ಮಕ್ಕಳ ಸಮಸ್ಯೆ ಪರಿಹರಿಹಸಲು ಕ್ರಮ: ಪಿಡಿಒ

KannadaprabhaNewsNetwork |  
Published : Jan 23, 2025, 12:49 AM IST
22 ಕ.ಟಿ.ಇ.ಕೆ ಚಿತ್ರ 1 : ಟೇಕಲ್‌ನ ಕೆ.ಜಿ.ಹಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ ಹಳೇಪಾಳ್ಯ ಗ್ರಾಮದಲ್ಲಿ ಮಕ್ಕಳ ಗ್ರಾಮಸಭೆಯಲ್ಲಿ ಪಂಚಾಯ್ತಿ ಉಪಾಧ್ಯಕ್ಷೆ ಮಮತಾಶಶಿಧರ, ಪಿಡಿಒ ವೆಂಕಟೇಶ, ಇಸಿಒ ಜಗದಾಂಬ ಮುಂತಾದವರು ಜ್ಯೋತಿ ಬೆಳಗಿಸಿ ಚಾಲನೆ ನೀಡುತ್ತಿರುವುದು. | Kannada Prabha

ಸಾರಾಂಶ

ಸಭೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ, ಶೈಕ್ಷಣಿಕ, ಬೆಳವಣಿಗೆ, ಭಾಗವಹಿಸುವಿಕೆಯು ಪ್ರಮುಖ ಅಂಶಗಳಾಗಿದ್ದು ಇವುಗಳ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರಿಯಾದ ರೀತಿಯಲ್ಲಿ ಅನುಷ್ಠಾನವಾಗಬೇಕು. ಆಗ ಮಾತ್ರ ಮಕ್ಕಳ ಗ್ರಾಮಸಭೆಗಳು ಯಶಸ್ವಿಯಾಗುತ್ತದೆ. ಮಕ್ಕಳ ಗ್ರಾಮಸಭೆಯಲ್ಲಿ ಹಲವು ಬೇಡಿಕೆ ಮಂಡಿಸಿದ ಶಾಲಾ ಮಕ್ಕಳು

ಕನ್ನಡಪ್ರಭ ವಾರ್ತೆ ಟೇಕಲ್

ಮಕ್ಕಳ ಗ್ರಾಮಸಭೆಯಲ್ಲಿ ಶಾಲಾ ಮಕ್ಕಳ ಸಮಸ್ಯೆಯನ್ನು ಆಲಿಸಲು ಅವರ ಭೌದ್ಧಿಕ ಮಟ್ಟದ ಅಭಿವೃದ್ಧಿಗೆ ಸೂಕ್ತ ವೇದಿಕೆಯಾಗಿದೆ ಎಂದು ಟೇಕಲ್‌ನ ಕೆ.ಜಿ.ಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಮಮತಾಶಶಿಧರ ತಿಳಿಸಿದರು.

ಅವರು ಕೆ.ಜಿ.ಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿನ ಹಳೇಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳ ಗ್ರಾಮಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಮಕ್ಕಳ ಹಕ್ಕುಗಳ ರಕ್ಷಣೆ

ಸಭೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ, ಶೈಕ್ಷಣಿಕ, ಬೆಳವಣಿಗೆ, ಭಾಗವಹಿಸುವಿಕೆಯು ಪ್ರಮುಖ ಅಂಶಗಳಾಗಿದ್ದು ಇವುಗಳ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರಿಯಾದ ರೀತಿಯಲ್ಲಿ ಅನುಷ್ಠಾನವಾಗಬೇಕು. ಆಗ ಮಾತ್ರ ಮಕ್ಕಳ ಗ್ರಾಮಸಭೆಗಳು ಯಶಸ್ವಿಯಾಗುತ್ತದೆ ಎಂದರು.

ವಿದ್ಯಾರ್ಥಿಗಳ ಬೇಡಿಕೆ

ಈ ಸಂದರ್ಭದಲ್ಲಿ ಕೆ.ಜಿ.ಹಳ್ಳಿ ಶಾಲೆ ಮಕ್ಕಳ ಸಭೆಯಲ್ಲಿ ಹೆಣ್ಣು ಮಕ್ಕಳ ಶೌಚಾಲಯ ಬೇಕು, ಕ್ರೀಡಾಂಗಣ, ಕುಡಿಯುವ ನೀರು ಹಾಗೂ ಗ್ರಂಥಾಲಯಕ್ಕೆ ಪ್ರತ್ಯೇಕ ರೂಮ್ ಮತ್ತು ರ್‍ಯಾಕ್ಸ್ ಬೇಕೆಂದರು. ಶೌಚಾಲಯ ಹಾಗೂ ಪುಸ್ತಕಗಳನ್ನು ಇಡಲು ರ್‍ಯಾಕ್ಸ್ ಬೇಕೆಂದರು. ಹಳೇಪಾಳ್ಯದ ಮಕ್ಕಳು ಆಟದ ಮೈದಾನ ಸ್ವಚ್ಛತೆಗೆ ಒತ್ತಾಯಿಸಿದರು. ಶಾಲೆ ಕೆಲವು ಕೊಠಡಿಗಳು ಸೋರುತ್ತಿದೆ ಸರಿಪಡಿಸಿ ಎಂದರು. ಊರುಗುರ್ಕಿ ಶಾಲೆಯವರು ಆಟದ ಮೈದಾನ ಬೇಕೆಂದರು.

ಈ ಸಮಸ್ಯೆಗಳನ್ನು ಆಲಿಸಿದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್‌ ಮಾತನಾಡಿ, ಮಕ್ಕಳ ಗ್ರಾಮಸಭೆಯಲ್ಲಿ ಶಾಲೆಗಳ ತಿಳಿಸಿದ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಇಸಿಒ ಜಗದಾಂಬ, ಸಿಆರ್‌ಪಿ ಸುಬ್ರಮಣಿ, ಗ್ರಾಮೀಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ವೆಂಕಟೇಶಗೌಡ, ಗ್ರಾ.ಪಂ.ಸದಸ್ಯ ವೆಂಕಟರಾಮಯ್ಯ, ಮುಖ್ಯೋಪಾಧ್ಯಾಯ ಆನಂದ್‌ಕುಮಾರ್, ಕಾರ್ಯದರ್ಶಿ ಸವಿತಾ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್