ರಾಮನಗರ: ಇಡೀ ಜಗತ್ತನ್ನೇ ಬದಲಾಯಿಸುವ ಮಾಂತ್ರಿಕ ಶಕ್ತಿ ಶಿಕ್ಷಣಕ್ಕೆ ಇದೆ. ವಿದ್ಯಾರ್ಥಿಗಳು ಶಿಕ್ಷಣ ಎಂಬ ಜ್ಞಾನದ ಸಂಪತ್ತು ಪಡೆದು ಸಾಧನೆಯತ್ತ ಹೆಜ್ಜೆ ಇಡಬೇಕು ಎಂದು ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ಒಬ್ಬ ವ್ಯಕ್ತಿಯ ಚಾರಿತ್ರ್ಯ ನಿರ್ಮಾಣ ಮಾಡುವುದರಲ್ಲಿ, ಒಬ್ಬ ವ್ಯಕ್ತಿಯ ಸಾಮರ್ಥ್ಯ ಹೆಚ್ಚಿಸುವುದರಲ್ಲಿ, ಒಬ್ಬ ವ್ಯಕ್ತಿಯ ಉತ್ತಮವಾಗಿರತಕ್ಕಂತ ಭವಿಷ್ಯವನ್ನು ರೂಪಿಸುವುದರಲ್ಲಿ ಶಿಕ್ಷಣ ಅತ್ಯಂತ ಹೆಚ್ಚು ಮಹತ್ತರವಾಗಿದೆ. ಹಾಗಾಗಿ ಬದುಕಿನಲ್ಲಿ ಶಿಕ್ಷಣವೇ ಪ್ರಧಾನವಾಗಿದ್ದು ವಿದ್ಯಾರ್ಥಿಗಳು ಹಿರಿಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಹಡೆದ ತಂದೆ ತಾಯಿಗಳಿಗೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಡ್ಡದಾರಿಗೆಳೆಯುವ ಸಾಧನಗಳಿಗೆ ದಾಸರಾಗಬೇಡಿ :ಶಿವಗಂಗೆ ಮೇಲಣ ಗವೀಮಠಾಧ್ಯಕ್ಷ ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಭಾಂವತರಾಗಿರುವ ಕಾರಣ ನಿಮ್ಮನ್ನು ವಿಶ್ವ ವೀರಶೈವ ಲಿಂಗಾಯತ ಒಕ್ಕೂಟ ಪ್ರತಿಭಾ ಪುರಸ್ಕಾರದ ಅಭಿನಂದನೆ ಸಲ್ಲಿಸುತ್ತಿದೆ. ಹಿಂದೆ ಹತ್ತು ಇಪ್ಪತ್ತು ವರ್ಷದಲ್ಲಿ ವಿದ್ಯಾರ್ಥಿಗಳ ಮನಸ್ಸನ್ನು ಕೆಡಿಸುವಂತ ಸಾಧನಗಳು ಇರಲಿಲ್ಲ. ಆಗ ಪ್ರತಿಭಾವಂತರಾಗೋದು ಏನು ದೊಡ್ಡ ಮಾತಿರಲಿಲ್ಲ. ಇವತ್ತಿನ ದಿವಸ ವಿದ್ಯಾರ್ಥಿಗಳನ್ನು ಅಡ್ಡದಾರಿಗೆ ಎಳೆಯುವಂತ ನೂರಾರು ಸಾಧನಗಳಿವೆ. ಅವು ಯಾವುವು ಅಂತ ನಿಮಗೆ ಗೊತ್ತಾಗಿದೆ. ನೀವುಗಳು ಈಗಾಗಲೇ ಆ ಎಲ್ಲಾ ಸಾಧನಗಳನ್ನು ತಿರಸ್ಕಾರ ಮಾಡಿದ್ದಕ್ಕಾಗಿ ನಿಮಗೆ ಈದಿನ ಪುರಸ್ಕಾರ ಸಿಗುತ್ತಿದೆ ಎಂದರು.
ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಜಿಲ್ಲಾಧ್ಯಕ್ಷ ಪೋಲೀಸ್ ರುದ್ರೇಶ್ ಮಾತನಾಡಿ, ಜಗದ್ಗುರು ರೇಣುಕಾಚಾರ್ಯ, ಜಗಜ್ಯೋತಿ ಬಸವೇಶ್ವರರು, ಸಿದ್ದಗಂಗಾ ಮಠದ ನಡೆದಾಡುವ ದೇವರು ಶಿವಕುಮಾರ ಮಾಹಾಸ್ವಾಮೀಜಿಯವರ ಸಂಸ್ಮರೋಣತ್ಸವದ ಅಂಗವಾಗಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವೀರಶೈವ ಲಿಂಗಾಯಿತ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಹರಗುರು ಚರಮೂರ್ಥಿಗಳ, ಸಮಾಜದ ಹಿರಿಯರ, ಗಣ್ಯರ ಸಮ್ಮುಖದಲ್ಲಿ ನೆರವೇರಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.
ರಾಮನಗರ ತಾಲೂಕು ಯರೇಹಳ್ಳಿ ವನಸಿರಿ ಆಶ್ರಮದ ಶ್ರೀ ಶಂಕರ್ ಆರಾಧ್ಯ ಗುರೂಜಿ, ರಾಜ್ಯ ವೀರಶೈವ ಲಿಂಗಾಯಿತ ಒಕ್ಕೂಟದ ಅಧ್ಯಕ್ಷ ಜ್ಯೋತಿಪ್ರಕಾಶ ಮಿರ್ಜಿ, ಸೋಲೂರು ಎಂ.ಆರ್.ಆರ್. ನೇಚರ್ ಕ್ಯೂರ್ ಆರ್ಜಿಐ ಡಾ. ಆರ್. ಚೇತನ್ ಕುಮಾರ್, ವೈದ್ಯೆ ಡಾ. ಪುಣ್ಯವತಿ ನಾಗರಾಜ್, ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಮಾತನಾಡಿದರು.
ಕೋಟ್ .........
- ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠ
ರಾಮನಗರದ ರಾಯರದೊಡ್ಡಿಯಲ್ಲಿನ ಆರ್.ವಿ.ಸಿಎಸ್. ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಜಿಲ್ಲಾಮಟ್ಟದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.