ಚೆನ್ನಮ್ಮನ ತತ್ವಾದರ್ಶ ಅಳವಡಿಸಿಕೊಳ್ಳಿ: ಮಹೇಶ

KannadaprabhaNewsNetwork |  
Published : Oct 28, 2024, 12:53 AM IST
ಪೋಟೊ27ಕೆಎಸಟಿ2: ಕುಷ್ಟಗಿ ಪಟ್ಟಣದ ಬಸ್ ಡಿಪೋದ ಆವರಣದಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮನವರ ಜಯಂತಿಯಲ್ಲಿ ಮಾಜಿ ಜಿಪಂ ಸದಸ್ಯ ಕೆ ಮಹೇಶ ಮಾತನಾಡಿದರು. | Kannada Prabha

ಸಾರಾಂಶ

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಪ್ರಪ್ರಥಮವಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡಿದ್ದಾರೆ.

ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತ್ಯುತ್ಸವ ಹಾಗೂ ವಿಜಯೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಪ್ರಪ್ರಥಮವಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಕೆ.ಮಹೇಶ ಹೇಳಿದರು.

ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕುಷ್ಟಗಿ ಘಟಕದ ಸಾರಿಗೆ ಸಿಬ್ಬಂದಿ ವರ್ಗದ ವತಿಯಿಂದ ಘಟಕದ ಆವರಣದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತ್ಯುತ್ಸವ ಹಾಗೂ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಎಲ್ಲ ಮಕ್ಕಳಲ್ಲಿ ಕಿತ್ತೂರು ಚೆನ್ನಮ್ಮನವರ ಆದರ್ಶಗಳನ್ನು ಬೆಳೆಸಬೇಕು. ಸ್ವಾತಂತ್ರ್ಯ ಹೋರಾಟಗಾರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಂಚಮಸಾಲಿ ಸಮಾಜವನ್ನು ಒಗ್ಗಟ್ಟಾಗಿ ಬೆಳೆಸುವ ಅಗತ್ಯವಿದೆ. ಸಮುದಾಯದ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡುವ ಹಿತದೃಷ್ಟಿಯಿಂದ ದಾನಿಗಳ ಆಶ್ರಯದಲ್ಲಿ ಕುಷ್ಟಗಿಯಲ್ಲಿ ನೂತನವಾಗಿ ಸುಸಜ್ಜಿತವಾತ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಹಿರಿಯ ಮುಖಂಡ ದೇವೇಂದ್ರಪ್ಪ ಬಳೂಟಗಿ ಮಾತನಾಡಿದರು. ಘಟಕ ವ್ಯವಸ್ಥಾಪಕ ಸಂದರಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಹಾಂತೇಶ ಲಕ್ಕಲಕಟ್ಟಿ, ಆಕಾಶ ದಾಸರ, ಸಿ.ಎಂ. ಹವಾಲ್ದಾರ, ಎ.ಬಿ. ದಿಂಡೂರ, ಸಣ್ಣಕುಂಠೆಪ್ಪ, ಸಲೀಂಸಾಬ ದಿಂಡೂರ, ನಾಗರಾಜ, ಅಮರೇಗೌಡ ಪಾಟೀಲ್, ಯಲ್ಲಪ್ಪ ತಳವಾರ, ಸವಿತಾ ಹಟ್ಟಿ, ಬಸವ ಸಮಿತಿ ಅಧ್ಯಕ್ಷ ಶಿವಶರಣಪ್ಪ ಬಿಜಕಲ್, ಜಿ.ಡಿ. ಪಾಟೀಲ್, ಮಂಜುನಾಥ ಜಿ.ಎಚ್., ಮೈಲಾರಗೌಡ ಮರೇಗೌಡರ, ಮಹಾಂತಮ್ಮ ಶೀಲವಂತರ, ಸವಿತಾ ಆನೆ ಹೊಸೂರ, ಕುಷ್ಟಗಿ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು. ಬಸವರಾಜ ಶೀಲವಂತರ ನಿರೂಪಿಸಿ, ಅಶೋಕ ಕುಲಕರ್ಣಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!