ಕನ್ನಡಪ್ರಭವಾರ್ತೆ, ತುರುವೇಕೆರೆ
ಇಲ್ಲಿಯ ಜಿಜೆಸಿ ಕ್ರೀಡಾಂಗಣದಲ್ಲಿ ತಾಲೂಕು ಶಿಕ್ಷಣ ಇಲಾಖೆ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಸರಸ್ವತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜಿನ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು. ಕ್ರೀಡೆಗಳಲ್ಲಿ ಭಾಗವಹಿಸಿದರೆ ದೇಹದಾರ್ಢ್ಯ ಹೆಚ್ಚುತ್ತದೆ. ಮನಸ್ಸಿಗೆ ಮುದ ನೀಡುತ್ತದೆ. ಆರೋಗ್ಯವಾದ ಶರೀರ ಲಭಿಸುತ್ತದೆ. ಕ್ರೀಡೆಯು ಓದಿನಷ್ಟೇ ಪ್ರಮುಖವಾಗಿದೆ. ಸಾಧನೆ ಮಾಡಲು ನೂರಾರು ಕ್ಷೇತ್ರಗಳು ಇವೆ. ಓದಿನಲ್ಲಿ ಸಾಧನೆ ಮಾಡುವಂತೆ ಕ್ರೀಡೆಯಲ್ಲೂ ಸಾಧನೆ ಮಾಡಿದವರು ಸಾವಿರಾರು ಮಂದಿ ಇದ್ದಾರೆ. ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದರೆ ಭವಿಷ್ಯದಲ್ಲಿ ಉತ್ತಮ ಹುದ್ದೆ ಲಭಿಸಲಿದೆ ಎಂದು ಹಲವಾರು ಉದಾಹರಣೆಗಳನ್ನು ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಸುನಿಲ್ ಬಾಬು ಮಾತನಾಡಿ, ತಾವು ಶೈಕ್ಷಣಿಕ ಸಂದರ್ಭದಲ್ಲಿ ಉತ್ತಮ ಕ್ರೀಡಾಪಟುವಾಗಿದ್ದೆ. ಹತ್ತು ಹಲವಾರು ಪ್ರಶಸ್ತಿಗಳನ್ನೂ ಸಹ ಗಳಿಸಿದ್ದೇನೆ. ಕ್ರೀಡಾಕ್ಷೇತ್ರ ವಿಶಾಲವಾಗಿದೆ. ನೂರಾರು ಕ್ರೀಡೆಗಳು ಅವಕಾಶವನ್ನು ವಿಸ್ತರಿಸಿವೆ. ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಮಾತ್ರವಲ್ಲ. ನಿಮ್ಮ ನೆಚ್ಚಿನ ಕ್ರೀಡೆಯನ್ನು ಆಯ್ದುಕೊಂಡು ಯಶಸ್ಸುಗಳಿಸಿ ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು.ಈ ಸಂದರ್ಭದಲ್ಲಿ ಬಿಇಒ ಸೋಮಶೇಖರ್, ಇಒ ಅನಂತರಾಜು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ.ರಾಜು, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ತ್ಯಾಗರಾಜು, ಕಾಂಗ್ರೆಸ್ ಮುಖಂಡ ಸುಬ್ರಮಣಿ ಶ್ರೀಕಂಠೇಗೌಡ, ನೋಡಲ್ ಅಧಿಕಾರಿ ನಂಜೇಗೌಡ, ಪ್ರಾಂಶುಪಾಲರಾದ ಲೋಕನಾಥ್, ಹರಿಗೌಡ ಸೇರಿ ಹಲವಾರು ಮಂದಿ ಇದ್ದರು. ತಾಲೂಕಿನಿಂದ ಒಟ್ಟು 11 ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದ್ದರು.