ಕನ್ನಡಪ್ರಭ ವಾರ್ತೆ ಕೆಜಿಎಫ್
ಜಿಎಫ್‌ನಲ್ಲಿ ಇದುವರೆಗೆ ಶಾಸಕರಾಗಿ ಆಯ್ಕೆಯಾದ ಯಾರೊಬ್ಬರೂ ಈ ಹಿಂದೆ ಮಾಡದ ಮುಂದೆ ಮಾಡಲು ಸಾಧ್ಯವಾಗದ ರೀತಿಯಲ್ಲಿ ಕೈಗಾರಿಕೆಗಳ ಕ್ರಾಂತಿಯನ್ನೇ ಸೃಷ್ಠಿ ಮಾಡುತ್ತೇನೆ ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು.ನಗರದ ಕಿಂಗ್ ಜಾರ್ಜ ಹಾಲ್ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ನಗರಸಭೆಯಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಕುರಿತು ಪರಿಶೀಲನೆ ಮತ್ತು ನಾಗರಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಕೈಗಾರಿಕೆಗಳ ಸ್ಥಾಪನೆಪ್ರತಿನಿತ್ಯ ಕೆಜಿಎಫ್ ನಗರದಿಂದ ಬೆಂಗಳೂರು ನಗರದ ಆಸ್ಪತ್ರೆಗಳು, ಐಟಿ ಕಂಪನಿಗಳಲ್ಲಿ ಹಾಗೂ ಸಣ್ಣಪುಟ್ಟ ಕಂಪನಿಗಳಲ್ಲಿ ನೌಕರಿಗೆ ಸುಮಾರು ೨೦ ಸಾವಿರ ಮಂದಿ ಉದ್ಯೋಗಕ್ಕಾಗಿ ಹೋಗುತ್ತಾರೆ. ಇವರಿಗೆ ಸ್ಥಳೀಯವಾಗಿ ಕೆಲಸ ನೀಡಬೇಕು ಎಂಬ ಉದ್ದೇಶದಿಂದ ನಗರದ ಹೊರವಲಯದಲ್ಲಿ ಬಿಇಎಂಎಲ್ ಕಂಪನಿಗೆ ನೀಡಲಾಗಿದ್ದ ೨೦೦೦ ಎಕರೆ ಜಮೀನಿನಲ್ಲಿ ೯೭೩ ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ವಶಕ್ಕೆ ಪಡೆದಿದ್ದು, ಇಲ್ಲಿ ಕೈಗಾರಿಕೆಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಗ್ಯಾರಂಟಿ ಹಣ ಬರುತ್ತಿಲ್ಲಸಭೆಯಲ್ಲಿ ನೂರಾರು ಮಹಿಳೆಯರು ಆದಾಯ, ಜಾತಿ ಪ್ರಮಾಣ ಪತ್ರ, ಪಿಂಚಣಿ ಬರುತ್ತಿಲ್ಲ, ೨ ಸಾವಿರ ರೂ ನಮ್ಮ ಅಕೌಂಟ್‌ಗಳಿಗೆ ಬರುತ್ತಿಲ್ಲ ಎಂಬ ದೂರುಸಲ್ಲಿಸಿದರು.ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಸದಸ್ಯರಾದ ಪ್ರವೀಣ್‌ಕುಮಾರ್, ಜಯಲಕ್ಷ್ಮಿ ಭಾಸ್ಕರ್ , ಜರ್ಮನ್, ಶಾಲಿನಿ ನಂದಕುಮಾರ, ಸುಕನ್ಯ ಸುರೇಶ್, ತಹಶೀಲ್ದಾರ್ ರಾಮಲಕ್ಷ್ಮಯ್ಯ, ನಗರಸಭೆ ಪೌರಾಯುಕ್ತ ಪವನ್‌ಕುಮಾರ, ಸಿಡಿಪಿಒ ರಾಜೇಶ್ ಇದ್ದರು.
ಬಾಕ್ಸ್:ಶಾಸಕರ ತಮಿಳು ಭಾಷಾ ಪ್ರೇಮ!
ಕೆಜಿಎಫ್ ನಗರವು ಒಂದೆಡೆ ತಮಿಳುನಾಡು ಮತ್ತೊಂದೆಡೆ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದ್ದು, ಕನ್ನಡ ಭಾಷೆಯ ಮೇಲೆ ತಮಿಳು ಮತ್ತು ತೆಲುಗು ಭಾಷೆಗಳ ಪ್ರಭಾವ ಹೆಚ್ಚಾಗಿರುವಂತಹ ಪ್ರದೇಶವಾಗಿದೆ. ಹೀಗಿರುವಾಗ ಶಾಸಕಿ ರೂಪಕಲಾ ಶಶಿಧರ್ ಇಂದು ನಡೆದ ಸಭೆಯಲ್ಲಿ ತಮಿಳು ಭಾಷೆಯಲ್ಲಿ ಮಾತನಾಡುವ ಮೂಲಕ ತಮಿಳು ಭಾಷಾ ಪ್ರೇಮ ಮೆರೆದಿದ್ದಾರೆ.ಇತ್ತೀಚೆಗೆ ಕೆಲವು ದಿನಗಳ ಹಿಂದೆ ರಾಜ್ಯಾದ್ಯಂತ ಕಚೇರಿಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಮತ್ತು ನಾಮಫಲಕಗಳಲ್ಲಿ ಶೇ.೬೦ ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕೆಂದು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದವು. ಆದಾಗ್ಯೂ ಶಾಸಕರು ಸಾರ್ವಜನಿಕವಾಗಿ ಸರ್ಕಾರಿ ಕಾರ್ಯಕ್ರಮದಲ್ಲಿ ತಮಿಳಲ್ಲಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಕೇಳಿ ಬರುತ್ತಿತ್ತು.