ಕೃಷಿ ಉತ್ಪಾದನೆ ದ್ವಿಗುಣಗೊಳ್ಳಲಿ: ಎಡಿಸಿ ಅಬಿದ್ ಗದ್ಯಾಳ್

KannadaprabhaNewsNetwork |  
Published : May 07, 2025, 12:45 AM IST
5ಹಲಸು | Kannada Prabha

ಸಾರಾಂಶ

ಕೋಟ ಗಾಂಧಿ ಮೈದಾನದಲ್ಲಿ ಸಂಸ್ಕೃತಿ ಸಂಭ್ರಮ ಟ್ರಸ್ಟ್ ಕೋಟ ಕುಂದಾಪುರ, ವಿಧಾತ್ರಿ ರೈತ ಉತ್ಪಾದಕ ಸಂಸ್ಥೆ ಕೋಟ, ಗೀತಾನಂದ ಫೌಂಡೇಶನ್ ಮಣೂರು, ಕೋಟ ಸಹಕಾರಿ ವ್ಯವಸಾಯಕ ಸಂಘ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ಹಲಸು ಮತ್ತು ಮಾವು ಕೃಷಿ ಮೇಳ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಕೃಷಿ ಉತ್ಪಾದನೆ ಹೆಚ್ಚಿಸುವ ಬಗ್ಗೆ ಕಾರ್ಯಕ್ರಮಗಳು ಆಗಾಗ ನಡೆಯಬೇಕು. ಆ ಮೂಲಕ ಕೃಷಿ ಆದಾಯ ದ್ವಿಗುಣಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಬಿದ್ ಗುದ್ಯಾಳ್ ಹೇಳಿದರು.

ಕೋಟದ ಗಾಂಧಿ ಮೈದಾನದಲ್ಲಿ ಸಂಸ್ಕೃತಿ ಸಂಭ್ರಮ ಟ್ರಸ್ಟ್ ಕೋಟ ಕುಂದಾಪುರ, ವಿಧಾತ್ರಿ ರೈತ ಉತ್ಪಾದಕ ಸಂಸ್ಥೆ ಕೋಟ, ಗೀತಾನಂದ ಫೌಂಡೇಶನ್ ಮಣೂರು, ಕೋಟ ಸಹಕಾರಿ ವ್ಯವಸಾಯಕ ಸಂಘ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ಹಲಸು ಮತ್ತು ಮಾವು ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕೃಷಿ ಉತ್ಸವಗಳು ಕೃಷಿಗೆ ಪೂರಕ ವಾತಾವರಣವನ್ನು ಕಲ್ಪಿಸುತ್ತದೆ. ಈ ದಿಸೆಯಲ್ಲಿ ಇಂಥಹ ಕಾರ್ಯಕ್ರಮಗಳು ಎಲ್ಲ ಭಾಗದಲ್ಲಿ ಹೆಚ್ಚು ಹೆಚ್ಚು ನಡೆಯಬೇಕು ಎಂದರು.ಇದೇ ವೇಳೆ ಸ್ಥಳೀಯ ರೈತ ಸಾಧಕರಾದ ಒಳಮಾಡು ಆನಂದ ಮರಕಾಲ, ಚಂದ್ರಶೇಖರ್ ಗಾಣಿಗ, ನಿಶಾ ದೇವಾಡಿಗ ಬೇಳೂರು ಅವರನ್ನು ಗೌರವಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಸಂಸ್ಕೃತಿ ಸಂಭ್ರಮ ಟ್ರಸ್ಟ್‌ನ ಶ್ರೀಧರ ಮರವಂತೆ ವಹಿಸಿದ್ದರು.ಮುಖ್ಯ ಅಭ್ಯಾಗತರಾಗಿ ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ಕೋಟ ಸಹಕಾರಿ ವ್ಯವಸಾಯಕ ಸಂಘ ನಿರ್ದೇಶಕ ಟಿ.ಮಂಜುನಾಥ್ ಗಿಳಿಯಾರು, ಎಪಿಎಂಸಿ ಮಾಜಿ ಉಪಾಧ್ಯಕ್ಷ ಕೃಷ್ಣ ಪೂಜಾರಿ ಪಿ., ವಿಧಾತ್ರಿ ಸಂಸ್ಥೆ ಅಧ್ಯಕ್ಷ ಶ್ರಾವಿತ್ ಎನ್. ಶೆಟ್ಟಿ, ಸಂಸ್ಕ್ರತಿ ಸಂಭ್ರಮ ಟ್ರಸ್ಟ್‌ನ ಸದಸ್ಯರಾದ ಇಬ್ರಾಹಿಂ ಬ್ಯಾರಿ, ಸತೀಶ್ ಕುಮಾರ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಹಲಸು ಮಾವು ಮೇಳದ ಸಂಘಟಕ ರಮೇಶ್ ಮೆಂಡನ್ ಸಾಲಿಗ್ರಾಮ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಕೃಷಿ ಮತ್ತು ತೋಟಗಾರಿಕಾ ಇಲಾಖೆ, ಕೃಷಿ ಸಂಶೋಧನಾ ಕೇಂದ್ರ ಬ್ರಹ್ಮಾವರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಡುಪಿ ಸಹಕಾರ ನೀಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!