ಹುಬ್ಬಳ್ಳಿ: ಜೀವನದಲ್ಲಿ ಕಷ್ಟ- ಸುಖಗಳು ಬರುವುದು ಸಾಮಾನ್ಯ, ಸುಖ ಬಂದಾಗ ಹಿಗ್ಗದೆ, ಕಷ್ಟಗಳು ಬಂದಾಗ ಕುಗ್ಗದೆ ಎರಡನ್ನು ಸಮಾನವಾಗಿ ಸ್ವೀಕರಿಸಿ ದೇವರ ಮೊರೆ ಹೋಗಬೇಕು ಎಂದು ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಹೇಳಿದರು.
ಹುಲಿಗೆಮ್ಮ ದೇವಿ ದೇವಸ್ಥಾನದ ಎಲ್ಲ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆದುಕೊಂಡು ಬಂದಿರುವುದು ಅಭಿನಂದನಾರ್ಹ. ಡಾ. ಹುಲಿಗೆಮ್ಮ ಪೋಸಾ ಅಮ್ಮನವರ ಅವಿರತ ಪರಿಶ್ರಮ ಮತ್ತು ಸೇವಾಮನೋಭಾವ ನಂಬಿ ಬಂದ ಭಕ್ತರಿಗೆ ಶ್ರೀರಕ್ಷೆಯಾಗಿದೆ ಎಂದರು.
ದೇವಸ್ಥಾನದ ಧರ್ಮದರ್ಶಿ ಮಾತೋಶ್ರೀ ಡಾ. ಹುಲಿಗೆಮ್ಮಾ ಪೋಸಾ ಅಮ್ಮನವರ ಸಾನ್ನಿಧ್ಯದಲ್ಲಿ 5 ಜನ ಮುತ್ತೈದೆಯರೊಂದಿಗೆ ಮೇಯರ್ ಜ್ಯೋತಿ ಪಾಟೀಲ ಕಂಕಣಧಾರಣೆ ಗೈದರು. ಬಳಿಕ ಯು.ಕೆ. ದಿವ್ಯಶ್ರೀ ಭರತನಾಟ್ಯ ಪ್ರಸ್ತುತ ಪಡಿಸಿದರು.ಈ ಸಂದರ್ಭದಲ್ಲಿ ಹಿರಿಯರಾದ ತೋಟಪ್ಪ ನಿಡಗುಂದಿ, ಮಹೇಶ ದಾಬಡೆ, ಸುರೇಶ ಪೂಜಾರಿ, ಎಚ್.ಪಿ. ಧೂಪದ, ವಿಠ್ಠಲ ಏಕಬೋಟೆ, ಗುರು ಬನ್ನಿಕೊಪ್ಪ, ನಾಗರಾಜ ಕತ್ರಿಮಲ್, ನಾರಾಯಣಸಿಂಗ್ ರಜಪೂತ, ಬಸವಂತಪ್ಪ ಅನವಾಲ, ನಾಗೇಶ್ ಡೊಂಗರೆ, ಯಲ್ಲಪ್ಪ ಕೋಸಗಿ, ಶಿವರಾಜ ಪುಸಲೂರ, ಶ್ರೀಧರ ಕೋಪರ್ಡೆ, ಅನುಪಮಾ ಅಕ್ಕೂರ, ಶ್ರೀದೇವಿ ಧೂಪದ, ಶೈಲಜಾ ಹಳ್ಳಿಕೇರಿ, ಪದ್ಮಾ ದಿವಟೆ, ಲತಾ ಹಳ್ಳಿಕೇರಿ, ಕೋಮಲ ಮುಗಳೆ, ಪೂರ್ಣಿಮಾ ಕ್ಷೀರಸಾಗರ, ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಇದ್ದರು. ಗುರು ಬನ್ನಿಕೊಪ್ಪ ನಿರೂಪಿಸಿ, ವಂದಿಸಿದರು.ವಿವಿಧ ಧಾರ್ಮಿಕ ಕಾರ್ಯಕ್ರಮ