ಅಕ್ಷರ ಜ್ಞಾನದೊಂದಿಗೆ ಕೃಷಿ ಜ್ಞಾನ ಅಗತ್ಯ

KannadaprabhaNewsNetwork |  
Published : May 28, 2026, 02:00 AM IST
ಅಳ್ನಾವರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಲಕ್ಷ್ಮೀ ಲೋಕುರ ಮಾತನಾಡಿದರು. | Kannada Prabha

ಸಾರಾಂಶ

ಜೀವನದಲ್ಲಿ ಬದುಕುವ ದಾರಿ ಬಹಳಷ್ಟಿವೆ. ಆದರೆ, ನಾವು ನಡೆಯುವ ದಾರಿಯನ್ನು ಹೆದ್ದಾರಿಯನ್ನಾಗಿಸುವಂತಹ ಕಾಯಕ ನಮ್ಮದಾಗಬೇಕು. ಎಐ ಯುಗದಲ್ಲಿ ಸ್ವಂತಿಕೆ ಮತ್ತು ಸಂವಹನ ಎಂಬುದು ವಿದ್ಯಾರ್ಥಿಗಳಲ್ಲಿ ದೂರಾಗುತ್ತಿರುವುದು ಸ್ವಾವಲಂಬಿ ಬದುಕಿಗೆ ಬಹುದೊಡ್ಡ ಹಿನ್ನಡೆಯಾಗಲಿದೆ.

ಅಳ್ನಾವರ:

ಕೃಷಿ ನಮಗೆ ಆದಾಯವನಷ್ಟೆಯಲ್ಲ, ಬದಲಿಗೆ ಆರೋಗ್ಯವನ್ನು ಕೊಡುತ್ತದೆ. ಹೀಗಾಗಿ ಯುವ ಸಮೂಹ ಅಕ್ಷರ ಜ್ಞಾನದ ಜತೆ ಕೃಷಿ ಜ್ಞಾನವನ್ನು ಬೆಳೆಸಿಕೊಳಬೇಕು ಎಂದು ಪ್ರಗತಿ ಪರ ರೈತ ಮಹಿಳೆ ಲಕ್ಷ್ಮೀ ಲೋಕುರ ಹೇಳಿದರು

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೀವನದಲ್ಲಿ ಬದುಕುವ ದಾರಿ ಬಹಳಷ್ಟಿವೆ. ಆದರೆ, ನಾವು ನಡೆಯುವ ದಾರಿಯನ್ನು ಹೆದ್ದಾರಿಯನ್ನಾಗಿಸುವಂತಹ ಕಾಯಕ ನಮ್ಮದಾಗಬೇಕು. ಎಐ ಯುಗದಲ್ಲಿ ಸ್ವಂತಿಕೆ ಮತ್ತು ಸಂವಹನ ಎಂಬುದು ವಿದ್ಯಾರ್ಥಿಗಳಲ್ಲಿ ದೂರಾಗುತ್ತಿರುವುದು ಸ್ವಾವಲಂಬಿ ಬದುಕಿಗೆ ಬಹುದೊಡ್ಡ ಹಿನ್ನಡೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜೀವನಕ್ಕೆ ಶಿಕ್ಷಣ ಅವಶ್ಯವಾಗಿದ್ದು ಅದು ಒಂದು ಹಂತಕ್ಕೆ ಬಂದು ತಲುಪಿದ ನಂತರ ಮತ್ತೊಬ್ಬರ ಮೇಲಿನ ಅವಲಂಬನೆ ಕಳಚಿಕೊಂಡು ನಮ್ಮ ಮುಂದಿರುವ ಅವಕಾಶ ಮತ್ತು ಸ್ಥಳಿಯ ಸಂಪನ್ಮೂಲ ಬಳಸಿಕೊಂಡು ಸ್ವಂತ ನಿರ್ಣಯದೊಂದಿಗೆ ಬದುಕುವ ಕಲೆಯನ್ನು ರೂಢಿಸಿಕೊಳ್ಳಬೇಕೆಂದು ಲಕ್ಷ್ಮೀ ಹೇಳಿದರು.

ವಿದ್ಯಾರ್ಥಿಗಳಲ್ಲಿರುವ ಚೈತನ್ಯ ಶಕ್ತಿ ಸಮಾಜದ ಹಿತಕ್ಕಾಗಿ ಬಳಕೆಯಾಗಬೇಕು. ಕೃಷಿಯಲ್ಲಿ ಆಸಕ್ತಿ ಮೂಡಿಸಿಕೊಳ್ಳಬೇಕು. ಜೀವನಕ್ಕೆ ಆಧಾರವಾಗಬಲ್ಲ ಉದ್ಯೋಗ ನಮ್ಮದಾಗಬೇಕು. ಜತೆಗೆ ಉತ್ಪಾದನೆ ಮತ್ತು ಮಾರಾಟದ ಕೌಶಲ್ಯ ನಮ್ಮಲ್ಲಿರಬೇಕು. ಅಂದಾಗ ಮಾತ್ರ ನಮ್ಮ ದೇಶ ಮುನ್ನಡೆಯಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನಲ್ಲಿ ವರ್ಷವಿಡಿ ಜರುಗಿದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದವರು ಮತ್ತು ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಭಾಗಗಳಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ನಗದು ಬಹುಮಾನ ವಿತರಿಸಿದರು.

ಪ್ರಾಂಶುಪಾಲರಾದ ಡಾ. ಉಮಾ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಒಕ್ಕೂಟ, ಕ್ರೀಡಾ ವಿಭಾಗ, ಎನ್‌ಎಸ್‌ಎಸ್, ರೋರ್ಸ್‌ ಮತ್ತು ರೇಂರ್ಸ್‌, ಯೂತ್‌ ರೆಡ್ ಕ್ರಾಸ್, ಪಠ್ಯೇತರ ಚಟುವಟಿಕೆಗಳ ವಿಭಾಗದ ಡಾ. ಆರ್.ಬಿ. ಸೋನೆಖಾನ, ಡಾ. ಸುರೇಶ ದೊಡಮನಿ, ಭೀಮಗೌಡ ಪಾಟೀಲ, ದೇವೆಂದ್ರ ತಳವಾರ, ಅಶ್ವಿನಿ ನಿಪ್ಪಾಣಿ, ತೇಜಸ್ವಿನಿ ಝುಂಜರವಾಡ, ವಿದ್ಯಾರ್ಥಿ ಪ್ರತಿನಿಧಿ ಕೋಮಲ ಶರ್ಮಾ, ಡಾ. ಸುಮಾ ಸಾವಂತ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ವಿನಾಯಕ ಕುರುಬರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಯಶಸ್ವಿಗೊಳಿಸಿ: ಡಾ. ದುರಗೇಶ್ ಕೆ.ಆರ್.
ಗೋ ಹತ್ಯೆ ತಡೆಯುವಂತೆ ಆಗ್ರಹಿಸಿ ಪ್ರತಿಭಟನೆ