ಕನ್ನಡಪ್ರಭ ವಾರ್ತೆ ಶಿವಮೊಗ್ಗ ಶಿವಮೊಗ್ಗ ದಸರಾ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ದಸರಾ ಸಮಿತಿ ವತಿಯಿಂದ ಅ.20ರಿಂದ ನಾಲ್ಕು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಿದ್ದು, ಹೆಸರಾಂತ ನಾಯಕ ನಟರಾದ ಅಜಯ್ ರಾವ್, ವಿಜಯ್ ರಾಘವೇಂದ್ರ ಮೆರಗು ನೀಡಲಿದ್ದಾರೆ ಎಂದು ಸಾಂಸ್ಕೃತಿಕ ದಸರಾ ಸಮಿತಿ ಅಧ್ಯಕ್ಷ ಇ.ವಿಶ್ವಾಸ್ ಹೇಳಿದರು. ಪಾಲಿಕೆ ಕಚೇರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.20ರಂದು ಸಂಜೆ 5 ರಿಂದ ರಾತ್ರಿ 9-30 ರವರೆಗೆ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರರಾಜ್ ನೇತೃತ್ವದಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಕವಿಗೋಷ್ಠಿ ನಡೆಯಲಿದ್ದು, ಖ್ಯಾತ ವಕೀಲ ಎಂ.ಆರ್. ಸತ್ಯನಾರಾಯಣ ಉದ್ಘಾಟಿಸಲಿದ್ದಾರೆ ಎಂದರು. ಮುಖ್ಯ ಅತಿಥಿಯಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ ಬಿಜೆಪಿ ನಗರಾಧ್ಯಕ್ಷ ಜಗದೀಶ್, ಆಯುಕ್ತ ಕೆ. ಮಾಯಣ್ಣ ಗೌಡ, ಪಾಲಿಕೆ ಸದಸ್ಯ ಎಸ್.ಜ್ಞಾನೇಶ್ವರ್, ಸುನೀತಾ ಅಣ್ಣಪ್ಪ, ರಾಹುಲ್ ಪಿ. ಬಿದರೆ, ಕಲ್ಪನಾ ರಮೇಶ್ ಹಾಗೂ ಇನ್ನಿತರರು ಭಾಗವಹಿಸಲಿದ್ದು, ಅಧ್ಯಕ್ಷತೆ ಮೇಯರ್ ಎಸ್. ಶಿವಕುಮಾರ್ ವಹಿಸಲಿದ್ದಾರೆ ಎಂದರು. ಅ.22ರಂದು ಸಂಜೆ 5.30ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ನಾಟ್ಯ ವೈವಿಧ್ಯ ಹಾಗೂ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಖ್ಯಾತ ಚಿತ್ರನಟ ಅಜಯ್ ರಾವ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್‍ಯಾ ನಾಯ್ಕ, ಎಸ್. ರುದ್ರೇಗೌಡ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಆಯುಕ್ತ ಕೆ. ಮಾಯಣ್ಣ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಮೇಯರ್ ಎಸ್. ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ ನಾಯಕ್ ಆಗಮಿಸಲಿದ್ದಾರೆ. ಸಮಿತಿ ಅಧ್ಯಕ್ಷ ಇ.ವಿಶ್ವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಅನಂತರ ಪ್ರಹ್ಲಾದ್ ದೀಕ್ಷಿತ್ ನೇತೃತ್ವದಲ್ಲಿ ರಾಗರಂಜಿನಿ ತಂಡದವರಿಂದ ಸಂಗೀತ ಸಂಭ್ರಮ ಹಾಗೂ ಸ್ಥಳೀಯ ನೃತ್ಯ ಶಾಲಾ ಮಕ್ಕಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ ಎಂದರು. ಅ.23ರಂದು ಸಂಜೆ 5.30ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಸಂಗೀತ ಹಾಗೂ ಜಾನಪದ ವೈಭವ ಕಾರ್ಯಕ್ರಮವನ್ನು ಖ್ಯಾತ ಚಿತ್ರನಟ ವಿಜಯ ರಾಘವೇಂದ್ರ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕ ಬಿ.ವೈ.ವಿಜಯೇಂದ್ರ, ಡಿ.ಎಸ್.ಅರುಣ್, ಆಯುಕ್ತ ಕೆ.ಮಾಯಣ್ಣ ಗೌಡ, ಮಾಜಿ ಶಾಸಕ ಕೆ.ಬಿ. ಅಶೋಕ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹಾಗೂ ಇನ್ನಿತರರು ಆಗಮಿಸಲಿದ್ದಾರೆ ಎಂದರು. ಅನಂತರ ಜೋಗಿ ಸುನೀತಾ, ಮಂಗಳಾ ರವಿ ಹಾಗೂ ಕಲಾತ್ಮಕ ತಂಡದವರಿಂದ ಸಂಗೀತ ವೈಭವ ಮತ್ತು ನಾಗರಾಜಮೂರ್ತಿ ತಂಡದವರಿಂದ ಜಾನಪದ ವೈಭವ ನಡೆಯಲಿದೆ. ಅದೇ ದಿನ ಸಂಜೆ 5ರಿಂದ ರಾತ್ರಿ 10 ಗಂಟೆವರೆಗೆ ಕುವೆಂಪು ರಂಗಮಂದಿರದಲ್ಲಿ ಯಕ್ಷ ದಸರಾ ನಡೆಯಲಿದೆ. ಶಿವಮೊಗ್ಗದ ಯಕ್ಷ ಸಂವರ್ಧನಾದ ಕಾರ್ಯದರ್ಶಿ ಶ್ರೀನಿವಾಸ ಆಚಾರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಉಪಮೇಯರ್ ಲಕ್ಷ್ಮೀ ಶಂಕರ ನಾಯಕ್ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ, ಮೇಯರ್ ಎಸ್.ಶಿವ ಕುಮಾರ್ ಹಾಗೂ ಪಾಲಿಕೆ ಸದಸ್ಯರ ಭಾಗವಹಿಸಲಿದ್ದಾರೆ. ನಂತರ ಯಕ್ಷ ಸಂವರ್ಧನಾ ತಂಡದವರಿಂದ ಲಕ್ಷ್ಮೀ ವಿವಾಹ ಹಾಗೂ ಮಹಾಗಣಪತಿ ಯಕ್ಷಕಲಾ ಬಳಗದವರಿಂದ ಬಲರಾಮ ಗರ್ವಭಂಗ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಅ.24ರಂದು ಸಂಜೆ 5 ಗಂಟೆವರೆಗೆ ಫ್ರೀಡಂ ಪಾರ್ಕ್‌ನಲ್ಲಿ ಶಂಕರ್ ಶ್ಯಾನಭಾಗ್ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಪಾಲಿಕೆ ಸದಸ್ಯೆ ಸುನೀತಾ ಅಣ್ಣಪ್ಪ, ಸಮಿತಿಯ ಸದಸ್ಯ ಕಾರ್ಯದರ್ಶಿ ಸಿ.ಆರ್.ಸಿದ್ದಪ್ಪ ಉಪಸ್ಥಿತರಿದ್ದರು. - - - (ಫೋಟೋಗಳು) - ಅಜಯ್ ರಾವ್ - ವಿಜಯ ರಾಘವೇಂದ್ರ