ಉಡುಪಿ: ಅಂತಾರಾಷ್ಟ್ರೀಯ ಛಾಯಾಚಿತ್ರಕಲೆಗಳ ಉನ್ನತ ಸಂಸ್ಥೆಯಾದ ಎಫ್‌ಐಎಪಿ ವತಿಯಿಂದ ನಾಡಿನ ಹಿರಿಯ ಛಾಯಾ ಪತ್ರಕರ್ತ ಹಾಗೂ ದೃಶ್ಯ ಕಥನಕಾರ ಅಸ್ಟ್ರೋ ಮೋಹನ್ ಅವರಿಗೆ ಪ್ರತಿಷ್ಠಿತ ಎಎಫ್‌ಐಎಪಿ ಗೌರವ ಲಭಿಸಿದೆ.ಮೂರು ದಶಕಗಳಿಗೂ ಅಧಿಕ ವೃತ್ತಿಪರ ಅನುಭವ ಹೊಂದಿರುವ ಅಸ್ಟ್ರೋ ಮೋಹನ್ ಸಂಸ್ಕೃತಿ, ಪರಂಪರೆ, ಧಾರ್ಮಿಕ ಆಚರಣೆ ಹಾಗೂ ಜನಜೀವನವನ್ನು ತಮ್ಮ ಛಾಯಾಚಿತ್ರಗಳ ಮೂಲಕ ದಾಖಲಿಸಿದ್ದಾರೆ. ಅವರ ಛಾಯಾಚಿತ್ರಗಳು ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲಿ ಮಾನ್ಯತೆ ಪಡೆದಿವೆ.