ಕಂಪ್ಲಿ: ವಾಲ್ಮೀಕಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ವರೆಗೆ ಬಿಜೆಪಿ ಹೋರಾಟ ಮುಂದುವರಿಯಲಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ದುರ್ಬಳಕೆ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರು ತುರ್ತಾಗಿ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆಗ್ರಹಿಸಿದರು.
‘ನಾಗೇಂದ್ರ ರಾಜೀನಾಮೆ ನೀಡಿದರೆ ಮಾತ್ರ ನ್ಯಾಯ ಸಿಕ್ಕಂತಾಗುವುದಿಲ್ಲ. ವಾಲ್ಮೀಕಿ ಸಮುದಾಯದ ಹಲವು ಬೇಡಿಕೆಗಳಿವೆ. ನಿಗಮಕ್ಕೆ ಮೀಸಲಾದ ₹187 ಕೋಟಿ ಸಂಪೂರ್ಣವಾಗಿ ತಲುಪಬೇಕು. ಆ ಹಣವನ್ನು ಸಮುದಾಯದ ಅಭಿವೃದ್ಧಿ ಮತ್ತು ಫಲಾನುಭವಿಗಳ ಸಬಲೀಕರಣಕ್ಕೆ ಸದ್ಬಳಕೆ ಮಾಡಬೇಕು. ಅಲ್ಲಿ ವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.
ಕರ್ನಾಟಕ ಬಿಜೆಪಿ ಕೋರ್ ಕಮಿಟಿ ಸದಸ್ಯರು, ಹಾಲಿ ಹಾಗೂ ಮಾಜಿ ಶಾಸಕರು, ಪಕ್ಷದ ಎಲ್ಲ ಹಂತದ ಪದಾಧಿಕಾರಿಗಳು ಮತ್ತು ಶೋಷಿತ ಸಮುದಾಯಗಳ ಪ್ರತಿನಿಧಿಗಳು ಸೇರಿದಂತೆ ಲಕ್ಷಾಂತರ ಜನರು ಬಿ.ವೈ. ವಿಜಯೇಂದ್ರ ಅವರೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂದು ತಿಳಿಸಿದರು.ವೈಫಲ್ಯಗಳ ವಿರುದ್ಧ ಹೋರಾಟ
ಬಿಜೆಪಿ ವಿಭಾಗೀಯ ಪ್ರಭಾರಿ ಅಮರನಾಥ ಪಾಟೀಲ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ರಾಜ್ಯ ಕಾರ್ಯದರ್ಶಿ ತಮ್ಮೇಶಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಡವಿಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಅಳ್ಳಳ್ಳಿ ವೀರೇಶ್, ಪ್ರಮುಖರಾದ ಗೊರ್ತಿ ಶ್ರೀನಿವಾಸ್, ಪ್ರಶಾಂತ್, ಚಂದ್ರಕಾಂತರೆಡ್ಡಿ, ಟಿ.ವಿ.ಸುದರ್ಶನರೆಡ್ಡಿ, ವೈ.ಮುರುಳಿಮೋಹನರೆಡ್ಡಿ, ಸಿ.ಎ.ಚನ್ನಪ್ಪ, ಡಿ.ಶ್ರೀಧರಶ್ರೇಷ್ಠಿ, ಕರಿಬಸಯ್ಯಸ್ವಾಮಿ, ಷಂಶುದ್ದೀನ್ ಸೇರಿದಂತೆ ಹಲವರು ಇದ್ದರು.