೆನ್ಯೂರ್‌ಶಿಪ್ ಎಂಬ ಇನ್‌ಕ್ಯುಬೇಶನ್ ಕೇಂದ್ರವನ್ನು ಕೇಂದ್ರ ಸರ್ಕಾರದ ಎಂಎಸ್‌ಎಂಇ ಸಚಿವಾಲಯವು ಗುರುತಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ