ಕನ್ನಡಪ್ರಭ ವಾರ್ತೆ ಹಾವೇರಿ
ಸಂಗೂರು ಕರಿಯಪ್ಪ ಜಯಂತಿ ನಿಮಿತ್ತವಾಗಿ ಡಿವೈಎಫ್ಐ, ಎಸ್ಎಫ್ಐ ವತಿಯಿಂದ ಶನಿವಾರ ನಗರದ ಕೆ.ಇ.ಬಿ ಎದುರುಗಡೆ ಇರುವ ಸ್ವಾತಂತ್ರ್ಯ ಸೇನಾನಿ ಕರಿಯಪ್ಪ ಅವರ ಪುತ್ಥಳಿಗೆ ಪುಷ್ಪಾರ್ಪಣೆಗೈದು ಗೌರವ ನಮನ ಸಲ್ಲಿಸಿ ಮಾತನಾಡಿದರು.
ಸಾಮ್ರಾಜ್ಯಶಾಹಿ ಬ್ರಿಟಿಷರ ಹಿಡಿತದಿಂದ ಭಾರತದ ವಿಮೋಚನೆಗಾಗಿ ಗಾಂಧಿವಾದಿಯಾಗಿದ್ದುಕೊಂಡು ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸುವಾಗಲೇ ಬಾಂಬ್ ಸ್ಪೋಟಗೊಂಡ ಪರಿಣಾಮವಾಗಿ ತಮ್ಮ ಬಲಗೈ ಮುಂಗೈ ಕಳೆದುಕೊಂಡರೂ ಹೋರಾಟ ಕಣದಲ್ಲಿ ಜಗ್ಗದೆ ಮುನ್ನುಗ್ಗಿದವರು. ಸಂಗೂರು ಕರಿಯಪ್ಪನವರ ಈ ರೋಮಾಂಚಕಾರಿ ಸಾಹಸಗಾಥೆಯನ್ನು ದೇಶದ ಜನತೆ ಅರಿಯಬೇಕಿದೆ ಎಂದರು.ಕರಿಯಪ್ಪ ಹಾಗೂ ವೀರಮ್ಮ ದಂಪತಿಗಳ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಲು, ಹಾವೇರಿ ಬಸ್ ನಿಲ್ದಾಣಕ್ಕೆ ಸಂಗೂರು ಕರಿಯಪ್ಪ ಅವರ ಹೆಸರನ್ನು ನಾಮಕರಣ ಮಾಡುವಂತೆ, ಸಂಗೂರಿನಲ್ಲಿರುವ ಗಾಂಧಿಜಿ ಚಿತಾಭಸ್ಮ ಸ್ಮಾರಕವನ್ನು ಹಾಗೂ ಕರಿಯಪ್ಪ ಅವರ ಪ್ರತಿಮೆ ಇರುವ ಜಾಗೆಯನ್ನು ವಿದುರಾಶ್ವತ್ಥ ಮಾದರಿಯಲ್ಲಿ ಸ್ಮಾರಕಭವನ, ಮ್ಯೂಜಿಯಂ ನಿರ್ಮಿಸಲು ಒತ್ತಾಯಿಸಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಕೊಟ್ಟರೂ ಪರಿಗಣಿಸದಿರುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುತ್ತಿರುವ ಅವಮಾನವಲ್ಲದೇ ಮತ್ತೇನು? ಸರ್ಕಾರ ಈ ಕುರಿತು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾನ್ ಸಾಧಕರಾದ ಕರಿಯಪ್ಪ ಅವರ ಜನುಮದಿನದಂದು ಜಿಲ್ಲಾಡಳಿತ ಹಾಗೂ ಸ್ಥಳೀಯ ನಗರಸಭೆ ಆಡಳಿತ ಕನಿಷ್ಠ ಗೌರವ ಸಲ್ಲಿಸದಿರುವುದು ಖೇದಕರ. ದೇಶವನ್ನು ಕಟ್ಟಿದ ಮಹಾನ್ ವ್ಯಕ್ತಿತ್ವಗಳನ್ನು ಅವಗಣನೆ ಮಾಡುತ್ತಿರುವುದು ಖಂಡನೀಯ ಎಂದರು.