ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ೭೯ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದರು. ಪ್ರತಿಯೊಬ್ಬರು ದೇಶದ ಅಭಿವೃದ್ಧಿ ಹಾಗೂ ರಕ್ಷಣೆ ವಿಷಯದಲ್ಲಿ ಬೆಂಬಲಿಸಿದರೆ ಉಜ್ವಲ ಭಾರತವಾಗಿ ಪ್ರಜ್ವಲಿಸಿದೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಗಳಿಸಲು ಶ್ರಮಿಸಿದ ಮಹಾತ್ಮ ಗಾಂಧಿ ಸೇರಿದಂತೆ ಅನೇಕ ನಾಯಕರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದವರ ನಾಯಕರ ಸ್ಮರಿಸಬೇಕು. ಅವರ ಆದರ್ಶ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ಬಂತು. ಈ ನೆಲದ ಕಾನೂನು ಇತರೆ ಯಾವ ರಾಷ್ಟ್ರದಲ್ಲಿ ಎಲ್ಲೂ ಇಲ್ಲ. ಯುವಕರು ಸಮಾಜಕ್ಕೆ ಮಾದರಿಯಾಗಿರಬೇಕು ಎಂದರು.ಮಳೆ ಬಂದ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿಲ್ಲ:ಪಟ್ಟಣದಲ್ಲಿ ಮಳೆ ಬಂದ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿಲ್ಲ. ಸ್ವಾತಂತ್ರ್ಯೋತ್ಸವ ಆರಂಭಕ್ಕೂ ಮುನ್ನ ತುಂತುರು ಮಳೆ ಬಂದಿತಾದರೂ ಕೆಲ ಕ್ಷಣದ ಬಳಿಕ ಮಾಯವಾದ ಮಳೆ ಸ್ವಾತಂತ್ರೋತ್ಸವದ ಸಂದೇಶ ಮುಗಿದ ತಕ್ಷಣ ಮತ್ತೆ ಬೀಳಲು ಶುರುವಾಯಿತು. ತಹಸೀಲ್ದಾರ್ ತನ್ಮಯ್ ಎಂ.ಎಸ್ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣದ ಬಳಿಕ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ತಾಲೂಕಿನ ಅಣ್ಣೂರು ಕೇರಿ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಕೆ.ರಂಗೇಗೌಡ ಪ್ರಧಾನ ಭಾಷಣದಲ್ಲಿ ಸ್ವಾತಂತ್ರ್ಯೋತ್ಸವ ಕುರಿತು ಮಾತನಾಡಿದರು.