ಗುಂಡ್ಲುಪೇಟೆ: ಕೃಷಿ ಉದ್ದೇಶಕ್ಕೆ ಬಳಕೆಯಾಗಬೇಕಾದ ನೀರು ವಾಣಿಜ್ಯ ಉದ್ದೇಶಕ್ಕೆ ಬಳಕೆ ಆಗುತ್ತಿದೆ. ಈ ಬಗ್ಗೆ ಚಾಮುಂಡೇಶ್ವರಿ ವಿದ್ಯುತ್ ನಿಗಮ (ಸೆಸ್ಕಾಂ) ಜಾಗೃತ ದಳವೇ ಕಾರಣ ಎಂದು ರೈತಸಂಘದ ಮುಖಂಡ ಚಿಕ್ಕಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಈ ಬಗ್ಗೆ ಸೆಸ್ಕಾಂ ಜಾಗೃತ ದಾಳದ ವಿಶ್ವನಾಥ್ ದಾಳಿ ನಡೆಸಿ ದಂಡ ಹಾಕಿದ್ದರು. ಆದರೆ ಸೆಸ್ಕಾಂ ಜಾಗೃತ ದಳದ ನಿರ್ಲಕ್ಷ್ಯದ ಫಲವಾಗಿ ನೀರಿನ ಮಾರಾಟ ನಿಂತಿಲ್ಲ. ಕೃಷಿ ಹೆಸರಲ್ಲಿ ನೀರು ವಾಣಿಜ್ಯ ಉದ್ದೇಶಕ್ಕೆ ಮಾರಾಟವಾಗುತ್ತಿದೆ ಎಂದಿದ್ದಾರೆ.
ಕೃಷಿ ಜಮೀನಿನಲ್ಲಿ ಟ್ಯಾಂಕರ್‌ಗೆ ನೀರು ತುಂಬುವ ಸಂದರ್ಭದಲ್ಲಿ ಸೆಸ್ಕ್ ಜಾಗೃತದ ಸಿಬ್ಬಂದಿ ದಾಳಿ ನಡೆಸಿದ್ದರು ಈಗ ದೂರು ಹೇಳಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ.ಕೃಷಿ ಚಟುವಟಿಕೆಗೆ ಉಚಿತ ವಿದ್ಯುತ್ ಪಡೆದು ವಾಣಿಜ್ಯ ಉದ್ದೇಶಕ್ಕೆ ನೀರನ್ನು ಮಾರಾಟ ಮಾಡುತ್ತಿದ್ದಾರೆ.ಕೆಲವರು ಆರ್‌ಆರ್ ನಂಬರ್ ಆಗದೆ ಇದ್ದರೂ ವಿದ್ಯುತ್ ಪಡೆದು ನೀರು ಹೊರ ತೆಗೆಯುತ್ತಿದ್ದಾರೆ ಈ ಬಗ್ಗೆ ಕ್ರಮ ವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.