ಎಐ ಜತೆಗೆ ನೈಜ ಬುದ್ಧಿ ಬಳಸಿಯೇ ಮುನ್ನಡೆಯಿರಿ

KannadaprabhaNewsNetwork |  
Published : Aug 09, 2026, 01:15 AM IST
೮ಕೆಎಲ್‌ಆರ್-೫ಕೋಲಾರದ ಪತ್ರಕರ್ತರ ಭವನದಲ್ಲಿ ಬೆಂಗಳೂರು ಉತ್ತರ ವಿವಿ ಸಹಯೋಗದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೆಂಗಳೂರು ಉತ್ತರ ವಿವಿ ಸಂಯುಕ್ತಾಶ್ರಯದಲ್ಲಿ ‘ಮಾಧ್ಯಮ ಮತ್ತು ಕೃತಕ ಬುದ್ದಿ ಮತ್ತೆ’ ಕುರಿತು ಒಂದು ದಿನದ ಕಾರ್ಯಗಾರವನ್ನು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಉದ್ಘಾಟಿಸಿದರು. | Kannada Prabha

ಸಾರಾಂಶ

ದಿನದಿಂದ ದಿನಕ್ಕೆ ಎಐ ಪ್ರಾಬಲ್ಯ ಬೆಳೆಯುತ್ತಿರುವುದು ನಮಗೆ ಸವಾಲಾಗಿದೆ, ಮುಂದಿನ ದಿನಗಳಲ್ಲಿ ಇದರ ಅರಿವಿಲ್ಲದೇ ಮಾಧ್ಯಮ ಕ್ಷೇತ್ರದಲ್ಲಿ ನಾವು ಕೆಲಸ ಮಾಡಲು ಸಾಧ್ಯವೇ ಇಲ್ಲವೆನ್ನುವ ಪರಿಸ್ಥಿತಿ ನಿರ್ಮಾಣದ ಆತಂಕವೂ ಇದೆ.

ಬೆಂಗಳೂರು ಉತ್ತರ ವಿವಿಯಿಂದ ಪತ್ರಕರ್ತರಿಗೆ ಕೃತಕ ಬುದ್ದಿಮತ್ತೆ ಕಾರ್ಯಾಗಾರದಲ್ಲಿ ಶಿವಾನಂದ ತಗಡೂರು ಅಭಿಮತ

ಕನ್ನಡಪ್ರಭ ವಾರ್ತೆ ಕೋಲಾರ

ಮಾಧ್ಯಮ ಕ್ಷೇತ್ರದಲ್ಲಿ ಸವಾಲಾಗಿರುವ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ನಾವು ಎಷ್ಟೇ ಅಳವಡಿಸಿಕೊಂಡರೂ ಅದರ ಜತೆಗೆ ನಮ್ಮ ನೈಜಬುದ್ಧಿ ಬಳಸಿಕೊಂಡೇ ವೃತ್ತಿ ಸವಾಲುಗಳನ್ನು ಎದುರಿಸಿ ಈಜಿ ದಡ ಸೇರುವುದು ಇಂದಿನ ಅನಿವಾರ್ಯವಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬೆಂಗಳೂರು ಉತ್ತರ ವಿವಿ ಸಹಯೋಗದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೆಂಗಳೂರು ಉತ್ತರ ವಿವಿಯಿಂದ ‘ಮಾಧ್ಯಮ ಮತ್ತು ಕೃತಕ ಬುದ್ದಿ ಮತ್ತೆ’ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ದಿನದಿಂದ ದಿನಕ್ಕೆ ಎಐ ಪ್ರಾಬಲ್ಯ ಬೆಳೆಯುತ್ತಿರುವುದು ನಮಗೆ ಸವಾಲಾಗಿದೆ, ಮುಂದಿನ ದಿನಗಳಲ್ಲಿ ಇದರ ಅರಿವಿಲ್ಲದೇ ಮಾಧ್ಯಮ ಕ್ಷೇತ್ರದಲ್ಲಿ ನಾವು ಕೆಲಸ ಮಾಡಲು ಸಾಧ್ಯವೇ ಇಲ್ಲವೆನ್ನುವ ಪರಿಸ್ಥಿತಿ ನಿರ್ಮಾಣದ ಆತಂಕವೂ ಇದೆ ಎಂದರು.

ಆಧುನಿಕ ತಂತ್ರಜ್ಞಾನದ ಅರಿವು ಅಗತ್ಯ:

ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ಸಣ್ಣ ಮತ್ತು ಎಲೆಕ್ಟ್ರಾನಿಕ್ ಮಧ್ಯಮದ ಪತ್ರಕರ್ತರಿಗೆ ಆಧುನಿಕ ತಂತ್ರಜ್ಞಾನದ ಅರಿವು ಅತ್ಯವಶ್ಯಕವಾಗಿದೆ. ಇವುಗಳನ್ನು ಬಳಸಿ ಕೊಂಡು ಕನ್ನಡ ಮಾಧ್ಯಮವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ಎಲ್ಲರೂ ಸಹಕಾರ ನೀಡಬೇಕೆಂದರು.

ಕೋಲಾರ ಜಿಲ್ಲೆಯು ಸಾಹಿತಿ ಡಿ.ವಿ.ಜಿ. ಮಾಸ್ತಿ ತವರು ಜಿಲ್ಲೆಯಾಗಿದೆ. ಡಿ.ವಿ.ಜಿ. ಪತ್ರಕರ್ತರ ಸಂಘದ ಸಂಸ್ಥಾಪಕರಾಗಿದ್ದು ಈ ಜಿಲ್ಲೆಯಲ್ಲಿ ಇಂತಹ ಅರ್ಥಪೂರ್ಣವಾದ ಕಾರ್ಯಕ್ರಮ ಆಯೋಜಿಸುವ ಮೂಲಕ ಉದಯೋನ್ಮೂಖ ವಿದ್ಯಾರ್ಥಿಗಳಿಗೆ ಹಾಗೂ ಪತ್ರಕರ್ತರಿಗೆ ಅನುವು ಮಾಡಿಕೊಡಬೇಕಾಗಿದೆ ಎಂದು ತಿಳಿಸಿದರು.

ಕೋಲಾರ ಚಿಕ್ಕಬಳ್ಳಾಪರ ಜಿಲ್ಲಾ ವಿವಿದ್ದೋದೇಶಿತ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಬೆಂಗಳೂರು ಉತ್ತರ ವಿ.ವಿ. ಕುಲಪತಿ ಪ್ರೊ.ಬಿ.ಕೆ.ರವಿ ಅವರು ಪತ್ರಕರ್ತರು ಮತ್ತು ಪತ್ರಿಕೋದ್ಯಮದ ಬಗ್ಗೆ ಅಪಾರ ಗೌರವ, ಆಸಕ್ತಿ ಹೊಂದಿದ್ದು, ಇದಕ್ಕೆ ಎಐ ಕಾರ್ಯಾಗಾರದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದು ಸಾಕ್ಷಿಯಾಗಿದೆ. ಪತ್ರಿಕಾ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಎಐ ಪ್ರವೇಶದಿಂದ ಪತ್ರಕರ್ತರು ಸತ್ಯಾನ್ವೇಷಣೆಯ ಪ್ರತಿಪಾದಕರಾಗಿರುವವರೆಗೂ ಉದ್ಯೋಗ ಕಳೆದುಕೊಳ್ಳುವ ಭೀತಿ, ಆತಂಕ ಪಡಬೇಕಾಗಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಶಿವಾನಂದ ತಗಡೂರು, ರವಿ ಹೆಗಡೆ ಹಾಗೂ ಪ್ರೊ.ಬಿ.ಕೆ. ರವಿ ಅವರನ್ನು ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಉಸ್ತುವಾರಿಯನ್ನು ಬೆಂಗಳೂರು ವಿವಿ ಪಿಆರ್‌ಒ ಶ್ರೀನಿವಾಸರಾವ್ ವಹಿಸಿದ್ದರು.

ವೇದಿಕೆಯಲ್ಲಿ ಬೆಂಗಳೂರು ವಿವಿ ಕುಲಸಚಿವೆ ಡಾ.ಕುಮುದಾ, ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲ್ ಕಲ್ಲಂಡೂರು ಲೋಕೇಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್, ಚಿಕ್ಕಬಳ್ಳಾಪುರ ಸಂಘದ ಅಧ್ಯಕ್ಷ ವಿ.ರವಿಕುಮಾರ್, ಕಾಗತಿ ನಾಗರಾಜ್ ಇದ್ದರು.

ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ರಾಜೇಂದ್ರಸಿಂಹ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್‌ಕುಮಾರ್, ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಶಮ್ಗರ್ ಮತ್ತಿತರರಿದ್ದು, ಕೆ.ವಿ.ನಾಗರಾಜ್ ಪ್ರಾರ್ಥಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪತ್ರಿಕೋದ್ಯಮ ಮದರ್‌ತೆರೇಸಾ ಕಾಲೇಜಿನ ಎಐ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಾಕ್ಸ್‌...

ಕಡಿಮೆ ವೆಚ್ಚದಲ್ಲಿ ಮಾಹಿತಿ ಕ್ರೋಢಿಕರಣಮಾಧ್ಯಮ ಕ್ಷೇತ್ರದಲ್ಲಿ ಕೃತಕ ಬುದ್ಧಿ ಮತ್ತೆ ಕುರಿತು ಚರ್ಚೆ ವಿಶ್ಲೇಷಣೆ ಕಾಲ ಹೋಗಿದ್ದು, ಈಗಾಗಲೇ ಬಳಕೆ ಮಾಡಲಾಗುತ್ತಿದೆ. ಕೃತಕ ಬುದ್ಧಿಮತ್ತೆ ಬಳಕೆಯಿಂದ ಸಮಯ, ಕೆಲಸದ ಒತ್ತಡ ಕಡಿಮೆಯಾಗಲಿದೆ ಹಾಗೂ ಕಡಿಮೆ ವೆಚ್ಚದಲ್ಲಿ ಮಾಹಿತಿಗಳನ್ನು ಕ್ರೋಢಿಕರಿಸಿಕೊಳ್ಳಬಹುದಾಗಿದೆ ಎಂದು ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಾತನಾಡಿದ ಅವರು, ಮಾಧ್ಯಮದವರಿಗೆ ತಿಳಿಯದಂತ ವಿಜ್ಞಾನ, ಕಾನೂನು, ಇತಿಹಾಸ ಸೇರಿದಂತೆ ಇತರೆ ವಿಷಯಗಳ ಮಾಹಿತಿ ಎ.ಐ. ನಿಂದ ಪಡೆಯಬಹುದಾಗಿದೆ, ಸ್ಟೋರಿ ಡಿಸ್‌ಕವರೀ, ಟ್ರೇಡಿಂಗ್ ಸ್ಟೋರಿ, ರಿಸರ್ಚ್, ಇನ್ವೆಸ್ಟಟಿಗೇಷನ್ ಸ್ಟೋರಿ ಹಾಗೂ ಆಯವ್ಯಯಕ್ಕೆ ಸಂಬಂಧಿಸಿದಂತ ಯಾವುದೇ ಸುದ್ದಿಗಳಿಗೆ ಪೂರಕವಾದ ಮಾಹಿತಿಗಳನ್ನು ಎ.ಐ.ನಲ್ಲಿ ಪಡೆಯಬಹುದಾಗಿದೆ. ಕಂಪ್ಯೂಟರ್ ಬಳಕೆ ಅವಶ್ಯಕತೆ ಇದ್ದ ರೀತಿಯಲ್ಲಿ ಇಂದು ಮಾಧ್ಯಮಗಳಲ್ಲಿ ಎ.ಐ. ಬಳಕೆ ಬರದಿದ್ದರೆ ಉದ್ಯೋಗವೇ ಸಿಗದಂತ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯಮಟ್ಟದ ಪ್ರಥಮ ಯೋಗ ಸ್ಪರ್ಧೆ ಇಂದು
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಗಾರ್ಮೆಂಟ್ಸ್‌ ಕಾರ್ಮಿಕರ ಪ್ರತಿಭಟನೆ