ಅಹಿಂದ ಸಂರಕ್ಷಣಾ ವೇದಿಕೆ ಪದಾಧಿಕಾರಿಗಳ ಸಭೆ

KannadaprabhaNewsNetwork |  
Published : Sep 30, 2024, 01:25 AM IST
29ಕೆಎಂಎನ್ ಡಿ29 | Kannada Prabha

ಸಾರಾಂಶ

ಮಾಜಿ ಸಿಎಂ ಹಿಂದುಳಿದ ವರ್ಗಗಳ ನೇತಾರ, ದೇವರಾಜು ಅರಸು ಜನ್ಮ ದಿನಾಚರಣೆ ಆಚರಣೆಯನ್ನು ಮದ್ದೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ಮಾಡುವ ಬಗ್ಗೆ ಚರ್ಚೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಅಹಿಂದ ಸಂರಕ್ಷಣಾ ವೇದಿಕೆ ಪದಾಧಿಕಾರಿಗಳ ಸಭೆ ನಡೆಯಿತು.

ವೇದಿಕೆ ಅಧ್ಯಕ್ಷ ಅತಗೂರು ನಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಸಿಎಂ ಹಿಂದುಳಿದ ವರ್ಗಗಳ ನೇತಾರ, ದೇವರಾಜು ಅರಸು ಜನ್ಮ ದಿನಾಚರಣೆ ಆಚರಣೆಯನ್ನು ಮದ್ದೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ಮಾಡುವ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಇತಿಯಾಜ್ ಉಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ, ಖಜಾಂಚಿ ಮುಟ್ಟನಹಳ್ಳಿ ರಮೇಶ್ ಸಂಘಟನಾ ಕಾರ್ಯದರ್ಶಿ, ಶಶಿ ಕುಮಾರ್ ಪಿ, ಪದಾಧಿಕಾರಿಗಳಾದ ಮಹದೇವಪ್ಪ, ವೈರಮುಡಿ, ಕೆ.ಟಿ.ಶಿವಕುಮಾರ್, ಜಯರಾಮು, ಪ್ರಮೀಳಾ, ನಾಗಲಿಂಗಯ್ಯ ಚೆನ್ನನಂಜಚಾರಿ, ನಾಗರಾಜ್ ಹಾಗೂ ಇತರರು ಇದ್ದರು.

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಮುಖ್ಯಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಮಳವಳ್ಳಿ:ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ದೂರಿನ ಹಿನ್ನೆಲೆಯಲ್ಲಿ ಪ್ರಭಾರ ಮುಖ್ಯಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ತಾಲೂಕಿನ ಸರ್ಕಾರಿ ಪ್ರೌಢಶಾಲೆಯೊಂದರ ಪ್ರಭಾರ ಮುಖ್ಯ ಶಿಕ್ಷಕ ಅನೀಸ್ ಅಹಮದ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪಟ್ಟಣದಿಂದ 8 ಕೀ.ಮೀ. ದೂರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 13 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಮಾಜ ವಿಜ್ಞಾನ ವಿಷಯ ಶಿಕ್ಷಕ ಅನೀಸ್ ಅಹಮದ್ (55) ಇತ್ತೀಚಿಗೆ ಶಾಲೆ ಮುಖ್ಯಶಿಕ್ಷಕರು ನಿವೃತ್ತಿ ಹೊಂದಿದ್ದ ಹಿನ್ನೆಲೆಯಲ್ಲಿ ಪ್ರಭಾರ ಮುಖ್ಯಶಿಕ್ಷಕರಾಗಿದ್ದರು.ಶಾಲೆಯಲ್ಲಿ 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಸೆ.25ರ ಬೆಳಗ್ಗೆ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸದಸ್ಯರು ಭೇಟಿ ನೀಡಿ ವಿದ್ಯಾರ್ಥಿನಿಯರು ಹಾಗೂ ಪೋಷಕರಿಂದ ಮಾಹಿತಿ ಸಂಗ್ರಹಿಸಿದ್ದರು.

ಬಿಇಒ ಅವರ ಭೇಟಿಯ ವೇಳೆ ಹಲವು ವಿದ್ಯಾರ್ಥಿನಿಯರು ಪ್ರಭಾರ ಮುಖ್ಯಶಿಕ್ಷಕನ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ಸೆ.28ರ ಸಂಜೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಇಒ ವಿ.ಈ. ಉಮಾ ಅವರು ಪ್ರಭಾರ ಮುಖ್ಯಶಿಕ್ಷಕ ಅನೀಸ್ ಅಹಮದ್ (55) ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ