ಕನ್ನಡಪ್ರಭ ವಾರ್ತೆ ಯಲಬುರ್ಗಾ
ಪಟ್ಟಣದ ಮಾರನಾಳ ರಸ್ತೆಯಲ್ಲಿರುವ ಶ್ರೀ ಸಂತ ಸೇವಲಾಲ ವೃತ್ತದಲ್ಲಿ ತಾಲೂಕಾಡಳಿತ ಹಾಗೂ ಬಂಜಾರ ಸಮಾಜದ ಸಹಯೋಗದಲ್ಲಿ ಆಯೋಜಿಸದ್ದ ಶ್ರೀ ಸಂತ ಸೇವಲಾಲ್ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಕ್ತಿ ಮತ್ತು ಧ್ಯಾನದ ಮೂಲಕ ಆಧ್ಯಾತ್ಮವನ್ನು ಅನುಸರಿಸಿದ ಸೇವಾಲಾಲರು ಲಂಬಾಣಿ ಜನಾಂಗದ ಸರ್ವಶ್ರೇಷ್ಠ ದಾರ್ಶನಿಕರಾಗಿ ಗುರುತಿಸಿಕೊಳ್ಳುವ ಮೂಲಕ ಸಮಾಜದ ಎಲ್ಲ ವರ್ಗದ ಜನರ ಏಳ್ಗೆಗೆಗಾಗಿ ಶ್ರಮಿಸಿದ್ದಾರೆ ಎಂದರು.
ಹಿರಿಯ ಮುಖಂಡ ಬಸವಲಿಂಗಪ್ಪ ಭೂತೆ ಮಾತನಾಡಿ, ತಾಲೂಕಿನಲ್ಲಿ ಲಂಬಾಣಿ ಸಮುದಾಯದವರು ಶೈಕ್ಷಣಿಕವಾಗಿ ಮುಂದೆ ಬರುವ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಮುದಾಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಗತಿ ಸಾಧಿಸಲು ಶಿಕ್ಷಣ ಮತ್ತು ಸಂಘಟನೆ ಅತ್ಯಗತ್ಯವಾಗಿದೆ ಎಂದು ಹೇಳಿದರು.ಬಂಜಾರ ಸಮಾಜದ ತಾಲೂಕಾಧ್ಯಕ್ಷ ಶೀನಪ್ಪ ನಾಯಕ, ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಮುಖಂಡ ವೀರಣ್ಣ ಹುಬ್ಬಳ್ಳಿ, ಈಶ್ವರ ಅಟಮಾಳಗಿ, ಸಿ.ಎಚ್. ಪೋಲಿಸಪಾಟೀಲ, ವೆಂಕಟೇಶ ನಾಯಕ ಮಾತನಾಡಿದರು.