ಕ್ಷಯ ರೋಗ ಪತ್ತೆಗೆ ಎಐ ಆಧಾರಿತ ಎಕ್ಸ್ ರೇ ಯಂತ್ರ ಸಹಕಾರಿ: ಡಾ.ಆಶಾರಾಣಿ

KannadaprabhaNewsNetwork |  
Published : May 21, 2026, 01:45 AM IST
20ಕೆಎಂಎನ್ ಡಿ11 | Kannada Prabha

ಸಾರಾಂಶ

ಕ್ಷಯ ರೋಗದ ಲಕ್ಷಣ ಇರುವವರಿಗೆ ಕಫ ಪರೀಕ್ಷೆ ಹಾಗೂ ಎಕ್ಸ್ ರೇ ಮಾಡಿಸುವ ಮೂಲಕ ಆದಷ್ಟು ಬೇಗ ಕ್ಷಯ ರೋಗ ಪತ್ತೆ ಮಾಡಬಹುದು. ರೋಗ ದೃಢ ಪಟ್ಟರೆ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಚಿಕಿತ್ಸೆ ನೀಡಿ ಗುಣ ಪಡಿಸಬಹುದು. ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ತೆಗೆದುಕೊಂಡರೆ ಮತ್ತೊಬ್ಬರಿಗೆ ಹರಡುವುದನ್ನು ತಪ್ಪಿಸಿ, ಮರಣದ ಪ್ರಮಾಣವನ್ನು ಕಡಿಮೆ ಮಾಡಬಹುದು.

ಮದ್ದೂರು:

ಕ್ಷಯ ರೋಗ ಪತ್ತೆಗೆ ಎಐ ಆಧಾರಿತ ಹ್ಯಾಂಡ್ ಹೆಲ್ಡ್ ಎಕ್ಸ್ ರೇ ಅತ್ಯಂತ ಪರಿಣಾಮಕಾರಿ ಎಂದು ಡಾ.ಆಶಾರಾಣಿ ತಿಳಿಸಿದರು. ತಾಲೂಕಿನ ವಳಗೆರೆಹಳ್ಳಿಯಲ್ಲಿ 100 ದಿನಗಳ ಕ್ಷಯ ಮುಕ್ತ ಭಾರತ ಅಭಿಯಾನದ ಶಿಬಿರದಲ್ಲಿ ಎಕ್ಸ್ ರೇ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮದಲ್ಲಿ ಎಕ್ಸ್ ರೇ ಮಾಡಿಸಿಕೊಳ್ಳಲು ಯಂತ್ರ ಲಭ್ಯವಿದೆ. ಸಾರ್ವಜನಿಕರು ಉಚಿತ ಎಕ್ಸ್ ರೇ ಮಾಡಿಸಿಕೊಳ್ಳಬೇಕು ಎಂದರು.

ಕ್ಷಯ ರೋಗದ ಲಕ್ಷಣ ಇರುವವರಿಗೆ ಕಫ ಪರೀಕ್ಷೆ ಹಾಗೂ ಎಕ್ಸ್ ರೇ ಮಾಡಿಸುವ ಮೂಲಕ ಆದಷ್ಟು ಬೇಗ ಕ್ಷಯ ರೋಗ ಪತ್ತೆ ಮಾಡಬಹುದು. ರೋಗ ದೃಢ ಪಟ್ಟರೆ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಚಿಕಿತ್ಸೆ ನೀಡಿ ಗುಣ ಪಡಿಸಬಹುದು. ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ತೆಗೆದುಕೊಂಡರೆ ಮತ್ತೊಬ್ಬರಿಗೆ ಹರಡುವುದನ್ನು ತಪ್ಪಿಸಿ, ಮರಣದ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪುಟ್ಟಸ್ವಾಮಿ, ಡಿಪಿಸಿ ಹರ್ಷ, ಪಿಪಿಎಂ ನವೀನ್, ಡಿಎಂಎಚ್ ಪಿ ಸನತ್, ಎಲ್‌ಟಿಒ ಆನಂದ್, ಪಿಎಚ್‌ಸಿಒಗಳಾದ ಚೈತ್ರ ರಾಣಿ, ರಮ್ಯ , ಸಿಎಚ್ಒ, ಸಿಂಧು, ಕ್ಷ-ಕಿರಣ ತಂತ್ರಜ್ಞೆ ಚೇತನ, ಎಸ್‌.ಟಿ.ಎಸ್ ಕೆಂಪೇಗೌಡ, ಎಸ್‌ಟಿಎಲ್‌ಎಸ್ ಅರುಣ್ವಿ ಕುಮಾರ್, ಪಲ್ಲವಿ, ಕೆ.ಎಚ್‌ಪಿಟಿ ಸಚಿನ್, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಹಾಜರಿದ್ದರು.

ಜೂ.9 ರಂದು ಬೃಹತ್ ಆರೋಗ್ಯ ಶಿಬಿರ

ನಾಗಮಂಗಲ: ತಾಲೂಕಿನಲ್ಲಿ ಜೂ.9 ರಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿದೆ.ಮದ್ದೂರು ತಾಲೂಕಿನ ಕೊಪ್ಪ ಸೇರಿದಂತೆ ನಾಗಮಂಗಲ ವಿಧಾನಸಭಾ ಕ್ಷೇತ್ರದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಆದಿಚುಂಚನಗಿರಿ ಮಹಾವಿದ್ಯಾಲಯ, ಜಯದೇವ ಆಸ್ಪತ್ರೆ, ಮಂಡ್ಯ ಮಿಮ್ಸ್ ಸೇರಿದಂತೆ ಇನ್ನಿತರ ಪ್ರತಿಷ್ಠಿತ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಅಂದು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ.

ಈ ಶಿಬಿರದ ಸಾನಿಧ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದು, ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಶಿಬಿರ ಉದ್ಘಾಟಿಸಲಿದ್ದಾರೆ. ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಪ್ರತಿ ಹಳ್ಳಿಗಳಿಗೂ ವಿಷಯ ತಲುಪಿಸಬೇಕು. ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಶಿಬಿರದ ಯಶಸ್ವಿಗೆ ಶ್ರಮಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಮಟ್ಟದ ಬಾಸ್ಕೆಟ್‌ಬಾಲ್ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ: ಪಿ.ರವಿಕುಮಾರ್
ದಾಳಿಗೆ ಹೆದರಿ ಕಡತಗಳನ್ನು ಬಚ್ಚಿಟ್ಟ ಬೇಲೂರು ಗ್ರಾಪಂ ಅಧಿಕಾರಿಗಳು