ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಭೂಮಾಪನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಪೋಡಿ ಮುಕ್ತ ಅಭಿಯಾನದಡಿಯಲ್ಲಿ ಮೊದಲ ಹಂತದಲ್ಲಿ ಸಪ್ಟೆಂಬರ್ 2015ರಿಂದ ಜುಲೈ 2019ರ ಅಂತ್ಯಕ್ಕೆ ಒಟ್ಟು 590 ಗ್ರಾಮಗಳ ಬಹುಮಾಲೀಕತ್ವದ ಹಿಡುವಳಿದಾರರ ಜಮೀನುಗಳನ್ನು ಪೋಡಿ ಮಾಡಿ, 60476 ಪಹಣಿಗಳನ್ನು ನೀಡಲಾಗಿರುವುದಾಗಿ ತಿಳಿಸಿದರು.
ಎರಡನೇ ಹಂತದ ಪೋಡಿ ಮುಕ್ತ ಅಬಿಯಾನ ಕೈಗೊಳ್ಳಲಾಗಿದ್ದು, ಈ ಅಭಿಯಾನದಡಿ 64 ಗ್ರಾಮಗಳಲ್ಲಿ ಒಟ್ಟು 1733 ಬ್ಲಾಕ್‌ಗಳ ಪೋಡಿ ಪ್ರಕರಣಗಳ ವಿಲೇವಾರಿ ಮಾಡಲಾಗಿದೆ. ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಹಂತ ಹಂತವಾಗಿ ಅಭಿಯಾನ ಕೈಗೊಂಡು ಜಿಲ್ಲೆಯನ್ನು ಪೋಡಿ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲ ರೀತಿಯ ಕ್ರಮವಹಿಸಲಾಗುತ್ತಿದೆ. ಪೋಡಿಗೆ ಬಾಕಿ ಉಳಿದವುಗಳ ಬಗ್ಗೆ ಮಾಹಿತಿ ನೀಡಬೇಕು. ಬಾಕಿ ಉಳಿಯಲು ಕಾರಣವೇನು ಎಂಬುದನ್ನು ಸಹ ತಾಲೂಕವಾರು ಪಟ್ಟಿಮಾಡಿ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.ಜಿಲ್ಲೆಯಲ್ಲಿ ಈವರೆಗೆ 38 ಹೊಸ ಕಂದಾಯ ಗ್ರಾಮಗಳನ್ನಾಗಿ ಗುರುತಿಸಿದ್ದು, ಅವುಗಳಲ್ಲಿ 17 ಗ್ರಾಮಗಳ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 12 ಗ್ರಾಮಗಳ ಅಂತಿ ಅಧಿಸೂಚನೆಯ ಪ್ರಸ್ತಾವನೆಗಳನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಲಾಗಿದೆ. ಉಳಿದ ಗ್ರಾಮಗಳ ಅಧಿಸೂಚನೆ ಕಾರ್ಯ ಪ್ರಗತಿಯಲ್ಲಿರುವುದಾಗಿ ತಿಳಿಸಿದರು.
ಭೂದಾಖಲೆಗಳ ಉಪನಿರ್ದೇಶಕ ರವಿಕುಮಾರ ಎಂ.ಮೋಜಣಿ, ಪಹಣಿ ತಿದ್ದುಪಡಿ, ಪೋಡಿಮುಕ್ತ ಅಭಿಯಾನ, ಕಂದಾಯ ಗ್ರಾಮಗಳ ರಚನೆ, ಕೆರೆ ಅಳತಿ ಕೈಗೊಂಡ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಸಭೆಯಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕ ಚೇತನ, ರವಿಕುಮಾರ ಹಾದಿಮನಿ ಸೇರಿದಂತೆ ಎಸ್.ಪಿ.ಕಿರಗಿ, ಎ.ಜೆ.ಶೇಖ, ಕೊಡತಗೇರಿ, ಆರ್.ಪಿ.ಪಾಟೀಲ, ಎಸ್.ವಿ.ನೀಲನೂರ, ಡಿ.ಎಂ.ಚವ್ಹಾನ, ಎಂ.ಎಂ.ಮದಬಾವಿ, ಎಸ್.ಬಿ.ಹಜೇರಿ, ಬಿ.ಬಿ.ಮುಲ್ಲಾ ಹಾಗೂ ಇತರರು ಉಪಸ್ಥಿತರಿದ್ದರು.