ಅಂಕೋಲಾ: ದೇವರ ಕೋಣೆಯಲ್ಲಿದ್ದ ಹಿತ್ತಾಳೆ ಹಾಗೂ ಪಂಚಲೋಹದ ಮೂರ್ತಿಯನ್ನು ರಾತ್ರಿ ಹೊತ್ತು ಕದ್ದೊಯ್ದಿದ್ದ ಕಳ್ಳರ ತಂಡವನ್ನು ಪೊಲೀಸರು ಬಂಧಿಸಿ, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು, ಬೈಕ್ ಹಾಗೂ ಮೂರ್ತಿಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೂರು ಕಾರು, ಒಂದು ಬೈಕ್ ಕೃತ್ಯಕ್ಕೆ ಬಳಸಿದ ವಾಹನಗಳಲ್ಲಿ ಒಟ್ಟು 16 ಹಿತ್ತಾಳೆಯ ನಮೂನೆಯ ದೇವರ ಮೂರ್ತಿಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೃತ್ಯ ನಡೆದ 24 ಗಂಟೆಯ ಒಳಗಾಗಿ ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಪ್ರಕರಣವನ್ನು ಭೇದಿಸಿದ್ದು, ಪತ್ತೆ ಕಾರ್ಯ ನಡೆದ ತಂಡವನ್ನು ಎಸ್ಪಿ ಎಂ. ನಾರಾಯಣ ಅಭಿನಂದಿಸಿದ್ದಾರೆ.ಪ್ರಕರಣ ಏನಾಗಿತ್ತು?ಡಿ. 9ರ ತಡರಾತ್ರಿ 2.30 ಗಂಟೆಯ ನಡುವಿನ ಅವಧಿಯಲ್ಲಿ ಹಿಲ್ಲೂರು ಗ್ರಾಮದ ತಿಂಗಳಬೈಲ್‌ನಲ್ಲಿ ಮನೆ ಜನರು ಮನೆಯಲ್ಲಿ ಮಲಗಿರುವಾಗ, ಕಳ್ಳರು ಮನೆಯ ಒಳಗೆ ಪ್ರವೇಶಿಸಿ, ದೇವರ ಕೋಣೆಯ ಬೀಗ ಮುರಿದು ಹಿತ್ತಾಳೆಯ ಲೋಹದ ದೇವರ 47 ಮೂರ್ತಿಗಳನ್ನು ಕದ್ದೊಯ್ದಿದ್ದರು. ಇದರ ಮೌಲ್ಯ ₹1,3 ಲಕ್ಷ ಆಗಿತ್ತು.
ಉತ್ತರಕುಮಾರ ಎಂಬವರ ಮನೆ ಕಳ್ಳತನವಾಗಿದ್ದು, ಅಂದಾಜು ₹10 ಲಕ್ಷ ಬೆಲೆಯ ಚಿನ್ನಾಭರಣ ದೋಚಿದ್ದಾರೆ. ಮನೆ ಮಾಲೀಕರು ತಮ್ಮ ಸ್ವಂತ ಊರಾದ ಬಿಹಾರಕ್ಕೆ ತೆರಳಿದ್ದು, ಡಿ. ೯ರ ರಾತ್ರಿ ಕಳ್ಳತನವಾಗಿರಬಹುದು ಎಂದು ಅಂದಾಜಿಸಲಾಗಿದೆ. ನೆರೆ ಮನೆಯವರಾದ ಪ್ರವೀರಕುಮಾರ ಪ್ರಭಾಕರ ಸರಣಪ್ರಸಾದ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ