ಶಾಲೆಗೆ ದಿನಸಿ ವಿತರಿಸಿ ನಟ ದರ್ಶನ್‌ ಹುಟ್ಟುಹಬ್ಬ ಆಚರಣೆ

KannadaprabhaNewsNetwork |  
Published : Feb 18, 2026, 01:45 AM IST
ಫೋಟೊ:೧೭ಕೆಪಿಸೊರಬ-೦೧ : ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿರುವ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ದರ್ಶನ್ ಅಭಿಮಾನಿಗಳು ದರ್ಶನ್ ಅವರ ಹುಟ್ಟಹಬ್ಬದ ಅಂಗವಾಗಿ ಶಾಲೆಗೆ ದಿನಸಿ ವಿತರಿಸಿದರು. | Kannada Prabha

ಸಾರಾಂಶ

ಅಭಿಮಾನಿಗಳ ಆರಾಧ್ಯ ದೈವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಕ್ಕೆ ಮಾತ್ರ ತಮ್ಮನ್ನು ತೊಡಗಿಸಿಕೊಂಡಿಲ್ಲ ಬದಲಾಗಿ ದೇಹಿ ಎಂದು ಎದುರು ನಿಂತವರಿಗೆ ಕೈಲಾದಷ್ಟು ಸಹಾಯ ನೀಡಿದ್ದಾರೆ. ಹಾಗಾಗಿ ದರ್ಶನ್ ಕನ್ನಡ ಚಿತ್ರರಂಗದ ಇನ್ನೊಬ್ಬ ಕರ್ಣ ಎಂದು ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಮಹೇಶ್ ಸಂಪಗೋಡು ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಅಭಿಮಾನಿಗಳ ಆರಾಧ್ಯ ದೈವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಕ್ಕೆ ಮಾತ್ರ ತಮ್ಮನ್ನು ತೊಡಗಿಸಿಕೊಂಡಿಲ್ಲ ಬದಲಾಗಿ ದೇಹಿ ಎಂದು ಎದುರು ನಿಂತವರಿಗೆ ಕೈಲಾದಷ್ಟು ಸಹಾಯ ನೀಡಿದ್ದಾರೆ. ಹಾಗಾಗಿ ದರ್ಶನ್ ಕನ್ನಡ ಚಿತ್ರರಂಗದ ಇನ್ನೊಬ್ಬ ಕರ್ಣ ಎಂದು ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಮಹೇಶ್ ಸಂಪಗೋಡು ಹೇಳಿದರು.

ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿರುವ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ದರ್ಶನ್ ಅವರ ಹುಟ್ಟಹಬ್ಬವನ್ನು ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿ ಮಾತನಾಡಿದರು.

ಕರುನಾಡಿನ ಡಿಬಾಸ್ ಎಂದೇ ಅಭಿಮಾನಿ ವಲಯದಲ್ಲಿ ಗುರುತಿಸಿಕೊಂಡಿರುವ ದರ್ಶನ್ ಕನ್ನಡದ ನಾಯಕ ನಟರಲ್ಲಿಯೇ ವಿಭಿನ್ನ ಶೈಲಿಯ ಪಾತ್ರಗಳಲ್ಲಿ ಅಭಿನಯಿಸಿ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದಾರೆ. ಅಲ್ಲದೇ ಸಮಾಜದಲ್ಲಿ ಅತ್ಯಂತ ಕೆಳಸ್ಥರದಲ್ಲಿ ಬದುಕುತ್ತಿರುವವರು ಮತ್ತು ಆರೋಗ್ಯ, ಶಿಕ್ಷಣಕ್ಕಾಗಿ ಬಡವರಿಗೆ ನೆರವಾಗುವ ಮೂಲಕ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ ಎಂದ ಅವರು, ಮುಂದಿನ ದಿನಗಳಲ್ಲಿ ಅವರ ಸಾಮಾಜಿಕ ಕಳಕಳಿಯ ಹಾದಿಯಲ್ಲಿಯೇ ಅಭಿಮಾನಿ ಸಂಘವೂ ಹೆಜ್ಜೆ ಇಡಲಿದೆ ಎಂದರು.

ದರ್ಶನ್ ಅವರ ಮೇಲೆ ಆರೋಪಗಳು ಬಂದಿರಬಹುದು. ಆದರೆ, ಮುಂದಿನ ದಿನಗಳಲ್ಲಿ ಅವರು ಎಲ್ಲಾ ಆರೋಪಗಳಿಂದ ಮುಕ್ತರಾಗಲಿದ್ದಾರೆ ಎನ್ನುವ ಭರವಸೆ ಇದೆ. ಕನ್ನಡ ಚಿತ್ರರಂಗದಲ್ಲಿ ಅವರ ನಾಯಕತ್ವದ ಮತ್ತಷ್ಟು ಚಲನಚಿತ್ರಗಳು ಮೂಡಿ ಬರಲಿ ಎನ್ನುವ ಕಾತರ ಅವರ ಅಭಿಮಾನಿಗಳಲ್ಲಿದೆ. ಅನೇಕ ಸಂಕಷ್ಟಗಳನ್ನು ಎದುರಿಸಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ವಿಶೇಷ ಚೇತನವುಳ್ಳ ಮಕ್ಕಳೊಂದಿಗೆ ಅನ್ನಸಂತರ್ಪಣೆ ಮತ್ತು ದಿನಸಿ ವಸ್ತುಗಳನ್ನು ನೀಡುವ ಮೂಲಕ ಹಮ್ಮಿಕೊಳ್ಳಲಾಗಿದೆ ಎಂದರು.

ಅಭಿಮಾನಿಗಳ ಸಂಘದ ಸದಸ್ಯರಾದ ಕೆ.ಆರ್. ಸಂತೋಷ್ ಆನವಟ್ಟಿ, ಮಾಲತೇಶ ಜಿ. ನಾಯ್ಕ ಸಂಪಗೋಡು, ಅನಿಲ್ ಕುಪ್ಪೆ, ಬಿ.ಎಂ. ರಾಮು ಬಿದರಗೇರೆ, ಅಭಿ ಸಂಪಗೋಡು, ಸಂತು ಸೊರಬ, ಸಂತೋಷ್ ಸೊರಬ, ಅರುಣ್ ಬೊಮ್ಮನಹಳ್ಳಿ, ದಸ್ತು ಸೊರಬ, ಅಭಿ ಅವಲಗೋಡು, ರಘು ಉಳವಿ, ಮಧು ಬಿದರಗೇರೆ ನವಚೇತನ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ, ವಿಶೇಷ ಶಿಕ್ಷಕ ಪುಟ್ಟರಾಜು ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಲಿಕೆ ವಾರ್ಡ್ ರಚನೆ ಅವೈಜ್ಞಾನಿಕ: ಪಾಲಿಕೆ ಸದಸ್ಯರ ಬೇಸರ
ಫೆ.24ರಿಂದ ಕೋಟೆ ಶ್ರೀ ಮಾರಿಕಾಂಬ ಜಾತ್ರೆ: ಎಸ್.ಕೆ. ಮರಿಯಪ್ಪ ಮಾಹಿತಿ