ಆರೋಪಿ ಅವತಾರ್‌ ಸಿಂಗ್‌ ಕಾಲಿಗೆ ಕಲಬುರಗಿ ಪೊಲೀಸರಿಂದ ಗುಂಡೇಟು

KannadaprabhaNewsNetwork |  
Published : Sep 01, 2024, 01:48 AM IST
ಫೋಟೋ- ಅವತಾರ್‌ ಸಿಂಗ್‌ 1 ಮತ್ತು ಅವತಾರ್ ಸಿಂಗ್‌ 2ಕಲಬುರಗಿ ನಗರ ಹೊರ ವಲಯ ಉಪಳಾಂವ್‌ ಕ್ರಾಸ್‌ ಬಳಿ ಬಂಧಿಸಲು ಹೋದಾಗ ಆರೋಪಿ ಅವತಾರ್‌ ಸಿಂಗ್‌ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ಮಾಡಿದಾಗ ಬ್‌ ಅರ್ಬನ್‌ ಪೊಲೀಸ್‌ ಇನ್ಸಪೆಕ್ಟರ್‌ ಸಂತಷ ತಟ್ಟೆಪಳ್ಳಿ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರೆ. | Kannada Prabha

ಸಾರಾಂಶ

ಕಲಬುರಗಿಯಲ್ಲಿ ಪೊಲೀಸರು ಧಾಬಾ ಗಲಾಟೆಯೊಂದರಲ್ಲಿ ಭಾಗಿಯಾಗಿ 4 ತಿಂಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಅವತಾರ್ ಸಿಂಗ್‌ನನ್ನು ಬಂಧಿಸಲು ಗುಂಡು ಹಾರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಯಲ್ಲಿ ಪೊಲೀಸರು ಧಾಬಾ ಗಲಾಟೆಯೊಂದರಲ್ಲಿ ಭಾಗಿಯಾಗಿ 4 ತಿಂಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಅವತಾರ್ ಸಿಂಗ್‌ನನ್ನು ಬಂಧಿಸಲು ಗುಂಡು ಹಾರಿಸಿದ್ದಾರೆ.

ಬಂಧನಕ್ಕೆ ತೆರಳಿದ್ದಾಗ ಆರೋಪಿ ಅವತಾರ್ ಸಿಂಗ್‌ ಪರಾರಿಯಾಗಲು ಯತ್ನಿಸಿದ್ದ, ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆಗ ಮುಂದಾಗಿದ್ದ. ಸಬ್‌ ಅರ್ಬನ್‌ ಪೊಲೀಸರು ಈತನಿಗೆ ಹೇಳಿದರೂ ಕೇಳಿರಲಿಲ್ಲ.

ನಂತರ ಗಾಳಿಯಲ್ಲಿ ಗುಡು ಹಾರಿಸಿ ಬಂಧನಕ್ಕೆ ಮುುಂದಾದಾಗಲೂ ಅವತಾರ್ ಸಿಂಗ್‌ ತಪ್ಪಿಸಿಕೊಳ್ಳಲು ಮುಂದಾಗಿದ್ದ. ಆಗ ಸಬ್‌ ಅರ್ಬನ್‌ ಪೊಲೀಸ್‌ ಇನ್ಸಪೆಕ್ಟರ್‌ ಅವರು ಅವತಾರ್‌ ಸಿಂಗ್‌ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕೊಲೆ, ಸುಲಿಗೆ, ಕೊಲೆ ಯತ್ನದಂತಹ 13ಅಪರಾಧ ಪ್ರಕರಣಗಳು ಆರೋಪಿ ಅವತಾರ್‌ ಸಿಂಗ್‌ ಮೇಲೆ ಕಲಬುರಗಿ ಸೇರಿದಂತೆ ಹಲವು ಜಿಲ್ಲೆ ಹಾಗೂ ತಾಲೂಕುಗಳಲ್ಲಿ ದಾಖಲಾಗಿವೆ. ಈ ಕಾರ್ಯಾ ಚಣರಣೆಯಲ್ಲಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಅವತಾರ್‌ ಸಿಂಗ್‌ ಹಾಗೂ ಆರೋಪಿಯ ಚಾಕು ದಾಳಿಯಿಂದ ಗಾಯಗೊಂಡಿರುವ ಪೊಲೀಸ್‌ ಸಿಬ್ಬಂದಿಗಳಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲಬುರಗಿ, ತಲೆ ಮರೆಸಿಕೊಂಡಿದ್ದ ಆರೋಪಿ, ಕಾಲಿಗೆ ಗುಂಡೇಟು, ಕಲಬುರಗಿ ಪೊಲೀಸ್‌, ಕಲಬುರಗಿ ಸುದ್ದಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ