ರಾಸಾಯನಿಕ ತಯಾರಿಕಾ ಘಟಕಗಳಿಗೆ ಲಗ್ಗೆ

KannadaprabhaNewsNetwork |  
Published : Feb 06, 2026, 01:45 AM IST
ಚಿತ್ರ 5ಬಿಡಿಆರ್3ಹುಮನಾಬಾದ್‌ ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ವಿವಿಧ ಕಾರ್ಖಾನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

Access to chemical manufacturing units

- ಡಿವೈಎಸ್ಪಿ ಮಡೋಳಪ್ಪ ಮಾರ್ಗದರ್ಶನದಂತೆ ಸಿಪಿಐ ಸಂತೋಷ ತಟ್ಟಪಳ್ಳಿ ನೇತೃತ್ವದಲ್ಲಿ ದಾಳಿ; ದಾಖಲೆಗಳ ಪರಿಶೀಲನೆಕನ್ನಡಪ್ರಭ ವಾರ್ತೆ, ಹುಮನಾಬಾದ್‌

ಕಾರ್ಖಾನೆಗಳ ಕಚ್ಚಾ ಸಾಮಗ್ರಿಗಳ ಬಳಕೆ, ಉತ್ಪಾದನೆ, ಕಾರ್ಮಿಕರ ನಿರ್ವಹಣೆ, ಸುರಕ್ಷತಾ ನಿಯಮಗಳು, ಸಂಸ್ಕರಣಾ ಘಟಕ, ಮಾಲಿನ್ಯ ನಿಯಂತ್ರಣ, ಬಾಯ್ಲರ್‌ಗಳ ನೋಂದಣಿ ಮತ್ತು ಪ್ರಮಾಣಪತ್ರ ನವೀಕರಣ, ಪರವಾನಗಿ ಮತ್ತು ನವೀಕರಣ, ಕಾರ್ಖಾನೆಯಲ್ಲಿ ಸಂಭವಿಸುವ ಅಪಘಾತಗಳ ಸುರಕ್ಷತೆ ಕುರಿತು ಪೊಲೀಸರು ದಾಳಿ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.ಪಟ್ಟಣದ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ಹಾಗೂ ಟೈರ್‌ ಪೈರೋಲಿಸರ್‌ ಕಾರ್ಖಾನೆ ಸೇರಿದಂತೆ ವಿವಿಧ ಕಾರ್ಖಾನೆಗಳ ಮೇಲೆ ಡಿವೈಎಸ್ಪಿ ಮಡೋಳಪ್ಪ ಮಾರ್ಗದರ್ಶನದಂತೆ ಸಿಪಿಐ ಸಂತೋಷ ತಟ್ಟಪಳ್ಳಿ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಮಂಗಳವಾರ ಕೈಗಾರಿಕಾ ಪ್ರದೇಶದಲ್ಲಿ ನಡೆದ ಬೆಂಕಿ ಅವಘಡ ಹಾಗೂ ಮೋಳಕೇರಾ ಗ್ರಾಮದಲ್ಲಿ ನಿಗೂಢ ಸ್ಫೋಟ ಹಿನ್ನೆಲೆಯಲ್ಲಿ ನಿತ್ಯ ಕಾರ್ಖಾನೆಗಳ ಎಷ್ಟು ವಾಹನಗಳ ಮೂಲಕ ರಾಸಾಯನಿಕ ತ್ಯಾಜ್ಯ ಹೊರ ಹೋಗುತ್ತವೆ. ಕೈಗಾರಿಕಾ ಪ್ರದೇಶದಲ್ಲಿ ಎಲ್ಲಾದರೂ ತ್ಯಾಜ್ಯ ಹರಿ ಬಿಡಲಾಗಿದೆಯೇ ಎಂಬ ಕುರಿತು ತನಿಖೆ ಮೂಲಕ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಹಾಗೂ ನಿಯಮಬಾಹೀರ ಚಟುವಟಿಕೆಗಳು ಕಡಿವಾಣ ಹಾಕಲು ದಿನವಿಡೀ ಕೈಗಾರಿಕಾ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಹೇಳಿದರು.ಪಿಎಸ್‌ಐ ಸುರೇಶಕುಮಾರ, ಸಂಚಾರ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಇಬ್ಬರು ಸಿಪಿಐ, ಹತ್ತು ಪಿಎಸ್‌ಐ, 40 ಸಿಬ್ಬಂದಿ ಸೇರಿದಂತೆ 10 ತಂಡಗಳನ್ನು ರಚಿಸಿ ಏಕ ಕಾಲಕ್ಕೆ ವಿವಿಧ ಕಾರ್ಖಾನೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಮಾಹಿತಿ ಸಂಗ್ರಹಿಸಿದರು. ಜಿಲ್ಲಾ ಮಾಲಿನ್ಯ ನಿಯಂತ್ರಣಾ ಧಿಕಾರಿ ಮೃತ್ಯುಂಜಯ, ಸಂತೋಷ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ
ಅಕ್ರಮ ಬಾಂಗ್ಲಾದೇಶಿಯರ ಪತ್ತೆಗೆ ರಾಜ್ಯಾದ್ಯಂತ ಬೇಟೆ