ಧಾರವಾಡ:
ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘ ಡಾ. ಶಿವಾನಂದ ಗಾಳಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸದಲ್ಲಿ ಮಾತನಾಡಿದ ಅವರು, ಪಂಪನ ವಂಶ ಪರಂಪರೆ ಹೇಳಿ ಪಂಪ ಬರೆದ ಧಾರ್ಮಿಕ ಕಾವ್ಯ ಆದಿ ಪುರಾಣದಲ್ಲಿ ಬರುವ ಆದಿನಾಥನ ಚರಿತ್ರೆ ವಿವರಿಸಿದರು.
ಇದರಲ್ಲಿ ಬರುವ ಭರತ-ಬಾಹುಬಲಿಯರ ಪ್ರಸಂಗವೂ ಕೂಡ ರೋಚಕವಾದದ್ದು. ಪರಸ್ಪರ ಯುದ್ಧದಿಂದ ಆಗಬಹುದಾದ ಪ್ರಾಣಹಾನಿ ಹಾಗೂ ನಷ್ಟವನ್ನು ಅರಿತು ಇಬ್ಬರ ಮಧ್ಯದಲ್ಲಿಯೇ ದೃಷ್ಟಿ ಯುದ್ಧ, ಜಲ ಯುದ್ಧ, ಮಲ್ಲ ಯದ್ಧ ಏರ್ಪಡಿಸಿ, ಮೂರು ಯುದ್ಧಗಳಲ್ಲಿ ಬಾಹುಬಲಿ ಗೆದ್ದ ಮೇಲೆ, ಸ್ಥಿರವಲ್ಲದ ರಾಜ್ಯದ ಆಸೆಗಾಗಿ ಅಣ್ಣ ಭರತನ ಮನಸ್ಸಿಗೆ ಘಾಸಿ ಮಾಡಿದೆ ಎಂದು ಭಾವಿಸಿ, ಎಲ್ಲ ಸಂಪತ್ತನ್ನೂ ಭರತನಿಗೆ ನೀಡಿ, ಬಾಹುಬಲಿ ತಪಸ್ಸಿಗೆ ತೆರಳಿದ ಸಂದರ್ಭ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಶಶಿ ಸಾಲಿ ಮಾತನಾಡಿ, ಸಂಘಟನಾ ಚತುರರಾಗಿದ್ದ ಡಾ. ಶಿವಾನಂದ ಗಾಳಿ ಧಾರವಾಡದ ಕನ್ನಡ ಸಾಹಿತ್ಯ ಭವನದ ನಿರ್ಮಾಣಕ್ಕೆ ಕಾರಣರಾದವರು. ನಿಸ್ವಾರ್ಥ ಭಾವನೆಗಳಿಂದ ನಿಷ್ಠೆ ಹಾಗೂ ಪ್ರಾಮಾಣಿಕ ಸೇವಾ ಮನೋಭಾವನೆಯೊಂದಿಗೆ ವಿದ್ಯಾರ್ಥಿಗಳಿಗೆ ಆದರ್ಶ ಪ್ರಾಧ್ಯಾಪಕರಾಗಿದ್ದರು. ಹೊರಗಡೆ ಎಷ್ಟೇ ಸಂಘಟನೆಗಳಲ್ಲಿ ಕಾರ್ಯ ಮಾಡಿದರೂ ಕೂಡ ಪಾಠ, ಬೋಧನೆಗೆ ಎಂದೂ ವಿಮುಖರಾಗಿ ನಡೆದವರಲ್ಲ ಎಂದರು.
ದತ್ತಿ ದಾನಿಗಳಾದ ಸುಜಾತಾ ಹಡಗಲಿ ಹಾಗೂ ಡಾ. ಜಿನದತ್ತ ಹಡಗಲಿ ಇದ್ದರು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಮಹೇಶ ಹೊರಕೇರಿ ವಂದಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಸಮ್ಮೇದ ಜೈನ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶ್ರುತಿ ತಡಸ ಹಾಗೂ ಸಂಗಡಿಗರಿಂದ ನೃತ್ಯ ಪ್ರದರ್ಶನ ಜರುಗಿದವು.