ಕನ್ನಡಪ್ರಭ ವಾರ್ತೆ ವಿಜಯಪುರ
ಮತದಾರರ ಪಟ್ಟಿಯಲ್ಲಿ ಗೋಲ್ಮಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ಗಾಂಧಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಮಹದೇವಪುರದಲ್ಲಿ ನಡೆದ ಅಕ್ರಮ ಮತದಾನ ಕುರಿತು ಮಾಹಿತಿ ನೀಡಲಾಗಿದೆ. ಮತದಾರರ ಪಟ್ಟಿಯನ್ನು ಡಿಜಿಟಲ್ ಫಾರ್ಮೆಟ್‌ನಲ್ಲಿ ಕೊಡಿ ಎಂದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಒತ್ತಾಯ ಮಾಡಿದೆ. ಮತದಾರ ಪಟ್ಟಿಯ ಮಾಹಿತಿಯನ್ನು 45 ದಿನಗಳಲ್ಲಿ ಅಳಿಸಿ ಹಾಕಲಾಗಿದೆ. ತರಾತುರಿಯಲ್ಲಿ ಯಾಕೆ ಡಿಲೀಟ್ ಮಾಡಲಾಗಿದೆ ಎಂದು ಪ್ರಶ್ನಿಸಿದರು.
ಡಿಜಿಟಲ್ ರೂಪದಲ್ಲಿ ಕೊಟ್ಟರೆ ನಕಲಿ ಕುರಿತು ಎಲ್ಲವೂ ಸ್ಪಷ್ಟವಾಗಿ ಗೊತ್ತಾಗುತ್ತದೆ. ಹಾಗಾಗಿ ಡಿಜಿಟಲ್ ಫಾರ್ಮಾಟ್‌ನಲ್ಲಿ ಮಾಹಿತಿ ಕೊಡುತ್ತಿಲ್ಲ. ಮಹದೇವಪುರ ಒಂದು ಉದಾಹರಣೆ ಅಷ್ಟೇ. ಸೆಲ್ ಫಾರ್ಮೆಟ್‌ನಲ್ಲಿ ಮತದಾರರ ಮಾಹಿತಿ ಕೊಟ್ಟರೆ 524 ಲೋಕಸಭಾ ಕ್ಷೇತ್ರಗಳ ಸಂಪೂರ್ಣ ಮಾಹಿತಿ ಸಿಗಲಿದೆ. ಇದರಿಂದ ಎಲ್ಲೆಲ್ಲಿ ಅಕ್ರಮವಾಗಿದೆ ಎಂದು ತಿಳಿಯುತ್ತದೆ. ಪಾರದರ್ಶಕವಾಗಿ ಚುನಾವಣೆ ನಡೆದಿದ್ದರೆ ಡಿಜಿಟಲ್ ಫಾರ್ಮೆಟ್‌ನಲ್ಲಿ ಕೊಡಲು ಯಾಕೆ ಹಿಂಜರಿಕೆ ಎಂದು ಪ್ರಶ್ನಿಸಿದರು. ಮತದಾರರ ಮಾಹಿತಿಯನ್ನು ಕನಿಷ್ಠ 5 ವರ್ಷವಾದರೂ ಸಂಗ್ರಹಿಸಿ ಇಡಬೇಕು. 10 ಬೈ 10 ಅಡಿ ಮನೆಯಲ್ಲಿ 80 ಮತದಾರರ ವಿಳಾಸವಿದೆ. ಅದರ ಮಾಲೀಕ ಬಿಜೆಪಿ ಬೆಂಬಲಿಗ. ಹತ್ತು ಚದರಡಿ ಮನೆಯಲ್ಲಿ ಇಷ್ಟು ಜನರು ಇರೋಕೆ ಸಾಧ್ಯವೇ? ಸಾಧ್ಯವಿದ್ದರೆ ದೇಶದಲ್ಲಿ ವಸತಿ ಸಮಸ್ಯೆ ಬಗೆಹರಿದಂತೆ ಎಂದು ಹೇಳಿದರು.ರಾಹುಲ್ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಸಾಂವಿಧಾನಿಕ ಹುದ್ದೆ ಹೊಂದಿದ್ದಾರೆ. ಅವರಿಗೆ ಅಫಿಡವಿಟ್ ಕೇಳುತ್ತೀರಿ, ಇದು ಹಾಸ್ಯಾಸ್ಪದ. ಚುನಾವಣೆಯಲ್ಲಿ ನಿಗದಿತ ಮತಗಳ ಮಾರ್ಜಿನ್ ದಾಟಿದವರು ಗೆದ್ದಿದ್ದಾರೆ. ನ್ಯಾರೋ ಮಾರ್ಜಿನ್‌ನವರು ಸಿಕ್ಕಿ ಹಾಕಿಕೊಳ್ಳುತ್ತಾರೆ. ಇದನ್ನೆಲ್ಲ ಬುದ್ಧಿವಂತಿಕೆಯಿಂದ ಮಾಡುತ್ತಾರೆ. ಪಾರ್ಲಿಮೆಂಟ್‌ನಲ್ಲಿ 25 ರಿಂದ 30 ಸೀಟ್‌ಗಳು ನ್ಯಾರೋ ಮಾರ್ಜಿನ್‌ನಲ್ಲಿ ಆಗಿವೆ. ಎಲ್ಲವೂ ಅಕ್ರಮ ಆಗಿರುವ ಸಾಧ್ಯತೆ ಇದೆ. ಕೆಲ ಪ್ರತಿಶತ ಮತಗಳನ್ನು ಕೇಂದ್ರೀಕರಿಸಿ ಮಾಡುತ್ತಾರೆ ಎಂದು ಸ್ಪಷ್ಟನೆ ನೀಡಿದರು.
ವಿಜಯಪುರದಲ್ಲಿ ಸಚಿವ ಸಂಪುಟ ಸಭೆ ನಡೆಯುವ ವಿಚಾರದ ಬಗ್ಗೆ ಮಾಹಿತಿ ನೀಡಿದ ಅವರು, ಸಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ವಿಜಯಪುರ ನಗರದಲ್ಲಿ ಕ್ಯಾಬಿನೆಟ್ ನಡೆಯಲಿದೆ ಎಂದರು.
------ಕೋಟ್
ಡಿಜಿಟಲ್ ರೂಪದಲ್ಲಿ ಕೊಟ್ಟರೆ ನಕಲಿ ಕುರಿತು ಎಲ್ಲವೂ ಸ್ಪಷ್ಟವಾಗಿ ಗೊತ್ತಾಗುತ್ತದೆ. ಹಾಗಾಗಿ ಡಿಜಿಟಲ್ ಫಾರ್ಮಾಟ್‌ನಲ್ಲಿ ಮಾಹಿತಿ ಕೊಡುತ್ತಿಲ್ಲ. ಮಹದೇವಪುರ ಒಂದು ಉದಾಹರಣೆ ಅಷ್ಟೇ. ಸೆಲ್ ಫಾರ್ಮೆಟ್ ನಲ್ಲಿ ಮತದಾರರ ಮಾಹಿತಿ ಕೊಟ್ಟರೆ 524 ಲೋಕಸಭಾ ಕ್ಷೇತ್ರಗಳ ಸಂಪೂರ್ಣ ಮಾಹಿತಿಯು ಸಿಗಲಿದೆ. ಇದರಿಂದ ಎಲ್ಲೆಲ್ಲಿ ಅಕ್ರಮವಾಗಿದೆ ಎಂದು ತಿಳಿಯುತ್ತದೆ. ಪಾರದರ್ಶಕವಾಗಿ ಚುನಾವಣೆ ನಡೆದಿದ್ದರೆ ಡಿಜಿಟಲ್ ಫಾರ್ಮೆಟ್ ನಲ್ಲಿ ಕೊಡಲು ಯಾಕೆ? ಹಿಂಜರಿಕೆ.- ಎಂ.ಬಿ.ಪಾಟೀಲ, ಸಚಿವ ------------