ಕನ್ನಡಪ್ರಭ ವಾರ್ತೆ ಉಡುಪಿ
ಮಹಾತ್ಮಾ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ೨೦೨೫-೨೬ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನಾ ಮಂಡಳಿಯ ಉದ್ಘಾಟನಾ ಸಮಾರಂಭವು ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ. ನಿತ್ಯಾನಂದ ವಿ. ಗಾಂವ್ಕರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಸಮಾಜ ಸೇವೆಯ ಮನೋಭಾವ ಬೆಳೆಸಿಕೊಳ್ಳಬೇಕು. ಯುವಕರು ದೇಶದ ಭವಿಷ್ಯವಾಗಿರುವುದರಿಂದ ಜವಾಬ್ದಾರಿತನದಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮೈಯ, ಮಣಿಪಾಲದ ಟಿ.ಎಂ.ಎ. ಪೈ ಸ್ಕಿಲ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಟಿ. ರಂಗ ಪೈ ಆಗಮಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಎಂ. ವಿಶ್ವನಾಥ್ ಪೈ ಮತ್ತು ಬಿಕಾಂ/ಬಿಬಿಎ ಸಂಯೋಜಕಿ ಡಾ. ಮಲ್ಲಿಕಾ ಎ. ಶೆಟ್ಟಿ ಉಪಸ್ಥಿತರಿದ್ದರು.೨೦೨೫-೨೬ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನ ಮಂಡಳಿಯ ಅಧ್ಯಕ್ಷ ಧೀರಜ್ (ತೃತೀಯ ಬಿಕಾಂ), ಕಾರ್ಯದರ್ಶಿ: ಕ್ಯಾರೆನ್ ಲಿಸಾ ಅರೋನ್ (ತೃತೀಯ ಬಿಸಿಎ), ಉಪಾಧ್ಯಕ್ಷರ: ಪುಣ್ಯ (ತೃತೀಯ ಬಿಸಿಎ), ಪ್ರತೀಕ್ (ತೃತೀಯ ಬಿಸಿಎ), ತೇಜಸ್ವಿ (ದ್ವಿತೀಯ ಬಿಸಿಎ), ಸಹ ಕಾರ್ಯದರ್ಶಿಗಳು: ಧನ್ಯಾ (ತೃತೀಯ ಬಿಸಿಎ), ಅನನ್ಯಾ (ತೃತೀಯ ಬಿಸಿಎ ), ಪ್ರಿಯಾ (ದ್ವಿತೀಯ ಬಿಬಿಎ) ಕ್ರೀಡಾ ಕಾರ್ಯದರ್ಶಿಗಳು: ಛಾಯಾ (ತೃತೀಯ ಬಿಸಿಎ), ರೋಶೆಲ್ (ತೃತೀಯ ಬಿಕಾಂ), ಸಾಂಸ್ಕೃತಿಕ ಕಾರ್ಯದರ್ಶಿ: ಪ್ರಜ್ಞಾ (ತೃತೀಯ ಬಿಸಿಎ), ಸಾಹಿತ್ಯ ಕಾರ್ಯದರ್ಶಿ: ಅನುಪಮಾ (ದ್ವಿತೀಯ ಬಿಕಾಂ) ಪ್ರತಿಜ್ಞೆ ಸ್ವೀಕರಿಸಿದಿರು. ಧೀರಜ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಕ್ಯಾರನ್ ಲಿಸಾ ವಂದಿಸಿದರು. ಮಧುರ ನಿರೂಪಿಸಿದರು.