ರೋಟರಿ ಹಿರಿ, ಕಿರಿಯರ ಸಮಾಗಮದಿಂದ ಪ್ರಗತಿ ಸಾಧಿಸುತ್ತಿದೆ: ಬಿ.ಸಿ.ಗೀತಾ

KannadaprabhaNewsNetwork |  
Published : Oct 28, 2024, 12:53 AM IST
ನರಸಿಂಹರಾಜಪುರ ರೋಟರಿ ಸಂಸ್ಥೆಯ ಆಶ್ರಯದಲ್ಲಿ ನಡೆದ ವಲಯ - 6 ರ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ರೋಟರಿ ಸಂಸ್ಥೆಯ 3182 ರ ಮಾಜಿ ಜಿಲ್ಲಾ ರಾಜ್ಯಪಾಲೆ ಬಿ.ಸಿ.ಗೀತಾ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ನರಸಿಂಹರಾಜಪುರ, ಹಳೇ ಬೇರು ಹೊಸ ಚಿಗರು ಎಂಬಂತೆ ರೋಟರಿ ಸಂಸ್ಥೆಯ ಹಿರಿಯ ಹಾಗೂ ಕಿರಿಯ ಸದಸ್ಯರು ಸೇರಿ ಕೆಲಸ ಮಾಡುತ್ತಿರುವುದರಿಂದ ರೋಟರಿ ಕ್ಲಬ್‌ ಅದ್ಭುತವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ರೋಟರಿ ಸಂಸ್ಥೆ 3182 ರ ಮಾಜಿ ಜಿಲ್ಲಾ ರಾಜ್ಯಪಾಲೆ ಬಿ.ಸಿ.ಗೀತಾ ತಿಳಿಸಿದರು.

ರೋಟರಿ ಸಂಸ್ಥೆಯ ವಲಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಹಳೇ ಬೇರು ಹೊಸ ಚಿಗರು ಎಂಬಂತೆ ರೋಟರಿ ಸಂಸ್ಥೆಯ ಹಿರಿಯ ಹಾಗೂ ಕಿರಿಯ ಸದಸ್ಯರು ಸೇರಿ ಕೆಲಸ ಮಾಡುತ್ತಿರುವುದರಿಂದ ರೋಟರಿ ಕ್ಲಬ್‌ ಅದ್ಭುತವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ರೋಟರಿ ಸಂಸ್ಥೆ 3182 ರ ಮಾಜಿ ಜಿಲ್ಲಾ ರಾಜ್ಯಪಾಲೆ ಬಿ.ಸಿ.ಗೀತಾ ತಿಳಿಸಿದರು.

ಶನಿವಾರ ಸಿಂಸೆಯ ಕನ್ಯಾಕುಮಾರಿ ಕಂಪರ್ಟ್ ಹಾಲ್ ನಲ್ಲಿ ನಡೆದ ರೋಟರಿ -6 ರ ವಲಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪದಲ್ಲಿ ಭಾಷಣ ಮಾಡಿದರು.ರೋಟರಿ ಕ್ಲಬ್‌ ನಡೆಸುತ್ತಿರುವ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಮಾನವ ಸಂಬಂಧಗಳು ವೃದ್ಧಿಸುತ್ತವೆ. ನರಸಿಂಹರಾಜಪುರ ರೋಟರಿ ಸಂಸ್ಥೆ ಅತ್ಯುತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಸೌಲಭ್ಯ ತಲುಪಿಸುತ್ತಿದೆ. ಸೇವೆಯೇ ರೋಟರಿ ಮುಖ್ಯ ಉದ್ದೇಶವಾಗಿದೆ ಎಂದರು.

ಎನ್‌.ಆರ್‌.ಪುರ ರೋಟರಿ ಸಂಸ್ಥೆ ಅಧ್ಯಕ್ಷ ಜಿ.ಆರ್‌.ದಿವಾಕರ ಮಾತನಾಡಿ, ವಲಯ- 6 ರ 7 ರೋಟರಿ ಕ್ಲಬ್ ಸದಸ್ಯರು ಭಾಗವಹಿಸಿದ್ದರಿಂದ ಪರಸ್ಪರ ಸ್ನೇಹ ವೃದ್ಧಿಯಾಗಿದೆ. ರೋಟರಿ ಸದಸ್ಯರಲ್ಲಿನ ಕಲೆಗಳನ್ನು ಅಭಿವ್ಯಕ್ತಪಡಿಸಲು ಈ ವೇದಿಕೆ ಅವಕಾಶ ಕಲ್ಪಿಸಿದೆ. ಒಟ್ಟಾಗಿ ಸೇರುವುದ ರಿಂದ ಏಕತಾನತೆ ಹೋಗಿ ಸಂಘ ಜೀವನಕ್ಕೆ ನಾಂದಿಯಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ರೋಟರಿ ಜಿಲ್ಲೆ 3182 ರ ಮಾಜಿ ಜಿಲ್ಲಾ ರಾಜ್ಯಾಪಾಲೆ ಬಿ.ಸಿ.ಗೀತಾ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ರೋಟರಿ ಲೆಪ್ಟಂನೆಂಟ್‌ ಎಟ್‌.ವಿ.ಮಂಜುನಾಥ್‌, ವಲಯ ಸೇನಾನಿ ರೇಖಾ ಉದಯಶಂಕರ್‌, ಸಾಂಸ್ಕೃತಿಕ ಕಾರ್ಯಕ್ರಮದ ಸಮಿತಿ ಅಧ್ಯಕ್ಷ ಧನಜಂಯ್, ರೋಟರಿ ಕ್ಲಬ್‌ ಕಾರ್ಯದರ್ಶಿ ಮಧು ವೆಂಕಟೇಶ್‌, ವಲಯ ಸಾಂಸ್ಕೃತಿಕ ಸಂಯೋಜಕರಾದ ಎಲ್‌.ಡಿ.ನವೀನ್‌, ಎಚ್.ಡಿ.ವಿನಯ್‌, ರೋಟರಿ ಕ್ಲಬ್ ಪದಾಧಿಕಾರಿಗಳಾದ ಕಣಿವೆ ವಿನಯ, ಎಸ್.ಎಸ್‌.ಶಾಂತಕುಮಾರ್‌, ಡಿ.ಸಿ ದಿವಾಕರ, ಟಿ.ವಿಜಯಕುಮಾರ್, ವಿದ್ಯಾನಂದಕುಮಾರ್‌,ಎಂ.ಆರ್‌.ಸುಂದರೇಶ್‌ ಮತ್ತಿತರರು ಇದ್ದರು.

ನಂತರ 8 ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!