ವ್ಯಸನಗಳಿಂದ ಜೀವನ ಹಾಳು

KannadaprabhaNewsNetwork |  
Published : Aug 03, 2024, 12:37 AM IST
ವ್ಯಸನಗಳಿಂದ ಜೀವನ ಹಾಳು : ಪೌರಾಯುಕ್ತ ಜಗದೀಶ ಈಟಿ. | Kannada Prabha

ಸಾರಾಂಶ

ವ್ಯಸನಗಳು ಜೀವನವನ್ನು ಹಾಳುಗೆಡಹುವುದಲ್ಲದೇ ಕೌಟುಂಬಿಕ ಸಾಮರಸ್ಯಕ್ಕೆ ಧಕ್ಕೆ ತಂದು ಸಂಬಂಧಗಳನ್ನೇ ದೂರವಾಗಿಸುತ್ತವೆ ಎಂದು ಪೌರಾಯುಕ್ತ ಜಗದೀಶ ಈಟಿ ನುಡಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ವ್ಯಸನಗಳು ಜೀವನವನ್ನು ಹಾಳುಗೆಡಹುವುದಲ್ಲದೇ ಕೌಟುಂಬಿಕ ಸಾಮರಸ್ಯಕ್ಕೆ ಧಕ್ಕೆ ತಂದು ಸಂಬಂಧಗಳನ್ನೇ ದೂರವಾಗಿಸುತ್ತವೆ ಎಂದು ಪೌರಾಯುಕ್ತ ಜಗದೀಶ ಈಟಿ ನುಡಿದರು.

ವ್ಯಸನಮುಕ್ತ ದಿನಾಚರಣೆ ನಿಮಿತ್ತ ಬನಹಟ್ಟಿಯ ಗಾಂಧಿ ಸರ್ಕಲ್‌ನಲ್ಲಿ ಲಿಂ.ಇಳಕಲ್ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಕ್ಕಳಿಗೆ ಪ್ರತಿಜ್ಞೆ ಬೋಧಿಸಿದ ಬಳಿಕ ಮೆರವಣಿಗೆ ಮೂಕಲ ಘೋಷಣೆ ಕೂಗುತ್ತ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಬಳಿಕ ಎಂಎಂ ಬಂಗ್ಲೆ ಎದುರು ಮಾನವ ಸರಪಳಿ ನಿರ್ಮಿಸಿ ಮಾತನಾಡಿದ ಅವರು, ಚಟಗಳು ಒಮ್ಮೆ ಅಂಟಿಕೊಂಡರೆ ಸಾಕು, ಚಟ್ಟವೇರುವ ತನಕ ನಮ್ಮ ಜೀವನವನ್ನು ಆಪೋಶನ ತೆಗೆದುಕೊಳ್ಳುತ್ತವೆ. ಗುಟಕಾ, ಬೀಡಿ,ಸಿಗರೇಟ, ಮದ್ಯ ಸೇರಿದಂತೆ ಈಗ ಮಕ್ಕಳು ಅತಿಯಾಗಿ ಬಳಸುವ ಮೊಬೈಲ್ ಬಳಕೆಯೂ ವ್ಯಸನವೇ ಆಗಿದೆ. ಇದರಿಂದ ನಮ್ಮ ಜ್ಞಾನಾರ್ಜನೆ ಕುಂಠಿತಗೊಂಡು ಭವಿಷ್ಯದಲ್ಲಿ ದೇಶಕ್ಕೆ ಆಸ್ತಿಯಾಗದೇ ಹೊರೆಯಾಗಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಉಪತಹಶೀಲ್ದಾರ್‌ ಎಸ್.ಎಲ್.ಕಾಗಿಯವರ, ಶ್ರೀಶೈಲ ಬೀಳಗಿ, ಪ್ರವೀಣ ದಬಾಡಿ, ರವಿ ಕೊರ್ತಿ, ಬಿ.ಎಂ.ಹಳೇಮನಿ, ಮುಖೇಶ ಬನಹಟ್ಟಿ, ಬಸವರಾಜ ಹೊಸೂರ, ಮುತ್ತಣ್ಣ ಚೌಡಕಿ, ಸುರೇಶ ಬಾಗೇವಾಡಿ, ಬಸವರಾಜ ಮಠದ, ಎಂ.ಬಿ.ಮೊಕಾಶಿ, ಸಂಗೀತಾ ಕೋಳಿ, ಶೋಭಾ ಹೊಸಮನಿ, ಸದಾಶಿವ ಪರೀಟ, ಅಪ್ಪಾಜಿ ಹೂಗಾರ ಸೇರಿದಂತೆ ಪ್ರಮುಖರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ