ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಜಯ್ ಕುಮಾರ್ ಮಾತಿಗೆ ಉಳಿದ ಸದಸ್ಯರು ಧ್ವನಿಗೂಡಿಸಿದರು.
ರೋಟರಿ ಕಟ್ಟಡಗಳನ್ನು ನಗರಸಭೆ ಸುಪರ್ದಿಗೆ ಪಡೆಯಬೇಕು. ನಗರಸಭೆಯಿಂದಲೇ ಅನುಮತಿ ಪಡೆದು ಕಾರ್ಯಕ್ರಮಗಳನ್ನು ನಡೆಸಬೇಕು. ಈ ಬಗ್ಗೆ ರೋಟರಿಯವರ ದಾಖಲಾತಿಗಳನ್ನು ತರಿಸಿಕೊಂಡು ಪರಿಶೀಲಿಸಿ ಆದಷ್ಟು ಬೇಗ ರೋಟರಿ ಕಟ್ಟಡವನ್ನು ನಗರಸಭೆ ತನ್ನ ಆಡಳಿತಕ್ಕೆ ಪಡೆಯಬೇಕು. ಜೊತೆಗೆ ನನ್ನ ವಾರ್ಡ್‌ನಲ್ಲಿ ಬೀದಿ ದೀಪಗಳ ಸಮಸ್ಯೆ ಇದ್ದು ವಿದ್ಯುತ್ ದೀಪಗಳ ನಿರ್ವಹಣೆಯ ಗುತ್ತಿಗೆ ಬಗ್ಗೆ ಮಾಹಿತಿ ಕೇಳಿದರೆ ಎಇಇ ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ ಎಂದು ಎಇಇ ವಿರುದ್ಧ ಕಿಡಿಕಾರಿದರು.ನಗರಸಭೆ ಸದಸ್ಯ ಜಿ.ಎಸ್.ತಿಪ್ಪೇಸ್ವಾಮಿ ಮಾತನಾಡಿ, ಬೀದಿ ದೀಪ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರ ನಾಗರಾಜ್ ಎನ್ನುವವರ ಮೇಲೆ ವ್ಯಾಪಕ ದೂರುಗಳಿವೆ ಎಂದರು.
ಹಿರಿಯ ಸದಸ್ಯ ಈ.ಮಂಜುನಾಥ್ ಮಾತನಾಡಿ, ಸಾರ್ವಜನಿಕರ ಕೆಲಸಗಳಲ್ಲಿ ರಾಜಿ ಆಗಬೇಡಿ. ಯಾವುದೇ ಪಕ್ಷದವರ ಮುಲಾಜಿಗೂ ಒಳಗಾಗಬೇಡಿ ಎಂದು ತಾಂತ್ರಿಕ ಶಾಖೆಗೆ ಕಿವಿಮಾತು ಹೇಳಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂಡಿ ಸಣ್ಣಪ್ಪ, ಮಮತಾ, ವಿಠ್ಠಲ್ ಪಾಂಡುರಂಗ, ರತ್ನಮ್ಮ, ಸದಸ್ಯರಾದ ಈರಲಿಂಗೇ ಗೌಡ, ಜಗದೀಶ್, ಅಂಬಿಕಾ ಆರಾಧ್ಯ, ಮೊದಲ ಮರಿಯಾ, ಕವಿತಾ ಲೋಕೇಶ್, ಶಂಷುನ್ನೀಸ, ಅನಿಲ್ ಕುಮಾರ್,ಸಮೀವುಲ್ಲ, ವೈಪಿಡಿ ದಾದಾಪೀರ್, ಗುಂಡೇಶ್ ಕುಮಾರ್, ಬೆಸ್ಕಾo ಎಇಇ ಪೀರ್ ಸಾಬ್, ನಾಮ ನಿರ್ದೇಶಿತ ಸದಸ್ಯರಾದ ಗಿರೀಶ್, ಶಿವಕುಮಾರ್, ಶಿವಣ್ಣ, ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಚಿತ್ರಜಿತ್ ಯಾದವ್, ಸದಸ್ಯ, ನಗರಸಭೆ, ಹಿರಿಯೂರು