ಕೃಷಿ ಇಲಾಖೆ ನಡಿಗೆ ರೈತರ ಮನಬಾಗಿಲಿಗೆ: ಅಶೋಕ್

KannadaprabhaNewsNetwork | Published : May 11, 2025 11:54 PM
Follow Us

ಸಾರಾಂಶ

ಕಡೂರು, ಕೃಷಿ ಇಲಾಖೆ ಮತ್ತು ಶಾಸಕ ಕೆ. ಎಸ್. ಆನಂದ್ ಅವರ ಮಾರ್ಗದರ್ಶನದಲ್ಲಿ ಕೃಷಿ ಇಲಾಖೆ ನಡಿಗೆ ರೈತರ ಮನಬಾಗಿಲಿಗೆ ಎಂಬ ಘೋಷಣೆಯಡಿ ಸರ್ಕಾರದ ಸವಲತ್ತುಗಳು ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಸಿಗುವ ನಿಟ್ಟಿನಲ್ಲಿ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ತಾಲೂಕಿನಾದ್ಯಂತ ಪ್ರಸ್ತುತಪಡಿಸಲಾಗುತ್ತಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಎಂ. ಅಶೋಕ್ ತಿಳಿಸಿದರು.

ತಾಲೂಕಿನ ಗಡಿಗ್ರಾಮವಾದ ಚೌಡಿಪಾಳ್ಯ ಗ್ರಾಮದಲ್ಲಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕಡೂರು

ಕೃಷಿ ಇಲಾಖೆ ಮತ್ತು ಶಾಸಕ ಕೆ. ಎಸ್. ಆನಂದ್ ಅವರ ಮಾರ್ಗದರ್ಶನದಲ್ಲಿ ಕೃಷಿ ಇಲಾಖೆ ನಡಿಗೆ ರೈತರ ಮನಬಾಗಿಲಿಗೆ ಎಂಬ ಘೋಷಣೆಯಡಿ ಸರ್ಕಾರದ ಸವಲತ್ತುಗಳು ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಸಿಗುವ ನಿಟ್ಟಿನಲ್ಲಿ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ತಾಲೂಕಿನಾದ್ಯಂತ ಪ್ರಸ್ತುತಪಡಿಸಲಾಗುತ್ತಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಎಂ. ಅಶೋಕ್ ತಿಳಿಸಿದರು.

ತಾಲೂಕಿನ ಗಡಿಗ್ರಾಮವಾದ ಚೌಡಿಪಾಳ್ಯ ಗ್ರಾಮದಲ್ಲಿ ನಡೆದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕೃಷಿ ಇಲಾಖೆ ನಡಿಗೆ ರೈತರ ಮನೆಬಾಗಿಲಿಗೆ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ ರೈತರು ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಳ್ಳಲು ಅಧಿಕಾರಿಗಳೊಂದಿಗೆ ಕೈಜೋಡಿಸಿ, ತಮ್ಮ ಕುಟುಂಬವನ್ನು ಸ್ವಾವಲಂಬಿ ಕುಟುಂಬ ವನ್ನಾಗಿ ಮಾಡಿಕೊಳ್ಳಲು ಸಹಕರಿಸಬೇಕೆಂದು ಮನವಿ ಮಾಡಿದರು.

ತಿಮ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾ ಮಾತನಾಡಿ ಸರ್ಕಾರದ ನಡೆ ರೈತರ ಮನಬಾಗಿಲಿಗೆ ಎಂಬ ವಿನೂತನ ಕಾರ್ಯಕ್ರಮದಲ್ಲಿ ರೈತರಿಗೆ ಅಗತ್ಯವಾದ ಸವಲತ್ತುಗಳನ್ನು ನೇರವಾಗಿ ತಲುಪುವಂತೆ ಮಾಡುವ ಪ್ರಮುಖ ಉದ್ದೇಶವಿದೆ ಎಂದರು.

ಹಣೆಗೆರೆ ಗ್ರಾಪಂ ಅಧ್ಯಕ್ಷೆ ರತ್ನಮ್ಮ ಮಾತನಾಡಿ, ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ನಡೆಯು ತ್ತಿರುವುದು ಸಂತಸದ ಸಂಗತಿ ಸರ್ಕಾರದ ಉದ್ದೇಶ ಕೂಡ ರೈತರ ಬದುಕು ಹಸನಾಗಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ. ರೈತ ಬಾಂಧವರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಜಾನಕಮ್ಮ, ಮಲ್ಲಪ್ಪ, ಚೌಡಪ್ಪ, ಕೃಷಿ ಇಲಾಖೆಯ ಅಧಿಕಾರಿ ಹರಿಪ್ರಸಾದ್, ಸಿಬ್ಬಂದಿ ಲಕ್ಷ್ಮೀ, ಪ್ರಜ್ವಲ್, ಭೂಸಂಪನ್ಮೂಲ ವ್ಯವಸ್ಥಾಪಕ ಆನಂದ್, ಸವಿತಾ ಆರ್. ಕುಮಾರಿ, ಜೋಡಿಪಾಳ್ಯ, ಹ‍ಣೆಗೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

10ಕೆಕೆಡಿಯು2

ಕಡೂರು ತಾಲೂಕಿನ ಚೌಡಿಪಾಳ್ಯ ಗ್ರಾಮದಲ್ಲಿ ಸರ್ಕಾರದ ಕೃಷಿ ಇಲಾಖೆಯಿಂದ ಕೃಷಿ ಇಲಾಖೆ ನಡಿಗೆ ರೈತರ ಮನೆಬಾಗಿಲಿಗೆ ಎಂಬ ಕಾರ್ಯಕ್ರಮವು ನಡೆಯಿತು.