ಸರ್ಕಾರದ ಸೌಲಭ್ಯ ಪಡೆದು ಸಾಧನೆ ಮಾಡಿ: ಶಾಸಕ ಡಾ. ಲಮಾಣಿ

KannadaprabhaNewsNetwork |  
Published : Aug 05, 2026, 02:30 AM IST
ನೂತನ ಹಾಸ್ಟೆಲ್‌ ಕಟ್ಟಡ ಉದ್ಘಾಟಿಸಿದ ಶಾಸಕ ಡಾ. ಚಂದ್ರು ಲಮಾಣಿ. ವಿದ್ಯಾರ್ಥಿನಿಯರು ಇದ್ದರು. | Kannada Prabha

ಸಾರಾಂಶ

ವಸತಿನಿಲಯಗಳಲ್ಲಿ ಇದ್ದು ಸಹ ಉತ್ತಮ ಸಾಧನೆ ಮಾಡಿರುವ ಕೀರ್ತಿ ಇಲ್ಲಿನ ಮಕ್ಕಳಿಗೆ, ನಿಲಯಪಾಲಕರಿಗೆ, ಇಲಾಖೆಗೆ ಬರುವಂತಾಗಬೇಕು.

ಲಕ್ಷ್ಮೇಶ್ವರ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ಸಾಕಷ್ಟು ಯೋಜನೆ ಜಾರಿಗೆ ತರುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಸೋಮವಾರ ಪಟ್ಟಣದ ಇಟ್ಟಿಗೆರೆಯ ಹತ್ತಿರ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದ ನೂತನ ಕಟ್ಟಡದಲ್ಲಿ ವಿಶೇಷ ಪೂಜೆ ನೆರವೇರಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾವುದೇ ಸೌಲಭ್ಯಗಳು ಇಲ್ಲದಿರುವ ಸಂದರ್ಭದಲ್ಲಿ ಹಾಸ್ಟೆಲ್‌ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಈಗ ನೀಡಲಾಗಿರುವ ಸೌಲಭ್ಯಗಳಿಂದ ಮಕ್ಕಳು ಯಾವುದೇ ತೊಂದರೆ ಇಲ್ಲದೆ ನಿತ್ಯ ಸರಿಯಾಗಿ ಅಭ್ಯಾಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ. ವಸತಿನಿಲಯಗಳಲ್ಲಿ ಇದ್ದು ಸಹ ಉತ್ತಮ ಸಾಧನೆ ಮಾಡಿರುವ ಕೀರ್ತಿ ಇಲ್ಲಿನ ಮಕ್ಕಳಿಗೆ, ನಿಲಯಪಾಲಕರಿಗೆ, ಇಲಾಖೆಗೆ ಬರುವಂತಾಗಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯವನ್ನು ಸುಮಾರು ₹೩.೫೮ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇಲ್ಲಿ ೧೦೦ ವಿದ್ಯಾರ್ಥಿನಿಯರಿಗೆ ವಸತಿಗಾಗಿ ಅವಕಾಶವಿದ್ದು, ಇಲಾಖೆಯ ನಿಯಮಾನುಸಾರ ವಿದ್ಯಾರ್ಥಿನಿಯರನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ ಎಂದರು.

ಈ ವೇಳೆ ಮುಖಂಡ ಸುನೀಲ ಮಹಾಂತಶೆಟ್ಟರ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ಎಂ.ಆರ್. ಪಾಟೀಲ, ದುಂಡೇಶ ಕೊಟಗಿ, ಗಿರೀಶ ಚೌರಡ್ಡಿ, ಬಸವರಾಜ ಚಕ್ರಸಾಲಿ, ಪ್ರವೀಣ ಬೋಮಲೆ, ಭೀಮಣ್ಣ ಯಂಗಾಡಿ, ಜಗದೀಶ ಪುರಾಣಿಕಮಠ, ಜಾನು ಲಮಾಣಿ, ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಗೋಪಾಲ ಲಮಾಣಿ, ಮುತ್ತಣ್ಣ ಸಂಕನೂರ, ಬಿ.ಎಸ್. ಹಡಪದ, ಸೀಮಾ ಮಡಿವಾಳರ, ಎಸ್.ಎನ್. ಕಳಸಣ್ಣವರ, ಆರ್.ಎಚ್. ಹರಿಜನ ಸೇರಿದಂತೆ ಅನೇಕರು ಇದ್ದರು.

ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ವಿನಾಯಕ ಆಯ್ಕೆ

ಹೊಳೆಆಲೂರು: ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಗ್ರಾಮದ ಮೈಲಾರಪ್ಪ ಚನ್ನಪ್ಪ ಚಲವಾದಿ ಅವರ ಪುತ್ರ ವಿನಾಯಕ ಎಂ. ಚಲವಾದಿ ಆಯ್ಕೆಯಾಗಿದ್ದಾನೆ.ಪ್ರಸ್ತುತ ಗದಗ ಜಿಲ್ಲೆಯ ಕೊರ್ಲಹಳ್ಳಿಯ ಜವಾಹರ ನವೋದಯ ವಿದ್ಯಾಲಯದಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಗಸ್ಟ್‌ ತಿಂಗಳಲ್ಲಿ ಪಂಜಾಬ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾನೆ.ವಿನಾಯಕನ ಸಾಧನೆಗೆ ಗ್ರಾಮದ ಗುರು- ಹಿರಿಯರು, ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು, ತರಬೇತುದಾರರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರುಶಿಷ್ಯ ಪರಂಪರೆ ಹಿಂದೂ ಸಂಸ್ಕೃತಿಯ ಕೊಡುಗೆ: ಡಾ. ರಾಘವೇಂದ್ರ ರಾವ್
ಸಮಾಜದ ಒಗ್ಗೂಡವಿಕೆಯಿಂದ ಅಭಿವೃದ್ಧಿ ಸಾಧ್ಯ: ಗುರುರಾಜ ಗಂಟಿಹೊಳೆ