ಬದುಕಿನಲ್ಲಿ ಸಂವಿಧಾನದ ಮೌಲ್ಯ ಅಳವಡಿಸಿಕೊಳ್ಳಿ

KannadaprabhaNewsNetwork |  
Published : Nov 27, 2024, 01:01 AM IST
ನಿತ್ಯ ಜೀವನದಲ್ಲಿ ಸಂವಿಧಾನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. | Kannada Prabha

ಸಾರಾಂಶ

ದೇಶದ ಸುಭದ್ರ ಅಡಿಪಾಯ ನಮ್ಮ ಸಂವಿಧಾನ ರಚಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸುತ್ತಾ ಸಂವಿಧಾನ ಅಶಯಗಳನ್ನು ಎತ್ತಿಹಿಡಿಯಬೇಕು. ನಮ್ಮ ದೇಶದ ಕಾನೂನು ಸಂವಿಧಾನ ಅಣಿತಿಯಂತೆ ನಡೆಯುತ್ತಿದೆ, ಕಾರ್ಯಾಂಗ, ನ್ಯಾರ್ಯಾಂಗ ಮತ್ತು ಶಾಸಕಾಂಗ, ಇವು ದೇಶದ ಎಲ್ಲಾ ರಾಜ್ಯಗಳಿಗೆ ಅಡಿಪಾಯವಾಗಿವೆ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಮ್ಮ ನಿತ್ಯ ಜೀವನದಲ್ಲಿ ಸಂವಿಧಾನ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಶಾಂತಿ ಮೂಡಲು ಸಾಧ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾದೀಶ ಪಿ.ಎಂ.ಸಚಿನ್ ತಿಳಿಸಿದರು.ತಾಲೂಕಿನ ಅಲಕಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ವಕೀಲ ಸಂಘ, ಶಿಕ್ಷಣ ಇಲಾಖೆ ಮಹಿಳಾ ಮತ್ತು ಮಕ್ಕಳ ಇಲಾಖೆ, ನಗರಸಭೆ ಸಂಯುಕ್ತ ಆಶ್ರಯದಲ್ಲಿ ಅಯೋಜಿಸಿದ್ದ ಸಂವಿಧಾನ ದಿನಚರಣೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಸಂವಿಧಾನದ ಅರಿವು ಅಗತ್ಯ

ನಮ್ಮ ದೇಶದ ಸಂವಿಧಾನ ಜೀವಂತ ಪುಸ್ತಕ ಇದರಲ್ಲಿ ಅನೇಕ ಅಂಶಗಳು ಅಡಗಿವೆ, ನಮ್ಮ ದೇಶದ ಎಲ್ಲಾ ಕಾನೂನುಗಳಿಗೆ ಇದು ಕನ್ನಡಿ ಇದ್ದಂತೆ, ಸಂವಿಧಾನವನ್ನು ಪ್ರತಿಯೊಬ್ಬರೂ ಓದಬೇಕು, ಆಗ ಮಾತ್ರ ಸಂವಿಧಾನಕ್ಕೆ ಗೌರವ ಸಂದಂತೆ ಅಗುತ್ತದೆ. ಸಂವಿಧಾನ ಮೂಲ ಪ್ರತಿ ಪಾರ್ಲಿಮೆಂಟಿನ ಗ್ರಂಥಾಯಲದಲ್ಲಿ ಇಡಲಾಗಿದೆ. ಇದನ್ನು ಪ್ರತಿ ನಾಗರಿಕರು ಒಮ್ಮೆ ನೋಡಬೇಕು ಎಂದು ಹೇಳಿದರು. ಹಿರಿಯ ವಕೀಲ ಎಚ್.ಎಲ್.ವಿ.ವೆಂಕಟೇಶ್ ಮಾತನಾಡಿ, 1949ನೇ ನವೆಂಬರ್ 26ರಂದು ನಮ್ಮ ದೇಶದಲ್ಲಿ ಸಂವಿಧಾನವನ್ನು ಅರ್ಪಣೆ ಮಾಡಿದ ದಿನ, ಈ ದೇಶದ ಪ್ರತಿ ನಾಗರಿಕರು ಸಂವಿಧಾನದ ಮೌಲ್ಯಗಳು ಅಳವಡಿಸಿಕೊಂಡಾಗ ಮಾತ್ರ ಸಂವಿಧಾನಕ್ಕೆ ಗೌರವ ನೀಡಿದಂತೆ ಅಗುತ್ತದೆ ಎಂದರು.

ದೇಶಕ್ಕೆ ಸಂವಿಧಾನವೇ ಅಡಿಪಾಯ

ದೇಶದ ಸುಭದ್ರ ಅಡಿಪಾಯ ನಮ್ಮ ಸಂವಿಧಾನ ರಚಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸುತ್ತಾ ಸಂವಿಧಾನ ಅಶಯಗಳನ್ನು ಎತ್ತಿಹಿಡಿಯಬೇಕು. ನಮ್ಮ ದೇಶದ ಕಾನೂನು ಸಂವಿಧಾನ ಅಣಿತಿಯಂತೆ ನಡೆಯುತ್ತಿದೆ, ಕಾರ್ಯಾಂಗ, ನ್ಯಾರ್ಯಾಂಗ ಮತ್ತು ಶಾಸಕಾಂಗ, ಇವು ದೇಶದ ಎಲ್ಲಾ ರಾಜ್ಯಗಳಿಗೆ ಅಡಿಪಾಯವಾಗಿವೆ. ಸಂವಿಧಾನ ಕರಡು ಸಮಿತಿ ಅಧ್ಯಕ್ಷ ಡಾ.ಬಿ.ಅರ್. ಅಂಬೇಡ್ಕರ್ ರವರು ಹೆಚ್ಚಿನ ಜವಾಬ್ದಾರಿಯುತ ಕೆಲಸ ನಿರ್ವಹಿಸಿದ್ದಾರೆ ಎಂದರು.ಪ್ರತಿಜ್ಞಾವಿಧಿ ಬೋಧನೆ

ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು, ಶಾಲಾ ಸಿಬ್ಬಂಧಿವರ್ಗ ಮತ್ತು ಅತಿಥಿಗಳು, ಗಣ್ಯರು ಮತ್ತು ಪೋಷಕರು ಎಲ್ಲರೂ ಸೇರಿ ಸಂವಿಧಾನ ಪೀಠಿಕೆಯನ್ನು ಓದುತ್ತ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಶ್ರೀನಿವಾಸಮೂರ್ತಿ, ಅಲಕಾಪುರ ಶಾಲೆಯ ಮುಖ್ಯ ಶಿಕ್ಷಕರಾದ ನಂಜುಂಡರಾವ್, ಶಿಕ್ಷಣ ಸಂಯೋಜಕ ಇ.ಸಿ.ಓ ಬಿ.ಎನ್. ಕೃಷ್ಣಕುಮಾರ್, ಸಿ.ಡಿ.ಪಿ.ಓ.ಕಚೇರಿ ಮೂಕಾಂಬಿಕ, ವಕೀಲರಾದ ದಯನಂದ,ಪ್ರಭಕರ್, ಶಾಲಾ ಮುಖ್ಯಸ್ಥ ಲಕ್ಷ್ಮೀಕಾಂತ ಶಿಕ್ಷಕರಾದ ಉಮಶಂಕರ್,ಶ್ರೀನಿವಾಸಪ್ಪ ಸರ್ಕಾರಿ ಅಭಿಯೋಜಕ ಪಯಾಜ್ ಪಟೇಲ್ ಮುಂತಾದವರು ಹಾಜರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ